ಮಂಗಳೂರು; ನೂತನ ಶಿಕ್ಷಣ ನೀತಿ NEP ಕುರಿತ ವಿಚಾರ ಗೋಷ್ಠಿ ನಡೆಯುತ್ತಿದ್ದ ಮಂಗಳ ಸಭಾಂಗಣಕ್ಕೆ ಮುತ್ತಿಗೆಗೆ ಯತ್ನಿಸಿದ ಕ್ಯಾಂಪಸ್ ಫ್ರಂಟ್ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರತಿಭಟನಾ ನಿರತ ಕಾರ್ಯಕರ್ತರನ್ನು ಗೇಟ್ ಬಳಿಯೇ ತಡೆದ ಪೊಲೀಸರು, ವಾಗ್ವಾದದ ಮಧ್ಯೆಯೇ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ.
ಪೊಲೀಸರು ಮತ್ತು ಕಾರ್ಯಕರ್ತರ ಮಧ್ಯೆ ನೂಕಾಟ ತಳ್ಳಾಟ ನಡೆದಿದ್ದು, ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು.
ನೂತನ ಶಿಕ್ಷಣ ನೀತಿಯ ಉದ್ಘಾಟನಾ ಸಮಾರಂಭದಲ್ಲಿ ಉನ್ನತ ಶಿಕ್ಷಣ ಸಚಿವ ಅಶ್ವತ್ ನಾರಾಯಣ್ ಭಾಗಿಯಾಗಿದ್ದು, ಈ ಕಾರ್ಯಕ್ರಮಕ್ಕೆ ಸಿಎಫ್ ಐ ಕಾರ್ಯಕರ್ತರು ಘೇರಾವ್ ಹಾಕಲು ಪ್ರಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ತಡೆ ಹಿಡಿದು ಬಂಧಿಸಿ ಬಳಿಕ ಬಿಡುಗಡೆಗೊಳಿಸಲಾಯಿತು.
ಪ್ರತಿಭಟನೆಯಲ್ಲಿ ಸಿ ಎಫ್ ಐ ರಾಜ್ಯ ಕೋಶಾಧಿಕಾರಿ ಸವಾದ್ ಕಲ್ಲರ್ಪೆ,ಸಮಿತಿ ಸದಸ್ಯೆಯರಾದ ಮುರ್ಶಿದಾ ಬಾನು, ಫಾತಿಮ ಉಸ್ಮಾನ್ ದ.ಕ ಜಿಲ್ಲಾಧ್ಯಕ್ಷ ಹಸನ್ ಸಿರಾಜ್, ಮಂಗಳೂರು ನಗರಾಧ್ಯಕ್ಷ ಇನಾಯತ್ ಅಲಿ, ಗ್ರಾಮಾಂತರ ಅಧ್ಯಕ್ಷ ಶರಫುದ್ದೀನ್
ಹೊಸ ಶಿಕ್ಷಣ ನೀತಿಯನ್ನು ರಾಜ್ಯದಲ್ಲಿ ಅನುಷ್ಠಾನಕ್ಕೆ ತರುವುದನ್ನು ಕ್ಯಾಂಪಸ್ ಫ್ರಂಟ್ ಸಹಿಸವುದಿಲ್ಲ. ವಿದ್ಯಾರ್ಥಿ ಮುಖಂಡರಲ್ಲಿ ಅಥವಾ ಸಂಘಟನೆಗಳಲ್ಲಿ ಅಭಿಪ್ರಾಯ ಸಂಘ್ರಹಿಸದೇ ಎನ್ ಇ ಪಿ ಯನ್ನು ಜಾರಿಗೆ ತರಲಾಗಿದೆ. ಉನ್ನತ ಶಿಕ್ಷಣ ಸಚಿವರು ನಮ್ಮ ಅಭಿಪ್ರಾಯಕ್ಕೆ ಅವಕಾಶ ನೀಡಬೇಕು ಇಲ್ಲದಿದ್ದರೆ ಮುಂದಕ್ಕೆ ಉದ್ಘಾಟನೆಗೊಳ್ಳುವ ಎಲ್ಲಾ ಕರ್ಯಕ್ರಮಕ್ಕೆ ತಡೆಯಲಿದ್ದೇವೆ.- ಅಥಾವುಲ್ಲಾ ಪೂಂಜಲಕಟ್ಟೆ, ರಾಜ್ಯಾಧ್ಯಕ್ಷರು, ಕ್ಯಾಂಪಸ್ ಫ್ರಂಟ್, ಕರ್ನಾಟಕ.