ರಂಗಭೂಮಿಯ ಎಂದೂ ಮರೆಲಾಗದ ಪತ್ರಕರ್ತ ಗುಡಿಹಳ್ಳಿ ನಾಗರಾಜ..!

0
14

ಗುಡಿಹಳ್ಳಿ ನಾಗರಾಜ ನನಗೆ ಪರಿಚಯವಾಗಿದ್ದು ‘ಮೂಡಣ’ ಪತ್ರಿಕೆಯ ಅಶೋಕ ಕಾಶೆಟ್ಟಿಯಿಂದ. ಆಗ ಅವರು ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆಗೆ ನಿಂತಿದ್ದರು. ಅಂತಹ ಪ್ರತಿಭಾನ್ವಿತ ಪತ್ರಕರ್ತರನ್ನು ಬಿಟ್ಟು ನಾವು ಯಾರಿಗೆ ಮತ ಹಾಕಬೇಕು ಎಂದು ನಾವೆಲ್ಲ ಗೆಳೆಯರು ಮಾತಾಡಿಕೊಂಡು, ಗುಡಿಹಳ್ಳಿ ನಾಗರಾಜರಿಗೇ ಮತ ಹಾಕಿ ಆರಿಸಿದ್ದೆವು.

ಗುಡಿಹಳ್ಳಿ ನಾಗರಾಜ ಪತ್ರಕರ್ತರ ಸಂಘಕ್ಕೆ ದುಡಿದರು. ಏನೆಲ್ಲಾ ಕೆಲಸ–ಕಾರ್ಯ ಮಾಡಿದರು. ಅಂತಹ ಗುಡಿಹಳ್ಳಿ ನಾಗರಾಜ ಈಗ ತೀರಿದ್ದಾರೆ. ಅವರಿಗೆ ಗೌರವವನ್ನು ಅರ್ಪಿಸುತ್ತಲೇ ಈ ಬರಹವನ್ನು ಅವರ ನುಡಿ ನಮನಕ್ಕೇ ಮೀಸಲಾಗಿಸಿದ್ದೇನೆ.ಮೊದಲು ಅವರಿಗೆ ಗೌರ ವವನ್ನು ಸಲ್ಲಿಸುತ್ತಾ ಈ ಬರಹವನ್ನು ಬರೆಯುತ್ತಿದ್ದೇನೆ.

Contact Your\'s Advertisement; 9902492681

ವೃತ್ತಿ ರಂಗಭೂಮಿಯ ಬಗ್ಗೆ ಅಕ್ಕರಾಸ್ಥೆಯಿಂದ ಬರೆಯುತ್ತಿದ್ದ ಹಿರಿಯ ಪತ್ರಕರ್ತ ಗುಡಿಹಳ್ಳಿ ನಾಗರಾಜ ತೀರಿದ್ದಾರೆ. ಅವರಿಗೆ ಗೌರವವನ್ನು ನೀಡುತ್ತಾ ಈ ‘ನುಡಿ ನಮನ’ವನ್ನು ಅರ್ಪಿಸುತ್ತಿದ್ದೇನೆ.

ಕನ್ನಡ ಪತ್ರಿಕೋದ್ಯಮದ ವಿವಿಧ ಮಜಲುಗಳನ್ನು ಬಲ್ಲವರಾಗಿದ್ದ ಗುಡಿಹಳ್ಳಿ ನಾಗರಾಜ ರಂಗಭೂಮಿಯ ಬಗ್ಗೆ ನಿಯಮಿತವಾಗಿ ಬರೆಯುತ್ತಿದ್ದ ಹಿರಿಯ ಪತ್ರಕರ್ತ ಗುಡಿಹಳ್ಳಿ ನಾಗರಾಜ.

ಕರ್ನಾಟಕದ ವೃತ್ತಿ ರಂಗಭೂಮಿಯ ಬಗ್ಗೆ ಅಳವಾದ ಜ್ಞಾನ ಹೊಂದಿದ್ದ, ಹಲವು ನಟ-ನಟಿಯರ ಜೀವನಚರಿತ್ರೆಗಳನ್ನು ಬರೆದಿದ್ದ ಹಿರಿಯ ಪತ್ರಕರ್ತ ಗುಡಿಹಳ್ಳಿ ನಾಗರಾಜ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಪತ್ನಿ ಮತ್ತು ಇಬ್ಬರು ಮಕ್ಕಳು ಅಗಲಿದ್ದಾರೆ. ಕನ್ನಡ ಪತ್ರಿಕೋದ್ಯಮದ ವಿವಿಧ ಮಜಲುಗಳನ್ನು ಬಲ್ಲವರಾಗಿದ್ದ ಗುಡಿಹಳ್ಳಿ ನಾಗರಾಜ ರಂಗಭೂಮಿಯ ಬಗ್ಗೆ ನಿಯಮಿತವಾಗಿ ಬರೆಯುತ್ತಿದ್ದವರು. ಪ್ರಜಾವಾಣಿ ಪತ್ರಿಕೆಯಲ್ಲಿ ಸುದೀರ್ಘ ಕಾಲ ಕೆಲಸ ಮಾಡಿದವರು.

ಕನ್ನಡ ಸಾಂಸ್ಕೃತಿಕ ಲೋಕದ ಜೊತೆಗೆ ನಿಕಟ ಒಡನಾಟ ಇರಿಸಿಕೊಂಡಿದ್ದ ಗುಡಿಹಳ್ಳಿ ನಾಗರಾಜ, ಕನ್ನಡ ರಂಗಭೂಮಿ ಕುರಿತು ಬರೆದ ಲೇಖನಗಳು ಮತ್ತು ಕೃತಿಗಳು ಕನ್ನಡ ಸಾಹಿತ್ಯ ಲೋಕಕ್ಕೆ ಉತ್ತಮ ಕೊಡುಗೆಗಳಾಗಿವೆ.

ಅವರನ್ನು ಕನ್ನಡ ವೃತ್ತಿರಂಗಭೂಮಿಯ ಇತಿಹಾಸಕಾರ ಎಂದು ಕರೆದರೆ ತಪ್ಪಾಗಲಾರದು. ಎಲೆಮರೆಯ ಕಾಯಿಯಂತೆಯೇ ಸೇವೆ ಸಲ್ಲಿಸುತ್ತಿದ್ದ ಅನೇಕ ರಂಗಕರ್ಮಿಗಳನ್ನು ತಮ್ಮ ಲೇಖನಗಳ ಮೂಲಕ ಪರಿಚಯಿಸಿದವರು ಗುಡಿಹಳ್ಳಿ ನಾಗರಾಜ. ಅವರ ನಿಧನದಿಂದ ಕನ್ನಡ ಮಾಧ್ಯಮ ಪ್ರಪಂಚ ಹಾಗೂ ಸಾಂಸ್ಕೃತಿಕ ಲೋಕ ಒಬ್ಬ ಮಹತ್ವದ ಬರಹಗಾರನನ್ನು ಕಳೆದುಕೊಂಡಂತಾಗಿದೆ.

ಅಲ್ಲದೇ ಪತ್ರಕರ್ತರ ಸಂಘಟನೆಯಲ್ಲಿಯೂ ಗುಡಿಹಳ್ಳಿ ನಾಗರಾಜ ಸಕ್ರಿಯವಾಗಿ ತೊಡಗಿಸಿಕೊಂಡಿದ್ದವರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘಟನೆಯಲ್ಲಿ ಅವರ‌ ಸೇವೆ ಮರೆಯಲಾಗದು.

ಕರ್ನಾಟಕ ರಂಗಭೂಮಿಯ ಬಗ್ಗೆ ಪ್ರೀತಿ ಮತ್ತು ಅಭಿಮಾನಗಳನ್ನು ಹೊಂದಿದ್ದ ಗುಡಿಹಳ್ಳಿ ನಾಗರಾಜ, ಹದಿನೈದಕ್ಕೂ ಹೆಚ್ಚು ಪುಸ್ತಕಗಳನ್ನು ಹೊರತಂದಿದ್ದಾರೆ. ರಂಗನೇಪಥ್ಯ ಎಂಬ ಮಾಸಪತ್ರಿಕೆ ಪ್ರಕಟಿಸುತ್ತಿದ್ದ ಅವರು, ನಾಲ್ಕು ರಂಗತಂಡಗಳ ನೇತೃತ್ವವನ್ನೂ ವಹಿಸಿಕೊಂಡಿದ್ದರು.

ರಂಗನಾಟಕ ಪ್ರಯೋಗ ಸಾರ್ಥಕತೆ, ಮಾಲತಿಶ್ರೀ ಮೈಸೂರು ಆತ್ಮಕತೆ (ತೆರೆ ಸರಿದಾಗ), ಮರಿಯಮ್ಮನಹಳ್ಳಿ ಡಾ.ನಾಗರತ್ನಮ್ಮ ಆತ್ಮಕತೆ (ರಂಗಸಿರಿ), ಗುಬ್ಬಿ ವೀರಣ್ಣ, ಡಾ.ಲಕ್ಷ್ಮಣದಾಸ್, ಗಾನಕೋಗಿಲೆ, ಅನುಪಮ ಅಭಿನೇತ್ರಿ ಸುಭದ್ರಮ್ಮ ಮನ್ಸೂರು, ಮೇಕಪ್‍ಮನ್ ಸುಬ್ಬಣ್ಣ, ರಂಗನೇವರಿಕೆ, ರಂಗಸಂದರ್ಶನ, ರಂಗದಿಗ್ಗಜರು, ಚಿಂದೋಡಿ ಲೀಲಾ, ಕಲಾಗ್ರಾಮ, ಜನಪರ ರಂಗಭೂಮಿ, ರಂಗಸೆಲೆ ಸೇರಿದಂತೆ ಹಲವು ಪುಸ್ತಕಗಳನ್ನು ಬರೆದಿದ್ದಾರೆ.

ಕರ್ನಾಟಕ ನಾಟಕ ಅಕಾಡೆಮಿಯ ಜಿಲ್ಲಾ ರಂಗಮಾಹಿತಿ ಮಾಲಿಕೆ ಹಾಗೂ ರಂಗಸಂಪನ್ನರು ಮಾಲಿಕೆಯ 40 ಕೃತಿಗಳು, ವೃತ್ತಿರಂಗದ ಮಹತ್ತರ ನಾಟಕಗಳು, ಶತಮಾನದ ಶಕಪುರುಷ ಏಣಗಿ ಬಾಳಪ್ಪ, ಪಿ.ಬಿ.ಧುತ್ತರಗಿ ಆಯ್ದ ನಾಟಕಗಳು ಸೇರಿದಂತೆ ಹಲವು ಕೃತಿಗಳನ್ನು ಸಂಪಾದಿಸಿದ್ದಾರೆ.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಘಟಕದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಪ್ರೆಸ್‍ಕ್ಲಬ್ ಉಪಾಧ್ಯಕ್ಷ, ಬಂಡಾಯ ಸಾಹಿತ್ಯ ಸಂಘಟನೆಯ ರಾಜ್ಯ ಸಂಚಾಲಕರಾಗಿ, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದವರು. ರಾಜ್ಯೋತ್ಸವ ಪ್ರಶಸ್ತಿ, ಕೆಂಪೇಗೌಡ, ಮುರುಘರಾಜೇಂದ್ರ, ನಾಟಕ ಅಕಾಡೆಮಿ ಸೇರಿದಂತೆ ಹಲವು ಪ್ರಶಸ್ತಿಗಳು ಅವರ ಬರಹ ಸೇವೆಗೆ ಸಂದಿದ್ದು ಆ ಪ್ರಶಸ್ತಿಗಳ ಗೌರವವನ್ನು ಹೆಚ್ಚಿಸಿವೆ ಅಂದರೆ ತಪ್ಪಾಗಲಾರದು.

ವೃತ್ತಿ, ಹವ್ಯಾಸಿ, ಗ್ರಾಮೀಣ ಸೇರಿದಂತೆ ಸಮಗ್ರ ರಂಗಭೂಮಿ ಬಗ್ಗೆ ಅಧಿಕೃತವಾಗಿ ಮಾತನಾಡಬಲ್ಲವರಾಗಿದ್ದರು ಗುಡಿಹಳ್ಳಿ ನಾಗರಾಜ ಅವರು. ರಂಗಭೂಮಿ ಕುರಿತ ಇವರ ಬರಹಗಳು ರಂಗ ಇತಿಹಾಸದಲ್ಲಿ ಹೊಸ ಹಾದಿ ನಿರ್ಮಿಸಿವೆ. ಅಂತಹ ಹದಿನೈದಕ್ಕೂ ಹೆಚ್ಚು ರಂಗಕೃತಿ ರಚಿಸಿದ್ದಾರೆ. ರಂಗತಂಡಗಳ ರೂವಾರಿಯಾಗಿ ರಾಜ್ಯದ ನಾಲ್ಕಾರು ರಂಗತಂಡಗಳ ತೆರೆಯ ಹಿಂದಿನ ಶಕ್ತಿಯಾಗಿ ತೊಡಗಿಸಿಕೊಂಡಿದ್ದು- ಕಡೆಗಣಿಸಲ್ಪಟ್ಟ ನೂರಾರು ಕಲಾವಿದರನ್ನು ಬೆಳಕಿಗೆ ತಂದಿದ್ದಾರೆ.

ಮುಖ್ಯವಾಹಿನಿಯಲ್ಲಿ ಅವಕಾಶ ಕಲ್ಪಿಸಿದ್ದಾರೆ. ದಾವಣಗೆರೆ (ಮತ್ತೆ ಈಗ ಬಳ್ಳಾರಿ) ಜಿಲ್ಲೆಯ ಹರಪನಹಳ್ಳಿ, ತಾಲ್ಲೂಕು ಗುಡಿಹಳ್ಳಿಯ ನಾಗರಾಜ ಅವರು, ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಎಂ.ಎ.ಇಂಗ್ಲಿಷ್ ಪದವಿ ಪಡೆದು, ಹರಪನಹಳ್ಳಿಯಲ್ಲಿ ಮೂರು ವರ್ಷ (1980-83) ಉಪನ್ಯಾಸಕರಾಗಿದ್ದರು. 1983 ರಲ್ಲಿ ಪ್ರಜಾವಾಣಿ, ಸುಧಾ, ಡೆಕ್ಕನ್‍ ಹೆರಾಲ್ಡ್ ಪತ್ರಿಕಾ ಸಮೂಹ ಸೇರಿ 31 ವರ್ಷ ಕಾಲ ವಿವಿಧ ಸಂಪಾದಕೀಯ ಹುದ್ದೆ ನಿರ್ವಹಿಸಿ ಸುದ್ದಿ ಸಂಪಾದಕರಾಗಿ ನಿವೃತ್ತರಾಗಿ ಬೆಂಗಳೂರಿನಲ್ಲಿ ನೆಲೆಸಿದ್ದರು.

ನಟ, ನಿರ್ದೇಶಕರಾಗಿ ರಂಗಪ್ರವೇಶ ಮಾಡಿ ಸಂಘಟಕರಾಗಿ ಬೆಳೆದ ಗುಡಿಹಳ್ಳಿ ನಾಗರಾಜವರು ರಂಗ ಬರವಣಿಗೆಗೆ ಜೀವನವನ್ನು ಮುಡಿಪಾಗಿಟ್ಟರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಅಧ್ಯಕ್ಷ, ಪ್ರೆಸ್‍ಕ್ಲಬ್ ಉಪಾಧ್ಯಕ್ಷ, ಬಂಡಾಯ ಸಾಹಿತ್ಯ ಸಂಘಟನೆ ರಾಜ್ಯ ಸಂಚಾಲಕ, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯರಾಗಿದ್ದವರು. ರಾಜ್ಯೋತ್ಸವ, ಕೆಂಪೇಗೌಡ, ಮುರುಘರಾಜೇಂದ್ರ, ನಾಟಕ ಅಕಾಡೆಮಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾದವರು. ಹರಪನಹಳ್ಳಿ ತಾಲ್ಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದವರು. ರಂಗ ದಿಗ್ಗಜರ ಹಲವಾರು ವ್ಯಕ್ತಿಚಿತ್ರಗಳು ಶಾಲೆ, ಕಾಲೇಜು ಪಠ್ಯಪುಸ್ತಕಗಳಲ್ಲಿ ಪಾಠಗಳಾಗಿವೆ. ಗುಡಿಹಳ್ಳಿ ಬರೆದದ್ದಕ್ಕಿಂತ ಬರೆಯಿಸಿದ್ದೇ ಹೆಚ್ಚು, ರಂಗದ ಮೇಲೆ ಮೆರೆದದ್ದಕ್ಕಿಂತ ತೆರೆಯ ಹಿಂದೆ ದುಡಿದದ್ದೇ ಹೆಚ್ಚು. ರಂಗಭೂಮಿ ಬಿಟ್ಟರೆ ಮತ್ತೇನು ಗೊತ್ತಿಲ್ಲ ಎಂಬಂತೆ ಬದುಕುತ್ತಿದ್ದ ನಿಷ್ಕಾಮ ರಂಗಕರ್ಮಿ.

ಗುಡಿಹಳ್ಳಿ ನಾಗರಾಜ್ ಅವರ ರಂಗಕೃತಿಗಳು: ರಂಗನಾಟಕ ಪ್ರಯೋಗ ಸಾರ್ಥಕತೆ, ತೆರೆ ಸರಿದಾಗ (ಮಾಲತಿಶ್ರೀ ಮೈಸೂರು ಆತ್ಮಕತೆ), ರಂಗಸಿರಿ (ಮರಿಯಮ್ಮನಹಳ್ಳಿ ಡಾ.ನಾಗರತ್ನಮ್ಮ ಆತ್ಮಕತೆ), ಗುಬ್ಬಿ ವೀರಣ್ಣ, ಡಾ.ಲಕ್ಷ್ಮಣದಾಸ್, ಗಾನಕೋಗಿಲೆ,ಅನುಪಮ ಅಭಿನೇತ್ರಿ ಸುಭದ್ರಮ್ಮ ಮನ್ಸೂರು, ಮೇಕಪ್‍ಮನ್ ಸುಬ್ಬಣ್ಣ, ರಂಗನೇವರಿಕೆ, ರಂಗಸಂದರ್ಶನ, ರಂಗದಿಗ್ಗಜರು, ಚಿಂದೋಡಿ ಲೀಲಾ, ಕಲಾಗ್ರಾಮ, ಜನಪರ ರಂಗಭೂಮಿ, ರಂಗಸೆಲೆ ಇತ್ಯಾದಿ.

ಅವರ ಸಂಪಾದಿತ ಕೃತಿಗಳು: ಕರ್ನಾಟಕ ನಾಟಕ ಅಕಾಡೆಮಿಯ ಜಿಲ್ಲಾ ರಂಗಮಾಹಿತಿ ಮಾಲಿಕೆ, ಹಾಗೂ ರಂಗಸಂಪನ್ನರು ಮಾಲಿಕೆಯ 40 ಕೃತಿಗಳು, ವೃತ್ತಿ ರಂಗದ ಮಹತ್ತರ ನಾಟಕಗಳನ್ನು ರಚಿಸಿದವರು ಗುಡಿಹಳ್ಳಿ ನಾಗರಾಜವರು.

(ರಾಮಕೃಷ್ಣ ಮರಾಠೆ ಜತೆಗೆ), ಶತಮಾನದ ಶಕಪುರುಷ ಏಣಗಿ ಬಾಳಪ್ಪ (ಈ ಮೂರೂ ಸರಣಿ ನಾಟಕ ಅಕಾಡೆಮಿ ಪ್ರಕಟಣೆ), ಪಿ.ಬಿ.ಧುತ್ತರಗಿ ಆಯ್ದ ನಾಟಕಗಳು (ಪುಸ್ತಕ ಪ್ರಾಧಿಕಾರದ ಪ್ರಕಟಣೆ) ಸೇರಿದಂತೆ ಹಲವು ಕೃತಿಗಳು ಪ್ರಕಟವಾಗಿವೆ. ಹಲವಾರು ಪ್ರಶಸ್ತಿ ಗೌರವಗಳು ಶ್ರೀಯುತ ಗುಡಿಹಳ್ಳಿ ನಾಗರಾಜವರಿಗೆ ಲಭಿದ್ದೇನು ಸೋಜಿಗೆಯಲ್ಲ.

ಇಂತಹ ನಮ್ಮ ಗುಡಿಹಳ್ಳಿ ನಾಗರಾಜ ಈಗ ತೀರಿದ್ದಾರೆ. ಅವರ ಕೃತಿಗಳು ಮತ್ತು ಅವರ ವೃತ್ತಿ ರಂಗಭೂಮಿಯ ಕೊಡುಗೆಯೇನೂ ತೀರಿಲ್ಲ, ಅಲ್ಲದೇ ನಮ್ಮ ಮುಂದೆ ಅವರ ಬರಹಗಳು ಮುಂದಿವೆ..!

# ಕೆ.ಶಿವು.ಲಕ್ಕಣ್ಣವರ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here