ಆಳಂದ: ಸರಕಾರವು ವಿದ್ಯಾರ್ಥಿಗಳಿಗೆ ಆರೋಗ್ಯಯುತ ಶಿಕ್ಷಣ ನೀಡಲು ಪೌಷ್ಠಿಕ ಆಹಾರ ಧಾನ್ಯಗಳ ಜತೆಗೆ ಕ್ಷೀರಭಾಗ್ಯ ಯೋಜನೆಯಡಿಯಲ್ಲಿ ಹಾಲಿನ ಪುಡಿ ವಿತರಿಸುತ್ತಿದೆ. ಇದನ್ನು ಸದುಪಯೋಗ ಮಾಡಿಸಿಕೋಳ್ಳಬೇಕು ಎಂದು ಸಂಸ್ಥೆಯ ಅಧ್ಯಕ್ಷ ಮತ್ತು ಜಿಡಿಎ ಮಾಜಿ ಅಧ್ಯಕ್ಷ ಶಾಮರಾವ ಪ್ಯಾಟಿ ಹೇಳಿದರು.
ತಾಲೂಕಿನ ಮಾಡಿಯಾಳ ಗ್ರಾಮದ ಜಯಪ್ರಕಾಶ ನಾರಾಯಣ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಶನಿವಾರ ಕ್ಷೀರ ಭಾಗ್ಯ ಯೋಜನೆಯಡಿ ವಿದ್ಯಾರ್ಥಿಗಳಿಗೆ ಹಾಲಿನ ಪೌಡರನ್ನು ವಿತರಿಸಿ ಮಾತನಾಡಿದರು.
ಕೋವಿಡ-೧೯ ಕಾಯಿಲೆಯಿಂದ ಸರ್ಕಾರವು ಬಡ ವಿದ್ಯಾರ್ಥಿಗಳಿಗೆ ಆರೋಗ್ಯಯುತ ಜೀವನ ಸಾಗಿಸಲು ಮನೆ ಮನೆಗೆ ಪೌಷ್ಠಿಕ ಆಹಾರ ಧಾನ್ಯಗಳು ಮತ್ತು ಹಾಲು ನೀಡುತ್ತಿದೆ. ಇದಲ್ಲದೆ ಅನೇಕ ಶೈಕ್ಷಣಿಕ ಸೌಲಭ್ಯಗಳನ್ನು ನೀಡುವ ಮೂಲಕ ಬಡ ಪ್ರತಿಭಾವಂತ ವಿದ್ಯಾರ್ಥಿಗಳೀಗೆ ಅನುಕೂಲವಾಗಿಸಿದೆ ಎಂದರು.
ತಾಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರಾಜಕುಮಾರ ಪಾಟೀಲ್ ಮಾತನಾಡಿ, ಇಲಾಖೆಯಿಂದ ಬಂದ ಧಾನ್ಯಗಳು ಮತ್ತು ಹಾಲಿನ ಪೌಡರನ್ನು ಶಾಲೆಗೆ ಬಂದ ತಕ್ಷಣ ವಿದ್ಯಾರ್ಥಿಗಳಿಗೆ ವಿತರಿಸಬೇಕು. ಆದರೆ, ತಾಲೂಕಿನ ಕೆಲ ಶಾಲೆಯ ಶಿಕ್ಷಕರ ವಿದ್ಯಾರ್ಥಿಗಳಿಗೆ ನೀಡದೆ ದಿನ ಕಳೆಯುತ್ತಿರುವುದು ಗಮನಕ್ಕೆ ಬಂದಿದೆ. ಇದರಿಂದ ಅಂತಹ ಶಾಲೆಯ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು ಎಂದರು.
ಗ್ರಾಪಂ ಅಧ್ಯಕ್ಷ ಶ್ರೀಕಾಂತ ಕೌಲಗಿ, ಮುಖ್ಯಗುರು ಸಿದ್ರಾಮಪ್ಪ ಸೋಲಾಪುರ, ಸಂತೋಷ ಖಾನಾಪೂರ, ರಾಜಕುಮಾರ ಬಿರಾದಾರ, ಶರಣಸಪ್ಪ ಉಪ್ಪಿನ, ಸಿದ್ದರಾಮ ಜೋಗನ, ಗಂಗಾದರ ಹರಳಯ್ಯ ಮತ್ತು ಅಡುಗೆ ಸಹಾಯಕಿಯರು ಭಾಗವಹಿಸಿದರು.