ಪರಿಸರ ಕಾಳಜಿ: ಬಳಕೆಯಾಗದ ಜಾಗದಲ್ಲಿ ಸಸಿ ಬೆಳೆಸಿದ ಪಿಎಸ್‌ಐ

0
57
ವಾಡಿ: ಸಾರ್ವಜನಿಕರು ಬಹಿರ್ದೆಸೆಗೆ ಬಳಸುತ್ತಿದ್ದ ಠಾಣಾ ವ್ಯಾಪ್ತಿಯ ಜಾಗವನ್ನು ಸ್ವಚ್ಚಗೊಳಿಸಿ ನೂರಾರು ಸಸಿ ನೆಡುವ ಮೂಲಕ ಪಿಎಸ್‌ಐ ವಿಜಯಕುಮಾರ ಭಾವಗಿ ಅವರು ಪರಿಸರ ಕಾಳಜಿ ಮೆರೆದರು. ಮಲ್ಲಯ್ಯ ಗುತ್ತೇದಾರ, ಭೀಮರಾವ ದೊರೆ ಇದ್ದರು.

ವಾಡಿ: ಬಳಕೆಯಾಗದೆ ನಿರುಪಯುಕ್ತವಾಗಿ ತ್ಯಾಜ್ಯಗಳಿಂದ ಕೂಡಿದ್ದ ಠಾಣಾ ಸುಪರ್ದಿಯಲ್ಲಿರುವ ಕಲುಷಿತ ಜಾಗದಲ್ಲಿ ನೂರಾರು ವಿವಿಧ ಜಾತಿಯ ಸಸಿಗಳನ್ನು ನೆಡುವ ಮೂಲಕ ವಾಡಿ ಪೊಲೀಸ್ ಠಾಣೆಯ ಪಿಎಸ್‌ಐ ವಿಜಯಕುಮಾರ ಭಾವಗಿ ಅವರು ಪರಿಸರ ಕಾಳಜಿ ಮೆರೆದಿದ್ದಾರೆ.

Contact Your\'s Advertisement; 9902492681

ಪೊಲೀಸ್ ಠಾಣೆ ಮತ್ತು ಪೊಲೀಸ್ ವಸತಿ ಗೃಹಗಳ ವ್ಯಾಪ್ತಿಗೆ ಸೇರಿರುವ ಅಗಲವಾದ ಖಾಲಿ ಜಾಗದಲ್ಲಿ ಘನತ್ಯಾಜ್ಯ ಹರಡಿ ವಾತಾವರಣ ಕಲುಷಿತಗೊಂಡಿತ್ತು. ಮುಳ್ಳುಕಂಟಿಗಳು ಬೆಳೆದು ಹಾವು ಚೇಳುಗಳ ತಾಣವಾಗಿ ಪೊಲೀಸರ ಕುಟುಂಬ ಆತಂಕದಲ್ಲಿ ಕಾಲ ಕಳೆಯಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಇಂತಹ ಜಾಗವನ್ನು ಶುಚಿಗೊಳಿಸಲು ಮುಂದಾದ ಠಾಣಾಧಿಕಾರಿ ವಿಜಯಕುಮಾರ ಭಾವಗಿ ಹಾಗೂ ಸಿಬ್ಬಂದಿಗಳು, ಸಿಸಿ ನೆಡುವ ಯೋಜನೆ ರೂಪಿಸಿದರು. ತ್ಯಾಜ್ಯಯುಕ್ತ ಜಾಗವನ್ನು ಸ್ವಚ್ಚಗೊಳಿಸಿ ನೂರಕ್ಕೂ ಹೆಚ್ಚು ಸಸಿ ನೆಟ್ಟರು. ಸಸಿಗಳನ್ನು ಮರಗಳನ್ನಾಗಿ ಬೆಳೆಸುವ ಜವಾಬ್ದಾರಿ ಹೊತ್ತಿರುವ ಪೊಲೀಸರು ನಿಜಕ್ಕೂ ನಿಸ್ವಾರ್ಥ ಪರಿಸರ ಕಾಳಜಿ ಪ್ರದರ್ಶಿಸುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಈ ವೇಳೆ ಪುರಸಭೆ ಉಪಾಧ್ಯಕ್ಷ ಮಲ್ಲಯ್ಯ ಗುತ್ತೇದಾರ, ಮಹರ್ಷಿ ವಾಲ್ಮೀಕಿ ಸಮಾಜದ ತಾಲೂಕು ಅಧ್ಯಕ್ಷ ಭೀಮರಾವ ದೊರೆ, ಶಂಕರಸಿಂಗ್ ರಾಠೋಡ, ಗುರುನಾಥ ಗುತ್ತೇದಾರ, ಪೊಲೀಸ್ ಸಿಬ್ಬಂದಿ ದತ್ತಾತ್ರೇಯ ಜಾನೆ, ಅಶೋಕ ಮೇತ್ರೆ ಹಾಗೂ ಮತ್ತಿತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here