ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಸಾಮಾಜಿಕ ಸಾಮರಸ್ಯ ಅತಿ ಅವಶ್ಯಕ: ಲಕ್ಷ್ಮಣ ದಸ್ತಿ

0
25

ಕಲಬುರಗಿ :ಪ್ರಸ್ತುತ ದಿನಗಳಲ್ಲಿ ನಾಡಿನ ಸಮಸ್ತ ಜನಾಂಗದಅಭಿವೃದ್ಧಿಗೆಒಕ್ಕಟ್ಟಿನ ಹಕ್ಕೊತ್ತಾಯಅತಿಅವಶ್ಯವಾಗಿದೆ. ಅದರಂತೆ ಸಮಾಜದ ಬಹುಸಂಖ್ಯಾತ ವರ್ಗವಾದ ಮಹಿಳೆಯರ ಅಭ್ಯುದಯವೇ ಸಮಾಜದಅಭ್ಯುದಯಕ್ಕೆ ಬುನಾದಿಯಾಗಿದ್ದು, ಆರೋಗ್ಯಕರ ಸಮಾಜಕ್ಕೆ ಪ್ರಸ್ತುತ ದಿನಗಳಲ್ಲಿ ಸಾಮಾಜಿಕ ಸಾಮರಸ್ಯಅತಿಅವಶ್ಯವಾಗಿದೆಎಂದುಕಲ್ಯಾಣಕರ್ನಾಟಕಜನಪರ ಸಂಘರ್ಷ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ದಸ್ತಿಯವರು ತಿಳಿಸಿದರು.

ರಕ್ಷಾ ಬಂಧನದ ಪ್ರಯುಕ್ತಕಲ್ಯಾಣಕರ್ನಾಟಕಜನಪರ ಸಂಘರ್ಷ ಸಮಿತಿಯ ಮಹಿಳಾ ಘಟಕದ ಸದಸ್ಯರುಅದರಲ್ಲಿ ವಿಶೇಷವಾಗಿ ಮುಸ್ಲಿಂ ಸಹೋದರಿಯರುರಕ್ಷಾ ಬಂಧನದ ನಿಮಿತ್ಯರಾಕಿಕಟ್ಟುವ ಮೂಲಕ ಸಾಮಾಜಿಕ ಸಾಮರಸ್ಯದಕೂಟವನ್ನು ನಿಯೋಜಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಮಾತನಾಡಿದ ದಸ್ತಿಯವರು ಜಗತ್ತಿನಲ್ಲಿತನ್ನದೇಆದಛಾಪು ಮೂಡಿಸಿಕೊಂಡಿರುವ ಭಾರತವು ವಿವಿಧತೆಯಲ್ಲಿ ಏಕತೆಯ ಶಕ್ತಿಯನ್ನು ಈ ಹಿಂದೆಯೂ ಪ್ರದರ್ಶಿಸಿದೆ ಮತ್ತು ಈಗಲೂ ಪ್ರದರ್ಶಿಸುತ್ತಿದೆ, ಇದು ನಮ್ಮ ಹೆಮ್ಮೆಯ ವಿಷಯವೆಂದು ತಿಳಿಸಿದರು.

ರಕ್ಷಾ ಬಂಧನದ ಈ ಪರ್ವಜಗತ್ತಿನ ಮಾನವ ಸಮಾಜಕ್ಕೆ ನಮ್ಮತಾಯಂದಿರ, ಸಹೋದರಿಯರ, ಒಟ್ಟಾರೆ ಮಹಿಳೆಯರ ರಕ್ಷಣೆಗೆ ಬದ್ಧತೆ ಪ್ರದರ್ಶಿಸಲು ಪುರುಷ ಸಮಾಜಕ್ಕೆಸಂದೇಶದ ಪ್ರತೀಕವಾದ ಹಬ್ಬವಾಗಿದೆ. ಪ್ರಸ್ತುತ ದಿನಗಳಲ್ಲಿ ಬಲಿಷ್ಠ ಭಾರತ, ಬಲಿಷ್ಠ ಕರ್ನಾಟಕಅದರಂತೆ ಬಲಿಷ್ಠ ಕಲ್ಯಾಣಕರ್ನಾಟಕ ನಿರ್ಮಾಣಕ್ಕೆ ಸಮಾಜದಎಲ್ಲಾಜನಾಂಗದವರೂಒಕ್ಕಟ್ಟಿನಿಂದ ಹೋರಾಟ ಮಾಡಿದಾಗ ಮಾತ್ರಅಭಿವೃದ್ಧಿಪರ ಸಮಾಜ ನಿರ್ಮಾಣ ಮಾಡಲು ಸಾಧ್ಯಎಂದು ತಿಳಿಸಿದರು.

ಸಾಮಾಜಿಕ ಸಾಮರಸ್ಯದ ಪ್ರತೀಕವಾದರಕ್ಷಾ ಬಂಧನದ ಈ ಕಾರ್ಯಕ್ರಮದಲ್ಲಿಮಹಿಳಾ ಘಟಕದ ಮುಖಂಡರಾದ ಮುನ್ನಿ ಬೇಗಂ, ಮುಮ್ತಾಜ ಬೇಗಂ, ಶಕಿಲಾ ಬೇಗಂ, ವಹಿದಾ ಬೇಗಂ, ಜಗದೇವಿ ಸೇರಿದಂತೆ ನೂರಾರುಜನ ಮಹಿಳೆಯರು ಭಾಗವಹಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here