ಪಾಲಿಕೆ ಚುನಾವಣೆ: 8 ಮತ್ತಗಟ್ಟೆಗಳು ಅತೀ ಸೂಕ್ಷ್ಮ ಮತಗಟ್ಟೆ ಘೋಷಣೆಗೆ ಒತ್ತಾಯ

0
87

ಕಲಬುರಗಿ: ಮಹಾನಗರ ಪಾಲಿಕೆ ಚುನಾವಣೆ ನಿಮಿತ್ತ ವಾರ್ಡ ನಂ.29 ದಲ್ಲಿ ಒಟ್ಟು 8 ಮತಗಟ್ಟೆಗಳನ್ನು ಅತೀ ಸುಕ್ಷ್ಮ ಮತಗಟ್ಟೆ ಘೋಷಿಸಬೇಕೆಂದು Human Aid Organization Kalaburagi Unit ಜಿಲ್ಲಾಧಿಕಾರಿಗೆ ಮನವಿ ಒತ್ತಾಯಿಸಿದೆ.

ಎಲ್ಲಾ ಪಕ್ಷದ ಹಾಗೂ ಸ್ವತಂತ್ರ ಅಭ್ಯರ್ಥಿಗಳು  ಸಾಮಾನ್ಯ ಜನರ ಮೇಲೆ ಪ್ರಭಾವ ಬೀರಲು ಗುಂಡಾಗಳು ಮತ್ತು ಕ್ರಿಮಿನಲ್ ರೆಕಾರ್ಡ್ ಹೊಂದಿದ ವ್ಯಕ್ತಿಗಳಿಗೆ ಆಶ್ರಯ ನೀಡಿ ಜನರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ, ಬೋಗಸ ಓಟುಗಳು ಮಾಡಲು ಅಕ್ರಮ ನಕಲಿ ಗುರುತಿನ ಚೀಟಿಗಳು ತಯಾರು ಮಾಡುತಿರುವುದಾಗಿ ಗಮನಕ್ಕೆ ಬಂದಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

Contact Your\'s Advertisement; 9902492681

29 ನೇ ವಾರ್ಡ ನ ಮತಗಟ್ಟೆ ಸಂಖ್ಯೆ 233, 234, 235, 236, 237, 238, 239 & 240 ಎಲ್ಲಾ ಮತಗಟ್ಟೆಗಳು ಅತ್ಯಂತ ಸೂಕ್ಷ್ಮ ಮತಗಟ್ಟೆಗಳೆಂದು ಘೋಷಿಸಿ ಮತ್ತು ಸದರಿ ಮತಗಟ್ಟೆಗಳಿಗೆ ಪೋಲಿಸ್ ಬಂದೋಬಸ್ತ್, ಮಹಿಳಾ ಪೊಲೀಸ್, ಪೋಲಿಸ್ ವ್ಯಾನ್ಸ್ ಇತ್ಯಾದಿಗಳನ್ನು ಒದಗಿಸಿ ಸದರಿ ಚುನಾವಣೆ  ಸುಗಮ ರೀತಿಯಲ್ಲಿ ನಡೆಯಲು ಅನುವು ಮಾಡಿಕೊಡಲು  ಕೋರಿತ್ತಾರೆ.

Human Aid Organization Kalaburagi Uniti ಅಧ್ಯಕ್ಷ ಅಜೀಂ ಶೇಖ, ಉಪಾಧ್ಯಕ್ಷ ಅಲಂದಾರ ಜೈದಿ, ಮಹ್ಮದ ಗೌ, ಸುನೀಲ್ ಮಾರುತಿ ಮಾನಪಡೆ, ಸಿದ್ದಲಿಂಗ ಪಾಳಾ, ಮೈಲಾರಿ ದೊಡ್ಡಮನಿ, ಸಚಿನ್ ಜಾಧವ ಇದ್ದರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here