ಕೋವಿಡ್ ನಿಯಮ ಪಾಲಿಸಿ,ಭಯ ಬಿಟ್ಟು ಶಾಲೆಗೆ ಬನ್ನಿ:ಮುಖ್ಯ ಶಿಕ್ಷಕಿ ನೇತ್ರಾವತಿ ಸಲಹೆ

0
85

ಚಿತ್ತಾಪುರ:ಮಕ್ಕಳು ರಾಜ್ಯ ಸರ್ಕಾರ ಸೂಚಿಸಿರುವ ಕೋವಿಡ್ ನಿಯಮಗಳನ್ನು ಪಾಲನೆ ಮಾಡಿ ಭಯಪಡದೇ ಶಾಲೆಗೆ ಬನ್ನಿ ಎಂದು ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ನೇತ್ರಾವತಿ ಜೆ.ಎಸ್ ಅವರು ಹೇಳಿದ್ದರು.

ತಾಲ್ಲೂಕಿನ ಭಂಕಲಗಾ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಾರಂಬೋತ್ಸವ,ಪಠ್ಯ ಪುಸ್ತಕ ಮತ್ತು ಮಾಸ್ಕ್ ವಿತರಣಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಕರೋನಾ ಮೂರನೇ ಅಲೆಯಿಂದ ಮಕ್ಕಳಿಗೆ ಹೆಚ್ಚು ತೊಂದರೆ ಇದೆ ಎಂಬ ಮುನ್ಸೂಚನೆ ಆರೋಗ್ಯ ಇಲಾಖೆ ನೀಡಿದೆ.ಅದರ ಹಿನ್ನೆಲೆಯಲ್ಲಿ ಎಲ್ಲರೂ ಕೋವಿಡ್ ನಿಯಮಗಳನ್ನು ಪಾಲನೆ ಮಾಡುವುದರ ಮೂಲಕ ಶಾಲೆಗೆ ಬರಬೇಕು.ತರಗತಿಯಲ್ಲಿ ಶಾಲೆ ಆವರಣದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಸಲಹೆ ನೀಡಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಾಹಿಪಾಲ್ ಮೂಲಿಮನಿ,ಶಾಲೆಯ ಎಸ್.ಡಿ.ಎಂ.ಸಿ.ಅಧ್ಯಕ್ಷ ಶಿವಶರಣಪ್ಪ ಸಾಲಳ್ಳಿ, ಗ್ರಾ.ಪಂ.ಸದಸ್ಯರುಗಳಾದ ರವೀಂದ್ರ ರೆಡ್ಡಿ ಅನಪುರ್,ಗುರುಲಿಂಗಯ್ಯ, ಅರ್ಜುನ್ ಸಾಲಳ್ಳಿ,ಶಾಲೆಯ ಸಿಬ್ಬಂದಿಗಳಾದ ಗೀತಾಮಣಿ,ಚಾಂದಪಾಶ,ಶಿವಣ್ಣ,ರಮಾಭಾಯಿ, ರಾಜೇಶ್ವರಿ ಅಂಗನವಾಡಿ ಕಾರ್ಯಕರ್ತರು,ಆಶಾ ಕಾರ್ಯಕರ್ತರು ಸೇರಿದಂತೆ ಊರಿನ ಪ್ರಮುಖರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here