ಶಹಾಬಾದ: ಮುಖ್ಯರಸ್ತೆಯ ಮೇಲೆ ನೀರು ಸಂಗ್ರಹ

0
16

ಶಹಾಬಾದ: ತಾಲೂಕಿನಲ್ಲಿ ಗುರುವಾರ ಸಾಯಂಕಾಲ ಗುಡುಗು ಸಹಿತ ಧಾರಾಕಾರ ಮಳೆ ಸುರಿಯಿತು.ಇದರಿಂದ ಕಾದು ಹಂಚಿನಂತಾಗಿದ್ದ ಧರೆಯನ್ನು ಮಳೆ ತಂಪಾಗಿಸಿತು.

ಸುಮಾರು ದಿನಗಳಿಂದ ಬಿಸಿಲಿನ ಧಗೆಗೆ ಬೆಂದ ಜನರು ವಾತವಾರಣ ತಾಂಪಾಗಿದ್ದರಿಂದ ನಿಟ್ಟುಸಿರು ಬಿಡುವಂತಾಯಿತು.ಸುಮಾರು ಅರ್ಧ ಗಂಟೆ ಸುರಿದ ಮಳೆಯಿಂದ ನಗರದ ಬಸವೇಶ್ವರ ವೃತ್ತದಿಂದ ಶಾಸ್ತ್ರಿ ವೃತ್ತದವರೆಗಿನ ರಸ್ತೆ ಸಂಪೂರ್ಣ ಜಲಾವೃತಗೊಂಡು ಸಂಚಾರಕ್ಕೆ ತೊಂದರೆಯಾಯಿತು.

Contact Your\'s Advertisement; 9902492681

ಅಲ್ಲದೇ ನಗರದ ಕೆಲವು ಪ್ರದೇಶಗಳಲ್ಲಿ ಚರಂಡಿ ತುಂಬಿಕೊಂಡು ರಸ್ತೆಯ ಮೇಲೆ ನೀರು ಹರಿದ ಪರಿಣಾಮ ಪ್ಲಾಸ್ಟಿಕ್, ಕಸ-ಕಡ್ಡಿ ರಸ್ತೆಯ ಆವರಿಸಿಕೊಂಡಿತು. ನಗರದ ಮುಖ್ಯರಸ್ತೆಯ ಹನುಮಾನ ಮಂದಿರ ಮುಂಭಾಗದಲ್ಲಿ ಮಳೆ ನೀರು ಹಾಗೂ ಕೊಳಚೆ ನೀರು ಹರಿದು ರಸ್ತೆಯ ಮೇಲೆಲ್ಲಾ ಸಂಗ್ರಹವಾಗಿ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಯಿತು.

ಇಲ್ಲಿ ಈಗಾಗಲೇ ಕೈಗೊಂಡ ಚರಂಡಿ ಕಾಮಗಾರಿ ಅವೈಜ್ಞಾನಿಕ ನಿರ್ಮಾಣ ಮಾಡಿರುವುದರಿಂದ ರಸ್ತೆಯ ಮೇಲೆ ನೀರು ನಿಲ್ಲುವಂತಾಗಿದೆ.ಮುಖ್ಯರಸ್ತೆಯಾಗಿರುವುದರಿಂದ ಮಲಮೂತ್ರದಿಂದ ಕೂಡಿದ ಕೊಳಚೆ ನೀರನ್ನು ದಾಟಿಕೊಂಡು ಹೋಗುವ ಪ್ರಸಂಗ ಸಾರ್ವಜನಿಕರದ್ದಾಗಿದೆ. ಮಳೆ ಬಂದಾಗಲೊಮ್ಮೆ ಸಾರ್ವಜನಿಕರು ಎಲ್ಲಿಲ್ಲದ ಸಂಕಟ ಪಡುತ್ತಿದ್ದಾರೆ.

ಈ ಬಗ್ಗೆ ಅನೇಕ ಬಾರಿ ದೂರು ಸಲ್ಲಿಸಿದರೂ ಯಾವುದೇ ಕ್ರಮಕೈಗೊಂಡಿಲ್ಲ.ಅಲ್ಲದೇ ಶಾಸಕ ಬಸವರಾಜ ಮತ್ತಿಮಡು ಗಮನಕ್ಕೂ ತಂದರೂ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಕೇವಲ ಜನರಿಗೆ ಮಳ್ಳು ಮಾಡುತ್ತಿದ್ದಾರೆ ಹೊರತು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಕಳಪೆ ಚರಂಡಿ, ರಸ್ತೆ ಕಾಮಗಾರಿ ನಡೆದರೂ ಯಾರು ಕೇಳೊರಿಲ್ಲದಂತಾಗಿದೆ.

ಈ ಕೂಡಲೇ ಶಾಸಕರು ಕೂಡಲೇ ಇತ್ತ ಗಮನಹರಿಸಬೇಕು.ಸಾರ್ವಜನಿಕರ ಸಮಸ್ಯೆ ಬಗೆಹರಿಸಬೇಕೆಂದು ಬಡಾವಣೆಯ ಜನರು ಆಗ್ರಹಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here