ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಜಾನಪದ ಜಾತ್ರೆ ನಡೆಸಿ ಈ ಭಾಗದ ಜನಪದ ಕಲೆಗಳು ಪರಿಚಯಿಸುವ ಅಗತ್ಯವಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸುರೇಶ ಬಡಿಗೇರ ತಿಳಿಸಿದರು.
ನಗರದ ಕಲಾ ಮಂಡಳದಲ್ಲಿ ಸೊನ್ನದ ಬುದ್ಧಲೋಕ ಗ್ರಾಮೀಣ ಸಾಂಸ್ಕøತಿಕ ಕಲಾವೃಂದ, ಬೆಂಗಳೂರಿನ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಆಶ್ರಯದಲ್ಲಿ ಸಂಗೀತ ಜಾನಪದ ವೈಭವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆ ಮೇಲೆ ಕಲಾವೃಂದದ ಅಧ್ಯಕ್ಷ ಮಲ್ಲಿನಾಥ ಎಸ್. ಹೆಗಡೆ,ಪಂಚಪೀಠದ ವಾರ್ತಾ ಪ್ರತಿನಿಧಿ ಸಿದ್ರಾಮಪ್ಪ ಆಲಗೂಡಕರ್, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಬಾಬುರಾವ ಕೋಬಾಳ, ಪತ್ರಕರ್ತರಾದ ಮಲ್ಲಿಕಾರ್ಜುನ ವಿ.ಎನ್. ಭೀಮಾಶಂಕರ ಫಿರೋಜಾಬಾದ್, ನಾಟಕ ಅಕಾಡೆಮಿ ಮಾಜಿ ಸದಸ್ಯ ಸಂದೀಪ್ ಬಿ. ಮಾತನಾಡಿದರು.
ಈ ಸಂದರ್ಭದಲ್ಲಿ ಕಲಾವಿದರಾದ ಅಣ್ಣಾರಾವ್ ಶೆಳ್ಳಗಿ, ಬಸಯ್ಯ ಬಿ. ಗುತ್ತೇದಾರ್, ಮಹಾಂತಪ್ಪ ಮಂದೇವಾಲ್, ಬಲಭೀಮ ನೇಲೋಗಿ, ಚೇತನ ಬಿ. ಕೋಬಾಳ, ಜೈಭೀಮ ಸಾವಳಗಿ ಸೇರಿದಂತೆ ಅನೇ ಕ ಕಲಾವಿದರು ತಮ್ಮ ಜಾನಪದ ಗೀತೆ ಪ್ರಸ್ತುತಪಡಿಸಿ ಸಂಗೀತದ ರಸದೌತಣ ಉಣಿಸಿದರು. ಕಲಾವಿದರಾದ ನಾಗಲಿಂಗಯ್ಯ ಸ್ಥಾವರಮಠ, ಅಂಬ್ರಯ್ಯಸ್ವಾಮಿ ನೇಲೋಗಿ, ರವಿ ಮೊರಟಗಿ ತಬಲಾ ಸಾಥ್ ನೀಡಿದರು