ಕಾಳಗಿ: ರಟಕಲ್ ಗ್ರಾಮವನ್ನು ಹೋಬಳಿ ಕೇಂದ್ರವನ್ನಾಗಿಸಬೇಕೆಂಬ ಗ್ರಾಮಸ್ಥರ ಬೇಡಿಕೆಗೆ ಬೃಹತ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿ ಗ್ರೀನ್ ಸಿಗ್ನಲ್ ನೀಡಿದ್ದಾರೆ
ಅವರು ಕಲಬುರಗಿ ಜಿಲ್ಲೆಯ ಕಾಳಗಿ ತಾಲ್ಲೂಕಿನಲ್ಲಿ ಬರುವ ದೊಡ್ಡ ಗ್ರಾಮವಾದ ರಟಕಲ್ ಗ್ರಾಮವನ್ನು ಹೋಬಳಿ ಕೇಂದವನ್ನಾಗಿ ಅನುಮೋದಿಸಲು ಶಾಸಕ ಅವಿನಾಶ್ ಜಾಧವ್ ಅವರು ಸಲ್ಲಿಸಿದ ಮನವಿ ಪತ್ರದಲ್ಲಿ ಕೋರಿದ್ದು. ಈ ನಿಟ್ಟಿನಲ್ಲಿ ರಟಕಲ್ ಗ್ರಾಮವನ್ನು ಹೋಬಳಿ ಕೇಂದ್ರವನ್ನಾಗಿ ರಚಿಸಲು ಸೂಕ್ತ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಆದೇಶ ಹೋರಡಿಸಿದ್ದಾರೆ.
ಈ ಹಿಂದೆ ರಟಕಲ್ ಗ್ರಾಮವನ್ನು ಹೋಬಳಿ ಕೇಂದ್ರವನಾಗಿಸಲ್ಲು ಒತ್ತಾಯಿಸಿ ಗ್ರಾಮಸ್ಥರು ಹಾಗೂ ಮಠಾಧೀಶರ ನೇತೃತ್ವದಲ್ಲಿ ಎರಡುದಿನ ಪಾದಯಾತ್ರೆ ನಡೆಸುವ ಮೂಲಕ ಸರಕಾರಿಕ್ಕೆ ಆಗ್ರಹಿಸಿದರು.