ತಂದೆ ಮಗನ ಜೋಡಿ ಕೊಲೆ

1
232

ಯಾದಗಿರಿ: ಯಾದಗಿರಿ ಸಮೀಪದ ಹತ್ತಿಕುಣಿ ಸಮೀಪದ ಹತ್ತಿಕುಣಿ ಭಾಗದ ತೋಟಗಾರಿಕೆ ಪ್ರದೇಶ ಬಳಿ ಜೋಡಿ ಕೊಲೆ ನಡೆದಿರುವ ಘಟನೆ ಇಂದು ಸಂಜೆ ಸಂಭವಿಸಿದೆ.

ಶರಣಪ್ಪ ಗಡ್ಡೀಮನಿ ಪೂಜಾರಿ (55), ಪುತ್ರ ಮಹಾದೇವಪ್ಪ (29) ಕೊಲೆಯಾದ ವ್ಯಕ್ತಿಗಳು, ಶರಣಪ್ಪ ಗಟ್ಟೀಮನಿ ಹತ್ತಿಕುಣಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಎಂದು ತಿಳಿದುಬಂದಿದ್ದು, ಇವರ ಮಗ ಮಹಾದೇವಪ್ಪ ಇಬ್ಬರನ್ನು ಹತ್ತಿಕುಣಿ ಭಾಗದ ಸರಕಾರಿ ತೋಟಗಾರಿಕೆ ಪ್ರದೇಶ ಹಾಗೂ ರಕ್ಷಿತ ಅರಣ್ಯ ಪ್ರದೇಶ ಬರ್ಬರವಾಗ ಕೊಲೆ ಮಾಡಲಾಗಿದೆ.

Contact Your\'s Advertisement; 9902492681

ಕೊಲೆಗೆ ನಿಖರ ಕಾರಣ ಹಾಗೂ ಕೊಲೆ ಮಾಡಿರುವ ಆರೋಪಿಗಳು ಕೊಲೆ ನಡೆಸಿ ಪರಾರಿಯಾಗಿದ್ದು, ಸ್ಥಳಕ್ಕೆ ಯಾದಗಿರಿ ಗ್ರಾಮೀಣ ಠಾಣೆಯ ಪೊಲೀಸರ ಭೇಟಿ- ಪರಿಶೀಲನೆ ನಡೆಸಿದ್ದಾರೆ.

ಕೊಲೆಯಾದ ಶರಣಪ್ಪಗೆ ನಾಲ್ವರು ಪುತ್ರು ಹಾಗೂ ಮೂವರು ಪುತ್ರಿಯರು ಇದ್ದು, ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗುತ್ತಿದ್ದು, ಕೊಲೆಗೆ ನಿಖರ ಕಾರಣ ಪೊಲೀಸ್ ತನಿಖೆಯಿಂದ ಗೊತ್ತಾಗಬೇಕಿದೆ.

ಪ್ರಕರಣದ ಕುರಿತು ಯಾದಗಿರಿ ಜಿಲ್ಲೆಯ ಗ್ರಾಮಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

1 ಕಾಮೆಂಟ್

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here