ಗಣೇಶೋತ್ಸವಕ್ಕಾಗಿ ಫ್ಲಿಪ್ ಕಾರ್ಟ್ ನಿಂದ ಮನೆ ಬಾಗಿಲಿಗೆ ಕ್ವಿಕ್ ಹೈಪರ್ ಲೋಕಲ್ ಸೇವೆ ವಿಸ್ತರಣೆ

0
20

ಬೆಂಗಳೂರು: ಭಾರತದ ದೇಶೀಯ ಇ-ಕಾಮರ್ಸ್ ಮಾರ್ಕೆಟ್ ಪ್ಲೇಸ್ ಆಗಿರುವ ಫ್ಲಿಪ್ ಕಾರ್ಟ್ ತನ್ನ ಹೈಪರ್ ಲೋಕಲ್ ಸೇವೆಯಾದ ಫ್ಲಿಪ್ ಕಾರ್ಟ್ ಕ್ವಿಕ್ ಅನ್ನು ಇನ್ನೂ ಮೂರು ಮೆಟ್ರೋ ನಗರಗಳಾದ ಕೊಲ್ಕತ್ತ, ಚೆನ್ನೈ ಮತ್ತು ಮುಂಬೈಗೆ ವಿಸ್ತರಣೆ ಮಾಡಿದೆ. ಈ ವಿಸ್ತರಣೆಯಿಂದ ಫ್ಲಿಪ್ ಕಾರ್ಟ್ ತನ್ನ ಗ್ರಾಹಕರಿಗೆ ಅಗತ್ಯ ವಸ್ತುಗಳನ್ನು ಸುರಕ್ಷಿತ ಮತ್ತು ತಡೆರಹಿತವಾಗಿ ಮನೆ ಬಾಗಿಲಿಗೆ ತಲುಪಿಸಲಿದೆ.

ಕರ್ನಾಟಕದ ಗ್ರಾಹಕರು ಇನ್ನು ಮುಂದೆ ಪೂಜಾ ಸಾಮಗ್ರಿಗಳು, ಮೋದಕ ತಯಾರಿಸುವ ಪದಾರ್ಥಗಳು, ಸಿಹಿತಿಂಡಿಗಳು & ಡ್ರೈಫ್ರೂಟ್ಸ್, ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ಖರೀದಿಸಬಹುದಾಗಿದೆ. ಈ ವರ್ಷ 75+ ಗಣೇಶ ಚತುರ್ಥಿ ಆಯ್ಕೆಗಳಿದ್ದು, ಫ್ಲಿಪ್ ಕಾರ್ಟ್ ಕ್ವಿಕ್ ಗ್ರಾಹಕರಿಗೆ ಅನನ್ಯ ಕೊಡುಗೆಗಳನ್ನು ಒದಗಿಸುವುದಾಗಿ ಭರವಸೆ ನೀಡಿದೆ.

Contact Your\'s Advertisement; 9902492681

ಗ್ರಾಹಕರಿಗೆ ಆನ್ ಲೈನ್ ನಲ್ಲಿ ಆರ್ಡರ್ ಮಾಡಲು ಮತ್ತು ಮುಂದಿನ 90 ನಿಮಿಷಗಳಲ್ಲಿ ಡೆಲಿವರಿ ಪಡೆಯಲು ಅಥವಾ ಅವರ ಅನುಕೂಲಕ್ಕೆ ಅನುಗುಣವಾಗಿ ಎರಡು ಗಂಟೆ ಸ್ಲಾಟ್ ಬುಕ್ ಮಾಡಲು ಅವಕಾಶ ನೀಡುತ್ತದೆ. ಗ್ರಾಹಕರು ತಮ್ಮ ಮೊದಲ ಆರ್ಡರ್ ನಲ್ಲಿ ಉಚಿತ ವಿತರಣೆಯನ್ನು ಪಡೆಯಲಿದ್ದಾರೆ. ಅಲ್ಲದೇ ಅವರ ನಂತರದ ಆರ್ಡರ್ ಗಾತ್ರವು 199 ರೂಪಾಯಿಗಳಿಗಿಂತ ಹೆಚ್ಚಿದ್ದರೆ ಈ ಅವಕಾಶವನ್ನು ಹೊಂದಲಿದ್ದಾರೆ. ಗ್ರಾಹಕರು ದಿನದ ಯಾವುದೇ ಸಮಯದಲ್ಲಿ ಆರ್ಡರ್ ಗಳನ್ನು ಮಾಡಬಹುದು ಮತ್ತು ಅಂತಹ ಉತ್ಪನ್ನಗಳನ್ನು ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿವರೆಗೆ ಪಡೆದುಕೊಳ್ಳುವ ಆಯ್ಕೆ ಮಾಡಿಕೊಳ್ಳಬಹುದು.

ಫ್ಲಿಪ್ ಕಾರ್ಟ್ ಕ್ವಿಕ್ ನ ಉಪಾಧ್ಯಕ್ಷ ಸಂದೀಪ್ ಕಾರ್ವ ಅವರು ಮಾತನಾಡಿ,`ಫ್ಲಿಪ್ ಕಾರ್ಟ್ ಕ್ವಿಕ್ ನೊಂದಿಗೆ ನಮ್ಮ ಗ್ರಾಹಕರಿಗೆ ವೈಯಕ್ತಿಕ ಅನುಭವ ಮತ್ತು ಆಯ್ಕೆಯನ್ನು ಒದಗಿಸಲು ತಂತ್ರಜ್ಞಾನ ಮತ್ತು ಪೂರೈಕೆ ಜಾಲ ಸಾಮರ್ಥ್ಯದ ಅನ್ಲಾಕ್ ಮಾಡುವುದು ನಮ್ಮ ಗುರಿಯಾಗಿದೆ. ನಾವು ವೇಗದ ವಿತರಣೆಗಳನ್ನು ಪರಿಹರಿಸಲು ಮಾತ್ರವಲ್ಲದೇ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗುವಂತೆ ಮಾಡಲು ನಾವು ಕೆಲಸ ಮಾಡುತ್ತಿದ್ದೇವೆ. ಕರ್ನಾಟಕದಲ್ಲಿ ಗಣೇಶೋತ್ಸವ ಆಚರಣೆಗಳು ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಂಡಿವೆ ಹಾಗೂ ಹಬ್ಬದ ಋತುವಿನಲ್ಲಿಯೂ ಈ ಪ್ರಾಮುಖ್ಯತೆ ಇರುತ್ತದೆ. ಈ ಅವಧಿಯಲ್ಲಿ ನಾವು ನಮ್ಮ ಗ್ರಾಹಕರಿಗೆ ತಾಜಾ ಹಣ್ಣುಗಳು ಮತ್ತು ತರಕಾರಿಗಳು, ಗೃಹೋಪಯೋಗಿ ಉತ್ಪನ್ನಗಳು ಮತ್ತು ಮಗುವಿನ ಆರೈಕೆಯ ಉತ್ಪನ್ನಗಳನ್ನು ಆರ್ಡರ್ ಮಾಡಿದ 90 ನಿಮಿಷಗಳೊಳಗೆ ವಿತರಣೆ ಮಾಡುವ ಗುರಿಯನ್ನು ಹೊಂದಿದ್ದೇವೆ’’ ಎಂದರು.

ಬೆಂಗಳೂರಿನಲ್ಲಿ 2020 ರಲ್ಲಿ ಫ್ಲಿಪ್ ಕಾರ್ಟ್ ಕ್ವಿಕ್ ಅನ್ನು ಆರಂಭಿಸಲಾಗಿದ್ದು, ಉತ್ಪನ್ನಗಳ ಲಭ್ಯತೆಯನ್ನು ವಿಸ್ತರಣೆ ಮಾಡಲು ಮತ್ತು ಫ್ಲಿಪ್ ಕಾರ್ಟ್ ಹಬ್ ಗಳಿಂದ ಉತ್ಪನ್ನಗಳನ್ನು ಆರ್ಡರ್ ಮಾಡುವ ಗ್ರಾಹಕರಿಗೆ ತ್ವರಿತವಾದ ವಿತರಣೆಯನ್ನು ಸಕ್ರಿಯಗೊಳಿಸಲು ಆರಂಭ ಮಾಡಲಾಗಿತ್ತು. ಹೈಪರ್ ಲೋಕಲ್ ವಿತರಣಾ ಸೇವೆಯು ತಾಜಾ ಹಣ್ಣುಗಳು ಮತ್ತು ತರಕಾರಿಗಳು, ಡೈರಿ ಉತ್ಪನ್ನಗಳು, ದಿನಸಿ, ಮೊಬೈಲ್ ಗಳು, ಎಲೆಕ್ಟ್ರಾನಿಕ್ಸ್ ಮತ್ತು ಮಗುವಿನ ಆರೈಕೆಯಂತಹ ವಿಭಾಗಗಳಲ್ಲಿ 2500 ಕ್ಕೂ ಹೆಚ್ಚು ಉತ್ಪನ್ನಗಳ ಸಂಗ್ರಹವನ್ನು ಒದಗಿಸುತ್ತದೆ. ಬೆಂಗಳೂರು, ದೆಹಲಿ, ಗುರುಗಾಂವ್, ಘಾಜಿಯಾಬಾದ್, ನೋಯ್ಡಾ, ಹೈದ್ರಾಬಾದ್, ಪುಣೆ, ಮುಂಬೈ, ಕೊಲ್ಕತ್ತ ಮತ್ತು ಚೆನ್ನೈ ಸೇರಿದಂತೆ 10 ನಗರಗಳಲ್ಲಿ ಈಗ ಫ್ಲಿಪ್ ಕಾರ್ಟ್ ಕ್ವಿಕ್ ಸೇವೆ ಲಭ್ಯವಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here