ಸುರಪುರ: ಬುದ್ಧ ವಿಹಾರದಲ್ಲಿ ಬುದ್ಧನ ಮೂರ್ತಿ ಧ್ವಂಸ: ಎಸ್ಪಿ ಸಿ.ಬಿ.ವೇದಮೂರ್ತಿ ಭೇಟಿ

0
37

ಸುರಪುರ: ನಗರದ ಗೋಲ್ಡ್‌ನ್ ಕೇವ್ ಗವಿ ಬುದ್ಧ ವಿಹಾರದಲ್ಲಿನ ಬುದ್ಧನ ಮೂರ್ತಿಯನ್ನು ಕಿಡಿಗೇಡಿಗಳು ಧ್ವಂಸಗೊಳಿಸಿದ್ದು,ಸ್ಥಳಕ್ಕೆ ಮಂಗಳವಾರ ರಾತ್ರಿ ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠ ಡಾ:ಸಿ.ಬಿ ವೇದಮೂರ್ತಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಎಸ್ಪಿಯವರು,ಶೀಘ್ರದಲ್ಲಿಯೆ ಮೂರ್ತಿ ಧ್ವಂಸಗೊಳಿಸಿದ ಕಿಡಿಗೇಡಿಗಳನ್ನು ಬಂಧಿಸಲಾಗುವುದು ಎಂದು ತಿಳಿಸಿದರು.ಅಲ್ಲದೆ ಈ ಸ್ಥಳದಲ್ಲಿ ಸಿಸಿ ಟಿವಿ ಅಳವಡಿಸಲು ನಗರಸಭೆಗೆ ತಿಳಿಸಲಾಗುವುದು ಜೊತೆಗೆ ಪೊಲೀಸರ ನಿಯೋಜನೆಯ ಕುರಿತು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಆಗಮಿಸಿದ್ದ ಅನೇಕ ಜನ ದಲಿತ ಹೋರಾಟಗಾರರು ಮಾತನಾಡಿ,ಪೊಲೀಸ್ ಇಲಾಖೆಗೆ ಅನೇಕ ಬಾರಿ ಮನವಿ ಮಾಡಿ ಪೊಲೀಸರ ಗಸ್ತು ಹಾಕುವಂತೆ ವಿನಂತಿಸಿದರು ನಿರ್ಲಕ್ಷಿಸಲಾಗಿದೆ,ಆ ನಿರ್ಲಕ್ಷವೆ ಈ ಘಟನೆಗೆ ಒಂದು ರೀತಿಯಲ್ಲಿ ಕಾರಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.ಅಲ್ಲದೆ ಈ ತಿಂಗಳ ಅಂತ್ಯದೊಳಗೆ ಹೊಸ ಮೂರ್ತಿಯನ್ನು ಪ್ರತಿಷ್ಠಾಪಿಸಬೇಕು ಮತ್ತು ಖಾಯಂ ಪೊಲೀಸರನ್ನು ನಿಯೋಜಿಸಬೇಕು ಇಲ್ಲವಾದಲ್ಲಿ ಇದೇ ೩೧ ರಂದು ಸುರಪುರ ಬಂದ್‌ಗೆ ಕರೆ ನೀಡಲಾಗುವುದು ಎಂದು ತಿಳಿಸಿದರು.

ಶಾಂತ ಬೂದಿಹಾಳರ ಕುರಿತ ಶಾಂತ ಸಿರಿ ಅಭಿನಂದನಾ ಗ್ರಂಥ ಬಿಡುಗಡೆ: ಸುರೇಶ ಸಜ್ಜನ್

ಅದರಂತೆ ಬುಧವಾರ ಬೆಳಿಗ್ಗೆ ಗವಿ ಬುದ್ಧ ವಿಹಾರಕ್ಕೆ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ,ಪಿಐ ಸುನೀಲ ಕುಮಾರ ಮೂಲಿಮನಿ,ನಗರಸಭೆ ಪೌರಾಯುಕ್ತ ಜೀವನಕುಮಾರ ಕಟ್ಟಿಮನಿ ಮತ್ತು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸತ್ಯನಾರಾಯಣ ದರಬಾರಿ,ಆರ್.ಐ ಗುರುಬಸಪ್ಪ ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಈ ಸಂದರ್ಭದಲ್ಲಿ ಭಾಗವಹಿಸಿದ್ದ ಅನೇಕ ಮುಖಂಡರು ಮಾತನಾಡಿ,ಅನೇಕ ದಿನಗಳಿಂದ ಕಿಡಿಗೇಡಿಗಳು ಈ ಸ್ಥಳದಲ್ಲಿ ಅನೈತಿಕ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ.ಇದರ ಕುರಿತು ಪೊಲೀಸ್ ಇಲಾಖೆ ಮತ್ತು ನಗರಸಭೆ ಗಮನಕ್ಕೆ ತಂದರು ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ಇಂತಹ ಅನಾಹುತ ಸಂಭವಿಸಿದೆ.ಕೂಡಲೇ ಹೊಸ ಮೂರ್ತಿಯನ್ನು ಪ್ರತಿಷ್ಠಾಪಿಸಬೇಕು,ಸಿಸಿ ಟಿವಿ ಅಳವಡಿಸಬೇಕು ಮತ್ತು ಪೊಲೀಸರನ್ನು ನಿಯೋಜಿಸಬೇಕು ಈ ಎಲ್ಲಾ ಬೇಡಿಕೆಗಳನ್ನು ಇದೇ ೩೦ರ ಒಳಗೆ ಈಡೇರದಿದ್ದಲ್ಲಿ ಸುರಪುರ ಬಂದ್‌ಗೆ ಕರೆ ನೀಡಲಾಗುವುದು ಎಂದು ಎಚ್ಚರಿಸಿದರು.

ಹೋರಾಟಗಾರರಾದ ಮಲ್ಲಿಕಾರ್ಜುನ ಕ್ರಾಂತಿ,ನಾಗಣ್ಣ ಕಲ್ಲದೇವನಹಳ್ಳಿ,ಭೀಮರಾಯ ಸಿಂದಗೇರಿ,ವೆಂಕಟೇಶ ಹೊಸ್ಮನಿ,ಮಾಳಪ್ಪ ಕಿರದಹಳ್ಳಿ,ರಾಹುಲ್ ಹುಲಿಮನಿ,ಶರಣಪ್ಪ ತಳವಾರಗೇರಾ,ಶಿವಲಿಂಗ ಹಸನಾಪುರ,ಧರ್ಮರಾಜ ಬಡಿಗೇರ,ಮಾನಪ್ಪ ಬಿಜಾಸಪುರ,ಶಿವಕುಮಾರ ಕಟ್ಟಿಮನಿ,ರಾಜು ಕಟ್ಟಿಮನಿ,ವೀರಭದ್ರ ತಳವಾರಗೇರಾ, ಮಹೇಶ ಯಾದಗಿರಿ,ಖಾಜಾ ಅಜ್ಮೀರ್ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here