ಹಟ್ಟಿ ಚಿನ್ನದ ಗಣಿ: ಪಟ್ಟಣ ಸಮೀಪದ ಆನ್ವರಿ ಗ್ರಾಮ ಪಂಚಾಯ್ತಿಯ ಹಿರೇನಗನೂರು ಚುಕನಟ್ಟಿ ಗ್ರಾಮಗಳಲ್ಲಿ ಇತ್ತೀಚಿಗೆ ನಡೆದ ಉದ್ಯೋಗ ಖಾತ್ರಿ ಯೋಜನೆಯಡಿ ಗೋಕಟ್ಟೆ ನಿರ್ಮಾಣ ಕಾಮಗಾರಿಯಲ್ಲಿ ಕೂಲಿ ಕಾರ್ಮಿಕರಿಗೆ ಆದಂತಹ ವೇತನ ತಾರತಮ್ಯ ಮತ್ತು ಪಂಚಾಯ್ತಿಯಲ್ಲಿ ನಡೆಯುತ್ತಿರುವ ಬ್ರಹ್ಮಾಂಡ ಭ್ರಷ್ಟಾಚಾರ ತಡೆಯುವಂತೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ ( ಕೆ.ಪಿ .ಆರ್ .ಎಸ್. ) ಹಾಗೂ ಜನವಾದಿ ಮಹಿಳಾ ಸಂಘಟನೆ (ಜೆಎಂಎಸ್) ಗ್ರಾಮ ಘಟಕ ಚುಕನಟ್ಟಿ-ಹಿರೇನಗನೂರು ಜಂಟಿ ಗ್ರಾಮಗಳ ನೇತೃತ್ವದಲ್ಲಿ ಗ್ರಾಮ ಪಂಚಾಯಿತಿ ಆನ್ವರಿಯಲ್ಲಿ ಪ್ರತಿಭಟನಾ ಮೆರವಣಿಗೆ ಮಾಡಲಾಯಿತು.
ಆನ್ವರಿ ಬಸ್ ನಿಲ್ದಾಣದಿಂದ ಪಂಚಾಯ್ತಿಯವರೆಗೆ ಕಾರ್ಮಿಕ ಸಂಘದ ನೇತೃತ್ವದಲ್ಲಿ ಜಮ ದ್ರೋಹಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗುತ್ತ ಗ್ರಾಮ ಪಂಚಾಯಿತಿ ಕಚೇರಿಗೆ ಆವರಣದಲ್ಲಿ ಸಭೆ ಸೇರಿ ಈ ಕೂಡಲೇ ಜನರಿಗೆ ಆದಂತಹ ಅನ್ಯಾಯ ಸರಿಪಡಿಸಬೇಕು ಎಂದು ಎಸ್ ಎಫ್ಐ ಜಿಲ್ಲಾಧ್ಯಕ್ಷ ಹಾಗೂ ಗ್ರಾಪಂ ಸದಸ್ಯ ರಮೇಶ್ ವೀರಾಪುರ ಆಗ್ರಹಿಸಿದರು.
ನಂತರ ಮಾತನಾಡಿದ ಅವರು ಕೊರೊನಾದಿಂದ ಜನರ ಬದುಕು ದುಸ್ಥಿತಿಗೆ ತಲುಪಿದೆ. ಇಂಥಹ ಸಂದರ್ಭದಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಮೂಲಕ ಜನರ ಬದುಕನ್ನು ಸುಧಾರಿಸಬೇಕು. ಆದರೆ ಅನ್ವರಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ನರೇಗಾ ಜೆ ಇ ಅವರು ಉದ್ಯೋಗ ಖಾತ್ರಿಯಲ್ಲಿ ಹಿರೇನಗನೂರು ಗ್ರಾಮದ ಗುಡ್ಡದಲ್ಲಿ ಗೋಕಟ್ಟೆ ನಿರ್ಮಾಣ ಮಾಡುವ ಕೆಲಸದಲ್ಲಿ ಕೂಲಿಕಾರರಿಗೆ 289 ರೂಪಾಯಿ ಕೊಲಿ ಬದಲಾಗಿ 107 ಮತ್ತು 120 ರೂಪಾಯಿ ಕೂಲಿ ಹಾಕುವ ಮೂಲಕ ಕಾರ್ಮಿಕರಿಗೆ ದ್ರೋಹ ಬಗೆದಿದ್ದಾರೆ, ಜನರನ್ನು ನರೇಗ ದಿಂದ ದೂರ ಉಳಿಯುವಂತೆ ಮಡಿದ್ದಾರೆ.
ಇದನ್ನು ಕರ್ನಾಟಕ ಮಹಿಳಾ ಸಂಘಟಪ (ಜಿ ಎಂ ಎಸ್ ) ಸಂಘಟಿಗಳು ತೀವ್ರವಾಗಿ ಖಂಡಿಸುವೆ , ಕರ್ನಾಟಕ ಪ್ರಾಂತ ರೈತ ಸಂಘಟನೆ ( ಕೆಪಿಆರ್‌ಎಸ್ ) , ಹಾಗೂ ಜನರ ಜಿಪಿಎಸ್ ಮಾಡಲು ಅಲ್ಲದೇ ಜೆಇ ಅವರು ಎಂಬಿ ಬರೆಯಲು ಮೇಟ್‌ಗಳೆಂದ ಹಣ ತೆಗೆದುಕೊಳ್ಳುತ್ತಾರೆ . ಅಲ್ಲದೇ ಕಂಪ್ಯೂಟರ್ ಆಪರೇಟರ್ ಎನ್ಎಂಆರ್ ಹಾಕಲು 1000-2000 ರೂಪಾಯಿ ಹಣ ತೆಗೆದುಕೊಳ್ಳುತ್ತಾರೆ. ಪಂಚಾಯತ್ ನಲ್ಲಿ ಈಗ ಉದ್ಯೋಗ ಖಾತ್ರಿಯನ್ನು ಹಳ್ಳ ಹಿಡಿಸುತ್ತಿದ್ದಾರೆ. ಇದರಿಂದ ನರೇಗಾ ಯೋಜನೆ ಸಮರ್ಪಕವಾಗಿ ಜಾರಿಯಾಗುತ್ತಿಲ್ಲ. ಈ ಕೂಡಲೇ ಈ ಬಗೆ ಪರಿಶೀಲಿಸಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು.
ಅಲ್ಲದೇ ಸಮರ್ಪಕವಾಗಿ ಉದ್ಯೋಗ ಖಾತ್ರಿ ಯೋಜನೆಯನ್ನು ಜಾರಿಗಾಗಿ ಮೇಟ್ ಗಳಿಗೆ ತರಬೇತಿ ನೀಡಬೇಕು, ಕೆಲಸದ ಸ್ಥಳದಲ್ಲಿ ಶುದ್ಧ, ನೀರು, ಪ್ರಥಮ ಚಿಕಿತ್ಸೆ ಪೆಟ್ಟಿಗೆ, ಸ್ಯಾನಿಟೈಸರ್, ಮಾಪ್, ಮಕ್ಕಳನ್ನು ಕರೆದುಕೊಳ್ಳಲು ವ್ಯವಸ್ಥೆ ಸೇರಿದಂತೆ ಯಾವುದೇ ವ್ಯವಸ್ಥೆ ಮಾಡಿರುವುದಿಲ್ಲ. ಈ ಬಗ್ಗೆಯೂ ಪರಿಶೀಲಿಸಿ ಪಿಡಿಒ ಹಾಗೂ ಜೆಇ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಅಲ್ಲದೇ ಈ ಕೆಳಗಿನ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಲಾಯಿತು.
ಕಡಿಮೆ ಕೂಲಿ ಹಾಕಲು ಕಾರಣರಾದ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕು, ಕಾಯಕ ಜಲಧುಗಳಗೆ ಗುರುತಿನ ಚೀಟಗಳನ್ನು ಕೊಡಬೇಕು, ಕೆಲಸ ಮಾಡುವ ಸ್ಥಳಗಳಲ್ಲಿ ಟೆಂಟು ನೀರು , ಮಾಸ್ಕ್, ಸೆಂಟೈನರ ‘ , ಪ್ರಥಮ ಕಿತ್ಸೆ ಪಟ್ಟಗೆ ತರಿದಂತೆ ಎಲ್ಲ ಮೂಲಭೂತ ಸೌಕರ್ಯ ಒದಗಿಸಬೇಕು, ಪ್ರಯಾಣ ವೆಚ್ಚ ಮತ್ತು ಸಾಮಗ್ರಿ ವೆಚ್ಚ. 60 ವರ್ಷ ಮೇಲ್ಪಟ್ಟವರಿಗೆ ಮತ್ತು ಅಂಗವಿಕಲರಿಗೆ ಪ್ರತ್ಯೇಕ ಎನ್ ಎಂ ಆರ್ ತೆಗೆಯಬೇಕು ಎಂಬ ಅನೇಕ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ಎಸ್ಎಫ್ಐ ಜಿಲ್ಲಾಧ್ಯಕ್ಷ ಹಾಗೂ ಗ್ರಾಪಂ ಸದಸ್ಯ ರಮೇಶ ವೀರಾಪೂರು, ಕೆಪಿಆರ್ ಎಸ್ ಮುಖಂಡರಾದ ಲಿಂಗರಾಜ ದೇಸಾಯಿ, ನಿಂಗಪ್ಪ ಬೆಂಚಮಟ್ಟಿ, ನಾಗರೆಡ್ಡೆಪ್ಪ ತವಗ, ಬಸವರಾಜ್ ಕೆಲ್ಲೂರು, ರಾಜಾಸಾಬ್, ಹಸೇನ್ ಸಾಬ್, ದೇವಪ್ಪ ಮಿಂಚೇರಿ, ಮೌನೇಶ ಟೌಲರ್, ಜನವಾದಿ ಮಹಿಳಾ ಸಂಘಟನೆ ಮುಖಂಡರಾದ ಚಂದ್ರಕಲಾ, ನಿಂಗಮ್ಮ, ಶರಣಮ್ಮ, ದ್ಯಾವಮ್ಮ, ದೇವಮ್ಮ, ಹಂಪಮ್ಮ, ಡಿವೈಎಫ್ಐ ಮುಖಂಡ ಶಿವರಾಜ್ ಕಪಗಲ್, ಎಸ್ಎಫ್ಐ ಮುಖಂಡ ಮಹೇಶ ಗರ್ಚಿನಮನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.