ಸಿದ್ದು ಯಾಪಲಪರವಿ ಅವರ ಹಗಲಿನಲ್ಲಿಯೆ ಸಂಜೆಯಾಯಿತು ಕೃತಿ ಲೋಕಾರ್ಪಣೆ

0
15

ಭಾಲಿ: ಲಿಂಗೈಕ್ಯ ಜಗದ್ಗುರು ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಮಾತೃ ಪ್ರೇಮವನ್ನು ಪ್ರೊ.ಸಿದ್ದು ಯಾಪಲಪರವಿ ಅವರು ತಮ್ಮ ಹಗಲಿನಲ್ಲಿಯೆ ಸಂಜೆಯಾಯಿತು ಕೃತಿ ಮೂಲಕ ಅಮರ ಗೊಳಿಸಿದ್ದಾರೆ ಎಂದು ಪೂಜ್ಯ ಶ್ರೀ ಡಾ.ಬಸವಲಿಂಗ ಪಟ್ಟದ ದೇವರು ನುಡಿದರು. ಅವರು ಕೃತಿ ಬಿಡುಗಡೆಯ ಸಾನಿಧ್ಯ ವಹಿಸಿ ಮಾತನಾಡುತ್ತಿದ್ದರು.

ಭಾಲ್ಕಿಯ ಹಿರಿಯ ಗುರುಗಳನ್ನು ಮೊಟ್ಟ ಮೊದಲು ಎಂಬತ್ತರ ದಶಕದಲ್ಲಿ ಗದುಗಿಗೆ ಆಹ್ವಾನಿಸಿ, ದೊಡ್ಡ ಪ್ರಮಾಣದ ಗೌರವ ನೀಡಿ, ಇಡೀ ನಾಡಿಗೆ ಪರಿಚಯಿಸಿದ ಶ್ರೇಯಸ್ಸು ಪೂಜ್ಯರಿಗೆ ಸಲ್ಲುತ್ತದೆ. ಅಲ್ಲಿಯವರೆಗೆ ಭಾಲ್ಕಿಯ ಡಾ.ಚೆನ್ನಬಸವ ಪಟ್ಟದ ದೇವರನ್ನು ಇತರ ಮಠಗಳು ಗುರುತಿಸಲಿರಲಿಲ್ಲ. ಅನೇಕ ವಿಧಾಯಕ ಕೆಲಸಗಳಿಗೆ ಭಾಲ್ಕಿಗೆ ಸೀಮಿತಗೊಂಡ ಅವರ ಮೇರು ವ್ಯಕ್ತಿತ್ವವನ್ನು ನಾಡಿಗೆ ಪರಿಚಯಿಸಿದರು.

Contact Your\'s Advertisement; 9902492681

ಇಂತಹ ನೂರಾರು ಮನೋಜ್ಞ ಘಟನೆಗಳನ್ನು ಪ್ರೊ.ಯಾಪಲಪರವಿ ಅವರು ರಸವತ್ತಾಗಿ ವಿವರಿಸಿದ್ದಾರೆ ಎಂದರು. ಓದಿಸಿಕೊಂಡು ಹೋಗುವ ಸುಲಲಿತ ಭಾಷಾ ಶೈಲಿ ಈ ಕೃತಿಯ ಹಿರಿಮೆಯಾಗಿದೆ. ಗದುಗಿನ ಜಗದ್ಗುರುಗಳು ಭಾಲ್ಕಿಗೆ ವರ್ಷಕ್ಕೆ ಮೂರು ಬಾರಿ ತಪ್ಪದೇ ಆಗಮಿಸಿ ನಮ್ಮ ಮಠದ ಕಾರ್ಯಕ್ರಮಗಳ ಘನತೆಯನ್ನು ಹೆಚ್ಚಿಸಿ, ಪ್ರತಿಯೊಂದು ಕಾರ್ಯಚಟುವಟಿಕೆಗಳನ್ನು ಗುರುತಿಸಿ ಹುರಿ ದುಂಬಿಸುವ ಮಾತುಗಳ ನುಡಿದದ್ದನ್ನು ಮರೆಯಲಾಗದು. ಅವರ ಅಗಲಿಕೆ ನಮಗೆ ಬಹು ದೊಡ್ಡ ಆಘಾತ ತಂದಿತ್ತು ಆದರೆ ಸದರಿ ಕೃತಿ ಮೂಲಕ ಅವರ ಬದುಕಿನ ಔದಾರ್ಯವನ್ನು ಹೃದಯಂಗಮವಾಗಿ ಚಿತ್ರಿಸಿ ನೋವನ್ನು ದೂರ ಮಾಡಿದ ಸಿದ್ದು ಯಾಪಲಪರವಿ ಅವರನ್ನು ಅಭಿನಂದಿಸುತ್ತೇವೆ, ಸದರಿ ಕೃತಿಯನ್ನು ಮರಾಠಿಗೆ ಅನುವಾದಿಸಿ ಪ್ರಕಟಿಸಲಾಗುವುದು ಎಂದರು.

ಅತಿಥಿಗಳಾಗಿ ಮಾತನಾಡಿದ ಪ್ರೊ.ಸಿದ್ದು ಯಾಪಲಪರವಿ, ಭಾಲ್ಕಿ ಮಠ ಕೈಗೊಂಡ ಜನಪರ ಮತ್ತು ಶೈಕ್ಷಣಿಕ ಕಾರ್ಯಕ್ರಮಗಳನ್ನು ತೋಂಟದಾರ್ಯ ಸ್ವಾಮಿಗಳು ಸದಾ ಸ್ಮರಿಸುತ್ತಿದ್ದರು. ತಾವು ಕೇಳಿರುವ ಅಂತಹ ಕೆಲವು ಘಟನೆಗಳನ್ನು ಮಾತ್ರ ಇಲ್ಲಿ ಉಲ್ಲೇಖಿಸಲಾಗಿದೆ. ಅವರ ಮೇರು ವ್ಯಕ್ತಿತ್ವದ ಹತ್ತು ಹಲವು ಆಯಾಮಗಳನ್ನು ಸಂಕ್ಷಿಪ್ತವಾಗಿ ಹಿಡಿದಿಡುವ ಪ್ರಯತ್ನ ಮಾಡಿದ್ದೇನೆ. ಹಗಲಿನಲ್ಲಿಯೆ ಸಂಜೆಯಾಯಿತು ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಮರು ಮುದ್ರಣಗೊಳ್ಳುತ್ತಿರುವುದಕ್ಕೆ ಪೂಜ್ಯರ ಘನ ವ್ಯಕ್ತಿತ್ವದ ಪ್ರಭಾವವೇ ಕಾರಣ, ಅವರ ಮಾತೃ ಪ್ರೇಮದ ಸವಿ ಉಂಡವರು, ತೋಂಟದಾರ್ಯರ ಪ್ರಗತಿಪರ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವ ಅಗತ್ಯವಿದೆ. ಅದನ್ನು ನಾವು ತೋಂಟದಾರ್ಯ ಮಾರ್ಗ ಎಂದು ಕರೆಯಬಹುದು ಎಂದರು.

ಪುಸ್ತಕ ಪ್ರೇಮಿಗಳಾದ ತೋಂಟದಾರ್ಯ ಜಗದ್ಗುರುಗಳನ್ನು ಪುಸ್ತಕ ಸಂಸ್ಕೃತಿ ಮೂಲಕ ಅಮರ ಗೊಳಿಸಬೇಕಾದ ಹೊಣೆಗಾರಿಕೆ ಎಲ್ಲ ಶಿಷ್ಯರ ಮೇಲಿದೆ ಎಂದರು. ಹಗಲಿನಲ್ಲಿಯೆ ಸಂಜೆಯಾಯಿತು ಕವಿತೆಯ ಸಾರವನ್ನು ಹೃದಯ ಸ್ಪರ್ಶಿಯಾಗಿ ವಿವರಿಸಿದಾಗ ಭಕ್ತರ ಕಣ್ಣಂಚು ಒದ್ದೆಯಾಯಿತು. ಅಧ್ಯಕ್ಷತೆಯನ್ನು ಶರಣೆ ವಿದ್ಯಾವತಿ ಸೋಮನಾಥ ಅಸ್ಟುರೆ ವಹಿಸಿದ್ದರು.ಶೋಭಕ್ಕ ಅವರು ಧರ್ಮ ಗ್ರಂಥ ಪಠಣ ಮಾಡಿದ ಕಾರ್ಯಕ್ರಮವನ್ನು ದೀಪಕ್ ನಿರೂಪಿಸಿದರು. ರಾಜು ಜುಬರೆ ಮತ್ತು ಅನೇಕ ಗಣ್ಯರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here