ಅರವಿಂದ ಚವ್ಹಾಣ ಬಂಧಿಸಬೇಕೆಂದು ಒತ್ತಾಯಿಸಿ ಕಾಂಗ್ರೆಸ್‍ನಿಂದ ಪ್ರತಿಭಟನೆ

0
417

ಶಹಾಬಾದ:ಚಿತ್ತಾಪೂರ, ರಾವೂರ ಮತ್ತು ವಾಡಿಯಲ್ಲಿ ಶಾಸಕ ಪ್ರಿಯಾಂಕ್ ಖರ್ಗೆ ಕಾಣೆಯಾಗಿದ್ದಾರೆ ಎನ್ನುವ ಪೆÇೀಸ್ಟರ್ ಅಂಟಿಸಿರುವ ಬಿಜೆಪಿ ಮುಖಂಡ ಅರವಿಂದ ಚವ್ಹಾಣ ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಪಿಎಸ್‍ಐ ಅಶೋಕ ಪಾಟೀಲ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಶೀದ್ ಮರ್ಚಂಟ್ ಹಾಗೂ ಮುಖಂಡ ಸುರೇಶ ಮೆಂಗನ್ ಮಾತನಾಡಿ, ಮುಂದಿನ ಚುನಾವಣೆಯಲ್ಲಿ ಟಿಕೆಟ್ ಪಡೆಯಲು ಶಾಸಕ ಪ್ರಿಯಾಂಕ್ ಖರ್ಗೆ ಕಾಣೆಯಾಗಿದ್ದಾರೆ ಎನ್ನುವ ಪೋಸ್ಟರ್ ಚಿತ್ತಾಪೂರ, ರಾವೂರ ಮತ್ತು ವಾಡಿಯಲ್ಲಿ ಅರವಿಂದ ಚವ್ಹಾಣ ಅಂಟಿಸಿರುವುದು ನೋಡಿದರೇ ಚಿಲ್ಲರೆ ರಾಜಕಾರಣ ಮಾಡುತ್ತಿದ್ದಾರೆ.

Contact Your\'s Advertisement; 9902492681

ಶಾಸಕ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ಪೋಸ್ಟರ್ ಅಂಟಿಸಿ ಬಿಜೆಪಿ ಹೈಕಮಾಂಡ್‍ನಿಂದ ಬೇಷ್ ಎನಿಸಿಕೊಂಡರೆ ಟಿಕೆಟ್ ದಕ್ಕುತ್ತದೆ ಎಂದು ತಿಳಿದುಕೊಂಡಿದ್ದಾನೆ.ಇಡೀ ಕ್ಷೇತ್ರದಲ್ಲಿ ಪ್ರಿಯಾಂಕ್ ಖರ್ಗೆ ಅವರು ಮಾಡಿದ ಅಭಿವೃದ್ಧಿಪರವಾದ ಕೆಲಸಗಳನ್ನು ಒಮ್ಮೆ ಅರವಿಂದ ಚವ್ಹಾಣ ಕಣ್ಣು ಹಾಯಿಸಲಿ.ಅದನ್ನು ಬಿಟ್ಟು ಇಲ್ಲಸಲ್ಲದ ಕೆಲಸಗಳನ್ನು ಮಾಡುವುದು ನೋಡಿದರೇ ಬಿಜೆಪಿ ಪಕ್ಷದ ಕಾರ್ಯಕರ್ತನಿಗಿರುವ ಸಾಮನ್ಯ ಜ್ಞಾನ ಇಲ್ಲದಿರುವುದು ಕಾಣುತ್ತದೆ. ಅರವಿಂದ ಚವ್ಹಾಣ ಅವರೇ ನಿಮ್ಮ ಸಂಸದ ಡಾ.ಉಮೇಶ ಜಾಧವ ಇಲ್ಲಿಯವರೆಗೆ ಶಹಾಬಾದ, ಚಿತ್ತಾಪೂರ ಪಟ್ಟಣಕ್ಕೆ ಬಂದಿಲ್ಲ. ಅಲ್ಲದೇ ಅವರು ಮಾಡಿದ ಸಾಧನೆಗಳನ್ನು ಬಿಡಿಸಿ ಹೇಳಲಿ ಎಂದು ಸವಾಲು ಹಾಕಿದರು. ತಮ್ಮ ತಟ್ಟೆಯಲ್ಲಿ ನೋಣ ಬಿದ್ದಿದ್ದು, ಇನ್ನೊಬ್ಬರ ತಟ್ಟೆಯ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಿಯಾಂಕ್ ಖರ್ಗೆ ಅವರು ಮಾಡಿದ ನಾಗಾವಿ ಶೈಕ್ಷಣಿಕ ಹಬ್, ವಾಡಿ ನ್ಯೂ ಟೌನ್, ರಸ್ತೆಗಳು ಸೇರಿದಂತೆ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ನೋಡಿ ಮಾತನಾಡಲಿ.ತಾವೇ ಜಿಪಂ ಸದಸ್ಯರಿದ್ದಾಗ ಯಾವ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೀರಿ ಎಂಬುದು ಎಲ್ಲರಿಗೂ ಗೊತ್ತಿದ್ದ ವಿಷಯ.ಶಾಸಕ ಪ್ರಿಯಾಂಕ್ ಖರ್ಗೆ ಅವರು ಭಾರತ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡಿದಲ್ಲದೇ ತಳವಾರ ಮತ್ತು ಪರಿವಾರ ಸಮುದಾಯವನ್ನು ಎಸ್‍ಟಿಗೆ ಸೇರಿಸುವಂತೆ ದೆಹಲಿಗೆ ಮನವಿ ಸಲ್ಲಿಸಲು ಹೋಗಿದ್ದರು.ಆದರೆ ಬಿಜೆಪಿಯವರು ಅವರ ಅಭಿವೃದ್ಧಿ ಕಾರ್ಯ ಸಹಿಸದೇ ಕೆಟ್ಟ ಪ್ರವೃತ್ತಿಗೆ ಇಳಿದಿರುವುದು ದುರಂತ ಎಂದರಲ್ಲದೇ ಶಾಸಕ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ಪೆÇೀಸ್ಟರ್ ಅಂಟಿಸಿರುವ ಬಿಜೆಪಿ ಮುಖಂಡ ಅರವಿಂದ ಚವ್ಹಾಣ ಅವರನ್ನು ಬಂಧಿಸಬೇಕೆಂದು ಒತ್ತಾಯಿಸಿದರು.

ಯುವ ಕಾಂಗ್ರೆಸ್ ಅಧ್ಯಕ್ಷ ಕಿರಣ ಚವ್ಹಾಣ, ಸೂರ್ಯಕಾಂತ ಕೋಬಾಳ,ಡಾ.ಅಹ್ಮದ್ ಪಟೇಲ್,ರಾಜೇಶ ಯನಗುಂಟಿಕರ್, ನಾಗರಾಜ ಕರಣಿಕ್, ನಾಗಣ್ಣ ರಾಂಪೂರೆ, ಕೃಷ್ಣಪ್ಪ ಕರಣಿಕ್,ಸುನೀಲ ಮೆಂಗನ್,ಅಜರೋದ್ದಿನ್,ಮುನ್ನಾ ಪಟೇಲ್, ಭೀಮಯ್ಯ ಗುತ್ತೆದಾರ,ಮೆಹಬೂಬ ಅಪ್ಸರಾ, ನಾಗೇಂದ್ರ ನಾಟೀಕಾರ, ಮಹ್ಮದ್ ಇಮ್ರಾನ್, ಸ್ನೇಹಲ್ ಜಾಯಿ,ಮರಲಿಂಗ ಕಮರಡಗಿ, ಮಲ್ಕಪ್ಪ ಮುದ್ದಾ,ದಲೀಪ ನಾಯಕ, ದೇವೆಂದ್ರ ಹೊಸಮನಿ,ಭರತ್ ಧನ್ನಾ,ಮುಜಾಹಿದ್ ಹುಸೇನ್ ಸೇರಿದಂತೆ ಅನೇಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here