ಸುರಪುರ: ರಾಜ್ಯದಲ್ಲಿನ ಅಂಗನವಾಡಿ ನೌಕರರ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘವು ಸಿಐಟಿಯು ನೇತೃತ್ವದಲ್ಲಿ ಅನೇಕ ಬಾರಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು ನಮ್ಮ ಮನವಿಗೆ ಸರಕಾರ ಸ್ಪಂಧಿಸಿ ಬೇಡಿಕೆ ಈಡೇರಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿ ಅಂಗನವಾಡಿ ನೌಕರರು ನಗರದ ಶಾಸಕ ರಾಜುಗೌಡ ಅವರ ಗೃಹ ಕಚೇರಿಯ ಬಳಿ ಬೇಸರ ವ್ಯಕ್ತಪಡಿಸಿದರು.
ಭಾನುವಾರ ಮದ್ಹ್ಯಾನ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಸಿಐಟಿಯು ನೇತೃತ್ವದ ಸುರಪುರ ತಾಲೂಕು ಘಟಕದಿಂದ ಪ್ರತಿಭಟನೆ ನಡೆಸಿ ಮಾತನಾಡಿದ ಮುಖಂಡರು,ಸರಕಾರ ಅಂಗನವಾಡಿ ನೌಕರರ ಬೇಡಿಕೆಗಳನ್ನು ಕಡೆಗಣಿಸುವ ಮೂಲಕ ನಿರ್ಲಕ್ಷ್ಯ ತೋರುತ್ತಿರುವುದು ನೋವಿನ ಸಂಗತಿಯಾಗಿದೆ.ಆದ್ದರಿಂದ ಮಾನ್ಯ ಶಾಸಕರಾದ ರಾಜುಗೌಡ ಅವರು ನಮ್ಮ ಬೇಡಿಕೆಗಳನ್ನು ಮುಂಬರುವ ವಿಧಾನಸಭಾ ಅಧಿವೇಶನದಲ್ಲಿ ಸರಕಾರದ ಗಮನಕ್ಕೆ ತರುವಂತೆ ಇಂದು ಮನವಿ ಮಾಡುತ್ತಿರುವುದಾಗಿ ತಿಳಿಸಿದರು.
ನಂತರ ಶಾಸಕರಿಗೆ ಬರೆದ ಮನವಿಯನ್ನು ಶಾಸಕರ ಕಚೇರಿ ಸಹಾಯಕರಾದ ಜಕ್ಕಪ್ಪ ಅವರ ಮೂಲಕ ಸಲ್ಲಿಸಿದರು.ಈ ಸಂದರ್ಭದಲ್ಲಿ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಸುರೇಖಾ ಕುಲಕರ್ಣಿ ಮುಖಂಡರಾದ ಬಸ್ಸಮ್ಮ ಆಲ್ಹಾಳ,ನಸೀಮಾ ಮುದನೂರು,ರಾಧಾಬಾಯಿ ಲಕ್ಷ್ಮೀಪುರ ಸೇರಿದಂತೆ ಅನೇಕರು ಭಾಗವಹಿಸಿದ್ದರು.