ಬುದ್ಧನ ಮೂರ್ತಿ ಭಗ್ನ: ಕಿಡಿಗೇಡಿಗಳ ಬಂಧನಕ್ಕೆ ಆಗ್ರಹಿಸಿ 2 ರಂದು ಸುರಪುರ ಬಂದ್

0
13

ಸುರಪುರ: ನಗರದ ಗೋಲ್ಡನ್ ಕೇವ್ ಬುದ್ದ ವಿಹಾರದಲ್ಲಿ ಮಹಾತ್ಮ ಗೌತಮ್ ಬುದ್ದರ ಮೂರ್ತಿಯನ್ನು ದ್ವಂಸಗೋಳಿಸಿರುವ ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಕೂಡಲೆ ಬಂದಿಸಬೆಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಲು ನಗರದ ಬುದ್ದ ವಿಹಾರದಲ್ಲಿ ದಲಿತ ಮತ್ತು ಪ್ರಗತಿಪರ ಸಾಮೂಹಿಕ ಸಂಘಟನೆಗಳ ಮುಖಂಡರ ನೆತೃತ್ವದಲ್ಲಿ ಸೋಮವಾರ ಪೂರ್ವಬಾವಿ ಸಭೆಯನ್ನು ಹಮ್ಮಿಕೊಳ್ಳುಲಾಗಿತ್ತು.

ಸಭೆಯ ದಿವ್ಯ ಸಾನಿದ್ಯವನ್ನು ಪೂಜ್ಯ ವರಜ್ಯೋತಿ ಬಂತೆಜಿಯವರು ವಹಿಸಿದ್ದರು. ಸಭೆಯಲ್ಲಿ ಭಾಗವಹಿಸಿದ್ದ ಅನೇಕ ಮುಖಂಡರು ಮಾತನಾಡಿ,ಬುದ್ಧನ ಮೂರ್ತಿಯನ್ನು ಭಗ್ರಗೊಳಿಸಿದ ಕಿಡಿಗೇಡಿಗಳನ್ನು ಬಂಧಿಸುವಲ್ಲಿ ಪೋಲಿಸ್ ಇಲಾಖೆಯು ಸಂಪೂರ್ಣ ವಿಫಲವಾಗಿದೆ,

Contact Your\'s Advertisement; 9902492681

ಘಟನೆ ಕುರಿತು ೨೪ನೇ ತಾರೀಖಿನಂದೆ ಪ್ರಕರಣ ದಾಖಲಾಗಿದ್ದರು ಯಾವೂದೇ ಪ್ರಯೋಜನೆ ಆಗಿಲ್ಲ ಸುರಪುರದಲ್ಲಿ ಡಿ,ವಾಯ್,ಎಸ್,ಪಿ ಯವರಿದ್ದರು ಉಪಯೋಗವಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಯಾವುದೇ ಕಾರಣಕ್ಕೂ ನಿರ್ಲಕ್ಷಿಸಿದ ಬುದ್ದನ ಮೂರ್ತಿಯನ್ನು ದ್ವಂಸಗೋಳಿಸಿದ ಸಮಾಜಗಾತುಕರನ್ನು ಕೂಡಲೇ ಬಂದಿಸಬೇಕು ಎಂದು ಒತ್ತಾಯಿಸಿ ಇದೇ ಸಪ್ಟೆಂಬರ್ ೦೨ ರಂದು ಸಂಪೂರ್ಣ ಸುರಪೂರ ಬಂದ್ ಮಾಡಿ ಪ್ರತಿಭಟನೆ ನಡೆಸಲು ತಿರ್ಮಾನಿಸಲಾಗಿದೆ.

ಅಂದಿನ ಹೊರಾಟದ ಮೂಲಕ ಕೂಡಲೇ ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸಲು ಒತ್ತಾಯಿಸಲಾಗುವುದು, ಪುನಃ ವಿಫಲವಾದರೆ ಸಪ್ಟೆಂಬರ್ ೦೬ ರಂದು ಜಿಲ್ಲಾಧಿಕಾರಿಗಳ ಕಛೇರಿಮುಂದೆ ದರಣಿ ಸತ್ಯಾಗ್ರಹವನ್ನು ಎಲ್ಲಾ ದಲಿತ ಮತ್ತು ಪ್ರಗತಿಪರ ಸಾಮೂಹಿಕ ಸಂಘಟನೆಗಳ ನೆತೃತ್ವದಲ್ಲಿ ಉಗ್ರವಾದ ಹೋರಾಟ ನಡೆಸಲಾಗುವುದು ಎಂದು ನಿರ್ಣಯಿಸಿದರು.

ಸಭೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ,
ಮಲ್ಲಿಕಾರ್ಜುನ್ ಕ್ರಾಂತಿ,ವೆಂಕಟೇಶ ಹೊಸಮನಿ, ಮಾನಪ್ಪ ಕಟ್ಟಿಮನಿ, ಶೇಖ್ ಮಹಿಬೂಬ್ಸಾಭ್ ವಂಟಿ, ಅಬ್ದುಲ ಗಫೂರ್ ನಗನೂರಿ,ನಾಗಣ್ಣ ಕಲ್ಲದೇವನಹಳ್ಳಿ,ಮಲ್ಲಯ್ಯ ಕಮತಿಗಿ, ದೆವೆಂದ್ರಪ್ಪ ಪತ್ತಾರ್,ರಮೇಶ ದೋರಿ ಆಲ್ದಾಳ,ವೆಂಕೋಬ ದೋರಿ,ವೆಂಕಟೇಶ ಬೇಟೆಗಾರ್, ಮುದ್ದಣ್ಣ ಅಮ್ಮಾಪೂರ, ಬುಚ್ಚಪ್ಪ ನಾಯಕ್, ಭಿಮರಾಯ ಸಿಂದಗೇರಿ,ರಾಹುಲ್ ಹುಲಿಮನಿ,ಮಾನಪ್ಪ ಬಿಜಾಸ್ಪೂರ, ಯಲ್ಲಪ್ಪ ಚಿನ್ನಾಕಾರ್, ವೆಂಕಟೇಶ ಸುರಪೂರಕರ್, ಮೂರ್ತಿ ಬೊಮ್ಮನಹಳ್ಳಿ,ಶಿವುಕುಮಾರ್ ಕಟ್ಟಿಮನಿ, ವಿಠಲ್ ಕಲಾದಗಿ,ಮಾಳಪ್ಪ ಕಿರದಳ್ಳಿ, ತಿಪ್ಪಣ್ಣ ಶೆಳ್ಳಗಿ, ಆರ್ ಎಸ್,ಮಾಲಗತ್ತಿ, ಹುಲಗಪ್ಪ ದೆವತ್ಕಲ್, ಶರಣಪ್ಪ ವಾಡಿ,ಮರೆಪ್ಪ ಕಾಂಗ್ರೆಸ್, ಶಂಕರ್ ಬೊಮ್ಮನಹಳ್ಳಿ, ದೆವು ಕಕ್ಕೆರಿ,ರಾಜು ಕಟ್ಟಿಮನಿ,ಅಜ್ಮೀರ್, ಎಮ್,ಪಟೇಲ್, ಮಹೇಶ್ ಯಾದಗಿರ್, ಹಣಮಂತ ರತ್ತಾಳ,ವಿಶ್ವನಾಥ ಹೊಸಮನಿ,ರಮೇಶ ಬಡಿಗೆರ,ಮಲ್ಲು ಮುಷ್ಠಳ್ಳಿ, ಪ್ರಕಾಶ, ಮರಲಿಂಗ,ಮಾನಪ್ಪ ಝ,ಜೆಟ್ಟಪ್ಪ ನಾಗರಾಳ,ಬನ್ನೆಪ್ಪ ಕೋನಾಳ,ಮಾನಪ್ಪ ರತ್ತಾಳ,ಯಲ್ಲಪ್ಪ, ಇನ್ನು ಮುಂತಾದ ನೂರಕ್ಕು ಹೆಚ್ಚು ಕಾಂiiಕರ್ತರು ಬಾಗವಹಿಸಿದ್ದರು.

advertisement
advertisement

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here