ಸೇಡಂ: ದೇಶದಲ್ಲಿ ಅದೆಷ್ಟೋ ಜನರು ಕ್ಷಯರೋಗಕ್ಕೆ ಬಲಿಯಾಗಿ ಕುಟುಂಬಗಳು ತಬ್ಬಲಿ ಅಗುತ್ತಿವೆ ಒಂದು ಕಡೆ ಕರೋನ ದಂತ ಮಹಾಮಾರಿಯಿಂದ ಅದೆಷ್ಟೋ ಜನರು ಸಾವನ್ನಪ್ಪಿದರೆ. ರೋಗಕ್ಕೆ ಔಷಧ ಇದ್ದರು ಜನರಿಗೆ ಇನ್ನೂ ಅದರ ಭಯ ಕ್ಷಯರೋಗ ಹಾಗೂ ಕರೋನ ಬಗ್ಗೆ ಮಾಹಿತಿ ಇಲ್ಲದಿರುವುದರಿಂದ ಗ್ರಾಮೀಣ ಪ್ರದೇಶದ ಜನರು ಕ್ಷಯರೋಗಕ್ಕೆ ತುತ್ತಾಗಿ ಬಲಿಯಾಗುತ್ತಿದ್ದರೆ. ಹಾಗೆ ಕರೋನ ವ್ಯಾಕ್ಸಿನೇಷನ್ ಹಾಕಿಕೊಳ್ಳದೆ ಜನರು ಹಿಂಜರಿಯುತ್ತಿದ್ದರೆ ನಮ್ಮ ಆರೋಗ್ಯ ಇಲಾಖೆಯಿಂದ ನಗರ ಮತ್ತು ಗ್ರಾಮದಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತಿದ್ದೆವೆ ಅದ್ದರಿಂದ ನಮ್ಮ ದೇಶದ ಪ್ರಧಾನಮಂತ್ರಿಯವರು 2025ಕ್ಕೆ . ಕ್ಷಯ ಮುಕ್ತ ಭಾರತ ಮಾಡಲು ಪಣ ತೊಟ್ಟಿದ್ದರೆ. ಅದರಂತೆ ನಮ್ಮ ಕ್ಷಯರೋಗ ಬರದoತೆ ಎಲ್ಲರೂ ಸಹಕಾರಿಸಬೇಕು ಎಂದು ಜಿಲ್ಲಾ ಕ್ಷಯರೋಗ ನಿರ್ಮೂಲನ ಕೇಂದ್ರದ ಹಿರಿಯ ಆರೋಗ್ಯ ನಿರೀಕ್ಷಿಣಾಧಿಕಾರಿ ಸಂತೋಷ ಕುಡಳ್ಳಿ ಹೇಳಿದರು.
ಸೇಡಂ ನಗರದ ತಾಲೂಕ ಉಪ ಕಾರಾಗೃಹದಲ್ಲಿ ಹಮ್ಮಿಕೊಂಡ ತಾಲ್ಲೂಕ ಆರೋಗ್ಯಾಧಿಕರಿ ನೇತ್ರತ್ವದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಏಡ್ಸ್ / ಕ್ಷಯರೋಗ ನಿರ್ಮೂಲನಾ ( ನಿಯಂತ್ರಣ ) ಕೇಂದ್ರ ಮತ್ತು ಎನ್ ಸಿ ಡಿ ಕಾರ್ಯಕ್ರಮ ಹಾಗೂ ಸ್ವಾಮಿ ವಿವೇಕಾನಂದ ಯೂಥ್ ಮೂಮೇಂಟ್ ಸಂಸ್ಥೆ, ಜಂಟಿಯಾಗಿ ಬಂಧಿ ಖಾನೆಯ ಅಪಾರಧಿಗಳಿಗೆ ಅವರ ಅರೋಗ್ಯದ ದೃಷ್ಠಿಯಿಂದ ಉಚಿತ ಆರೋಗ್ಯ ತಪಾಸಣೆ ಹಾಗೂ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಪ್ರತಿ ಒಬ್ಬ ಮನುಷ್ಯ ತಪ್ಪು ಮಾಡುವುದು ಸಹಜ ಅದನ್ನು ತಿದ್ದಿಕೊಂಡು ಉತ್ತಮ ವ್ಯಕ್ತಿಯಾಗಿ ಸಮಾಜಕ್ಕೆ ಒಳ್ಳೆಯ ವ್ಯಕ್ತಿಯಾಗಿ ಬದುಕು ಬೇಕು,ಹಾಗೆ ನಮ್ಮ ಇಲಾಖೆವತಿಯಿಂದ ಆರೋಗ್ಯ ಶಿಕ್ಷಣದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಕ್ಷಯರೋಗ ಒಂದು ಸಾಮಾಜಿಕ ಖಾಯಿಲೆ ಅಗಿದ್ದು ಇದನ್ನು ಸಾಮಾಜಿಕ ಜವಾಬ್ದಾರಿಯ ಮೂಲಕ ನಿರ್ಮೂಲನೆ ಮಾಡಬೇಕಾಗಿದೆ .ವ್ಯಕ್ತಿಯಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗಿರುವ ಹಾಗೂ ಶ್ವಾಸ ಕೋಶವು ಹಾನಿಯಾಗಿರುವ ಕಾರಣದಿಂದ ಕ್ಷಯರೋಗ ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ.
ಎರಡು ವಾರಕಿಂತ ಸತತ ಕೆಮ್ಮು , ರಾತ್ರಿ ವೇಳೆ ಜ್ವರ ಬೇವರು ಬರುವ ಲಕ್ಷಣ, ಹಸಿವಾಗದೆ ಇರುವುದು, ತೂಕದಲ್ಲಿ ಏರುಪೇರು ಅಗುವುದು ಇಂತಹ ಲಕ್ಷಣ ಕಫದ ಮಾದರಿ ಸಂಗ್ರಹ ತೆಗೆದುಕೊಳ್ಳುವುದು ಹಾಗೆ ಎಕ್ಸ್ ರೇ ಮೂಲಕ ಪತ್ತೆ ಹಚ್ಚಬಹುದು. ಅತ್ಮಸ್ಥೈರ್ಯ ತುಂಬವ ಕೆಲಸದ ಜೊತೆಗೆ ಲಕ್ಷಣ ಇದ್ದವರಿಗೆ ಕಫದ ಮಾದರಿ ಸಂಗ್ರಹ ಮಾಡಬೇಕಾಗಿದೆ. ಅವರ ಆರೋಗ್ಯ ಬಹಳ ಮುಖ್ಯ ಅದರ ಜೊತೆಗೆ ಕ್ಷಯರೋಗ ಮತ್ತು ಮಹಾ ಮಾರಿ ಕೊರೊನಾ ರೋಗದ ಬಗ್ಗೆ ಹೇಗೆ ರಕ್ಷಣೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಎಸ್ ಟಿ ಎಸ್ ಮಹಂತೇಶ ಹಾವನೂರ, ಐ ಸಿ ಟಿ ಸಿ ಅಪ್ತ ಸಮಾಲೋಚಕಿ ಜಗದೇವಿ ಅವರು ಮಾತನಾಡುತ್ತಾ ಹೆಚ್ ಐ ವಿ ಸೋಂಕಿನ ಬಗ್ಗೆ ಮಾಹಿತಿ ನೀಡಿದರು ಮತ್ತು ಎನ್ ಸಿ ಡಿ ಸಮಾಲೋಚಕ ಕಾಶಿನಾಥ ಅವರ ತಂಡ ಇತ್ತೀಚಿನ ದಿನಗಳಲ್ಲಿ ಬಿಪಿ. ಶುಗರ್ ನಂತ ಕಾಯಿಲೆಗಳು ಹೆಚ್ಚಾಗುತ್ತ ಹೋಗುತ್ತಿದೆ. ಸಣ್ಣ ವಯಸ್ಸಿನ ವರು ಹಿಡಿದು ವಯೊವೃದ್ದರಲ್ಲಿ ಹೆಚ್ಚು ಹೆಚ್ಚು ಕಂಡು ಬರುತ್ತಿದೆ. ಪ್ರತಿ ಒಬ್ಬರು ಸಕ್ಕರೆ ಕಾಯಿಲೆ ಬಗ್ಗೆ ರಕ್ತದೊತ್ತಡ ಬಗ್ಗೆ ನೀಶ್ ಕಾಳಜಿ ಮಾಡಬರದು ಎಂದು ಬಂಧಿಖಾನೆಯಲ್ಲಿ ವಿವರಿದರು. ವಿಶೇಷವಾಗಿ ಬಿಪಿ ಮತ್ತು ಶುಗರ್ ಪರೀಕ್ಷೆ ಬಂಧಿಖಾನೆಯ ಆರೋಪಿಗಳಿಗೆ ತಪಾಸಣೆ ಮಾಡಲಾಯಿತು.
ವೇದಿಕೆ ಮೇಲೆ ಪ್ರಮುಖರಾದ ತಾಲ್ಲೂಕ ಅಧಿಕ್ಷಕರಾದ ರಾಜಕುಮಾರ ದೊಡ್ಡಮನಿ. ಟಿ ಬಿ ಹೆಚ್ ವಿ ಬೆನ್ನಾಜೀ ಮಿನ್. ಜೈಲರ್ ಜಗದೀಶ್ ಪೂಜಾರಿ, ಪಿ ಪಿ ಎಂ ಸುನೀಲ್ . ನಿಲೋಪರ್, ಹಾಗೆ ಉಪ ಕಾರಾಗೃಹ ದ ಸಿಬ್ಬಂದಿ ವರ್ಗದವರು. ಇನ್ನಿತರ ಆರೋಗ್ಯ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.