ಶಿಕ್ಷಕರ ದಿನಾಚರಣೆ: ಗುರುವಿನ ಹಿರಿಮೆಯ ಸ್ಮರಿಸುವ ದಿನ

0
30

ಗುರುವಿನ ಗುಲಾಮನಾಗದ ಹೊರತು ದೊರಕದಣ್ಣ ಮುಕುತಿ ಎಂಬುದೊಂದು ಕನ್ನಡ ಉಕ್ತಿಯಾಗಿದೆ. ಜೀವನದಲ್ಲಿ ಏಳ್ಗೆ ಪಡೆಯಲು ಗುರುವಿನ ಮಾರ್ಗದರ್ಶನ ಅಗತ್ಯವಾಗಿದೆ. ನಮ್ಮ ಜೀವನದಲ್ಲಿ ತಾಯಿಯೇ ಪ್ರಥಮ ಗುರುವಾಗಿರುತ್ತಾಳೆ. ಶಿಕ್ಷಕರ ದಿನಾಚರಣೆ ವಿಶೇಷ: ಒಂದು ಸವಿ ನೆನಪು ಹೀಗೆ ಒಂದನೆ ತರಗತಿಯಲ್ಲಿ ಕಲಿತ ಅ ಆ ಇ ಈಯಿಂದ ಹಿಡಿದು ಬದುಕಿನ ಎಬಿಸಿಡಿ ಕಲಿಯುತ್ತಿರುವ ಇಲ್ಲಿನವರೆಗೆ ನನ್ನ ಜೀವನದಲ್ಲಿ ಹಲವು ಗುರುಗಳು ಬಂದಿದ್ದಾರೆ. ವಿದ್ಯಾ ಬುದ್ದಿ ಕಲಿಸಿದ, ಕಲಿಸುವ ಗುರುಗಳಿಗೆಲ್ಲ ಶಿಕ್ಷಕರ ದಿನದ ಶುಭಾಶಯಗಳು.

ವಿದ್ಯಾಭ್ಯಾಸದ ಅವಧಿಯಲ್ಲಿ ಹಲವರು ಗುರುಗಳು ನಮ್ಮನ್ನು ತಿದ್ದಿ ತೀಡಿ ಉತ್ತಮ ನಾಗರಿಕರಾಗಲು ಸಹಕರಿಸುತ್ತಾರೆ. ಆದ್ದರಿಂದ ಜೀವನದ ಯಶಸ್ಸಿಗೆ ಗುರುವಿನ ಇರುವಿಕೆ ಅತ್ಯಗತ್ಯವಾಗಿದೆ. ಗುರುವಿನ ಸಮರ್ಥ ಮಾರ್ಗದರ್ಶನವಿಲ್ಲದೇ ಗುರಿಯತ್ತ ಸಾಗಲು ಅಸಾಧ್ಯ. ಗುರುಗಳ ಮಾರ್ಗದರ್ಶನ ನಮ್ಮನ್ನು ಜೀವಮಾನವಿಡೀ ಸರಿಯಾದ ಮಾರ್ಗದಲ್ಲಿ ನಡೆಸಲು ಪ್ರೇರಣೆಯಾಗಿರುತ್ತದೆ. ಶಿಕ್ಷಕರ ದಿನಾಚರಣೆಯ ಹಿಂದೆ ಅಚ್ಚರಿಯ ಮಾಹಿತಿಯೊಂದಿದೆ. ಇದು ಭಾರತದ ಸರ್ವಶ್ರೇಷ್ಠ ಶಿಕ್ಷಕತಜ್ಞ ಡಾ ಸರ್ವೆಪಲ್ಲಿ ರಾಧಾಕೃಷ್ಣನ್ ರವರ ಜನ್ಮದಿನವಾಗಿದೆ.

Contact Your\'s Advertisement; 9902492681

ಡಾ ಸರ್ವಪಲ್ಲಿ ರಾಧಾಕೃಷ್ಣನ್ ರವರು ಭಾರತದ ಅತ್ಯುನ್ನತ ಹುದ್ದೆಯಾದ ರಾಷ್ಟ್ರಪತಿಯ ಹುದ್ದೆಯನ್ನೂ ಅಲಂಕರಿಸಿದ್ದರು. ರಾಷ್ಟ್ರಪತಿಯಾದ ಬಳಿಕ ಅವರ ಅಭಿಮಾನಿಗಳು ಸೆ. ಐದರಂದು ಅವರ ಜನ್ಮದಿನ ಆಚರಿಸಲು ಉತ್ಸುಕರಾಗಿದ್ದಾಗ ಇವರು ಈ ಮನವಿಯನ್ನು ನಯವಾಗಿಯೇ ತಿರಸ್ಕರಿಸಿ ಈ ದಿನವನ್ನು ತಮ್ಮ ಜನ್ಮದಿನಕ್ಕೂ ಮಿಗಿಲಾಗಿ ಶಿಕ್ಷಕರ ದಿನವಾಗಿ ಆಚರಿಸಿದರೆ ತಮಗೆ ಹೆಚ್ಚು ಗೌರವ ಲಭಿಸಿದಂತಾಗುತ್ತದೆ ಎಂದಿದ್ದರು. ಈ ಮನವಿಯನ್ನು ಮನ್ನಿಸಿದ ಸರ್ಕಾರ 1962ರಿಂದ ಈ ದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸಿಕೊಳ್ಳುತ್ತಾ ಬಂದಿದೆ.

ವರ್ಷದಲ್ಲೊಂದು ದಿನ ನಮ್ಮ ಗುರುಗಳಿಗಾಗಿ ಮೀಸಲಿಡುವ ಮೂಲಕ ಇವರನ್ನು ಸದ್ಗುರುವಿನ ರೂಪದಲ್ಲಿ ಸ್ಮರಿಸಲು ನೆರವಾಗುತ್ತದೆ. ಪ್ರತಿಯೊಬ್ಬ ಸುಶಿಕ್ಷತನೂ ತನ್ನ ಶಿಕ್ಷಣ ಮತ್ತು ತನಗೆ ಶಿಕ್ಷಣ ನೀಡಿದ ಸಂಸ್ಥೆ, ಗುರುಗಳನ್ನು ಮರೆಯದೇ ಇರುವುದು ಮುಂದಿನ ಪೀಳಿಗೆಗೆ ಮಾದರಿಯಾಗಲು ಸಾಧ್ಯ.

ಪ್ರತಿವರ್ಷ ಸೆಪ್ಟೆಂಬರ್ ಐದರಂದು ಶಿಕ್ಷಕರ ದಿನಾಚರಣೆಯ ರೂಪದಲ್ಲಿ ಆಚರಿಸಲಾಗುತ್ತಿದೆ. 1962ರಿಂದಲೂ ಆಚರಿಸಿಕೊಂಡು ಬರುತ್ತಿರುವ ಈ ದಿನ ಭಾರತೀಯ ಶಿಕ್ಷಣ ವ್ಯವಸ್ಥೆಗೆ ಅಪ್ರತಿಮ ಯೋಗದಾದ ನೀಡಿದ ಶಿಕ್ಷಕ, ದಾರ್ಶನಿಕ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮದಿನವೂ ಹೌದು. “ಶಿಕ್ಷಕರು ಯಾವುದೇ ದೇಶದ ಅತ್ಯುತ್ತಮ ಮೆದುಳುಗಳಾಗಬೇಕು” ಎಂದು ಡಾ. ರಾಧಾಕೃಷ್ಣನ್ ಕರೆ ನೀಡಿದ್ದರು. ಈ ದಿನವನ್ನು ದೇಶದ ಭವಿಷ್ಯವಾದ ಮಕ್ಕಳ ಭವಿಷ್ಯವನ್ನು ರೂಪಿಸುವ ಶಿಕ್ಷಕರ ದಿನವನ್ನಾಗಿ ಆಚರಿಸುವ ಮೂಲಕ ನಾವೆಲ್ಲರೂ ಶಿಕ್ಷಕರಿಗೆ ನೀಡುವ ಗೌರವವಾಗಿದೆ.

ಶಿಕ್ಷಕರ ದಿನಾಚರಣೆಯನ್ನು ಆಚರಿಸಲು ಸಹಾ ಒಂದು ಸಕಾರಣವಿದೆ. ಒಮ್ಮೆ ಅವರ ವಿದ್ಯಾರ್ಥಿಗಳು ಬಳಿಬಂದು ತಮ್ಮ ಹುಟ್ಟಿದ ಹಬ್ಬವನ್ನು ಬಲು ವಿಜೃಂಭಣೆಯಿಂದ ಆಚರಿಸಲಿದ್ದೇವೆ, ತಾವು ಖಂಡಿತಾ ಬರಬೇಕು ಎಂದು ಆಹ್ವಾನಿಸಿದರಂತೆ. ಅದಕ್ಕುತ್ತರವಾಗಿ ಡಾ. ರಾಧಾಕೃಷ್ಣನ್ ರವರು ಈ ದಿನವನ್ನು ತನ್ನ ಹುಟ್ಟುಹಬ್ಬವನ್ನಾಗಿ ಆಚರಿಸುವ ಬದಲು ‘ಶಿಕ್ಷಕರ ದಿನ’ವೆಂದೇಕೆ ಆಚರಿಸಬಾರದು? ಇದರಿಂದ ನನಗೆ ಹೆಚ್ಚು ಸಂತೋಷವಾಗುತ್ತದೆ ಎಂದರಂತೆ. ಅವರ ಮಾತನ್ನು ಗಂಭೀರವಾಗಿ ಪರಿಗಣಿಸಿದ ವಿದ್ಯಾರ್ಥಿಗಳು ಅಂದಿನಿಂದಲೇ ಈ ದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸಲು ಪ್ರಾರಂಭಿಸಿದರಂತೆ. ಅಂದಿನಿಂದ ಪ್ರತಿವರ್ಷದ ಸೆಪ್ಟೆಂಬರ್ ಐದರಂದು ಶಿಕ್ಷಕರ ದಿನಾಚರಣೆಯ ರೂಪದಲ್ಲಿ ದೇಶದಾದ್ಯಂತ ಆಚರಿಸಿಕೊಳ್ಳುತ್ತಾ ಬರಲಾಗಿದೆ.

ಮಕ್ಕಳ ಭವಿಷ್ಯವನ್ನು ರೂಪಿಸುವ, ಪಠ್ಯಕ್ಕಿಂತಲೂ ಹೆಚ್ಚಾಗಿ ವಿದ್ಯಾರ್ಥಿಗಳಲ್ಲಿ ವಿವೇಕ, ತಾಳ್ಮೆ, ದೂರದೃಷ್ಟಿ, ಮಾನವತೆಯನ್ನು ಬೋಧಿಸುವ, ತನ್ಮೂಲಕ ವಿದ್ಯಾರ್ಥಿಗಳನ್ನು ಭವ್ಯ ದೇಶದ ಸತ್ಪ್ರಜೆಗಳನ್ನಾಗಿ ರೂಪಿಸುವ ಶಿಕ್ಷಕರಿಗೆ ವಂದನೆ ಸಲ್ಲಿಸುವ ನಿಟ್ಟಿನಲ್ಲಿ ಶಿಕ್ಷಕರ ದಿನಾಚರಣೆ ಅತಿ ಮಹತ್ವದ್ದಾಗಿದೆ. ಮಕ್ಕಳ ವಿದ್ಯಾಭ್ಯಾಸ ದೇಶದ ಭವಿಷ್ಯವನ್ನೇ ಬದಲಿಸಿಬಿಡಬಲ್ಲುದು. ಒಂದು ವೇಳೆ ಯಾವುದಾದರೂ ವ್ಯಕ್ತಿ ಜೀವನದಲ್ಲಿ ಅತ್ಯಂತ ಉನ್ನತ ಸ್ಥಾನ ಪಡೆದರೆ ಅದಕ್ಕೆ ತಳಹದಿಯಾದ ಶಿಕ್ಷಕರ ಶ್ರಮವನ್ನು ಯಾರೂ ಗಮನಿಸುವುದೇ ಇಲ್ಲ. ಕೆಟ್ಟ ಚಟವಿದ್ದರೂ ನನಗೆ ಈ ಸರ್ ಆದರ್ಶಪ್ರಾಯರು!

ಇನ್ನೊಂದು ಬದಿಯಲ್ಲಿ ಸಮಾಜಕ್ಕೆ ಕಂಟಕನಾಗಬಹುದಾಗಿದ್ದ ವಿದ್ಯಾರ್ಥಿಯ ಮನವನ್ನು ತಿದ್ದಿ ತೀಡಿ ಸಮಾಜರಕ್ಷಕನಾಗಿರುವಾಗಲೂ ಯಾರೂ ಶಿಕ್ಷಕನನ್ನು ಗಮನಿಸುವುದಿಲ್ಲ. ಆದರೆ ಶಿಕ್ಷಕರ ಈ ಶ್ರಮಕ್ಕೆ ಒಂದು ಧನ್ಯವಾದ ಹೇಳುವುದಾದರೂ ಪ್ರತಿ ಪಾಲಕರ ಕರ್ತವ್ಯವಾಗಿದೆ. ಇದಕ್ಕೆ ಶಿಕ್ಷಕರ ದಿನಾಚರಣೆ ಅತ್ಯಂತ ಸೂಕ್ತವಾದ ಸಂದರ್ಭವಾಗಿದೆ. ಈ ಅಗತ್ಯವನ್ನು ಮನಗಂಡ ದೇಶದ ಎಲ್ಲಾ ಪ್ರಮುಖ ಶಾಲೆಗಳು ತಮ್ಮ ಹಿರಿಯ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಈ ಒಂದು ದಿನದ ಮಟ್ಟಿಗೆ ಶಿಕ್ಷಕನಾಗುವ ಅವಕಾಶವನ್ನು ಮಾಡಿಕೊಡುತ್ತವೆ.
ಸಿದ್ದಮ್ಮಾಜಮಾದರ
ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿನಿ ಶರಣಬಸವ ವಿಶ್ವವಿದ್ಯಾಲಯ
ಕಲಬುರಗಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here