15 ರಂದು ಗ್ರಾಮ ಪಂಚಾಯತಿ ನೌಕರರ ಬೆಂಗಳೂರು ಚಲೊ

0
192

ಕಲಬುರಗಿ: ಅಗಸ್ಟ್ 17 ರಂದು ಅನಿರ್ಧಿಷ್ಟ ಹೋರಾಟಕ್ಕೆ ಕರೆ ಕೊಟ್ಟಾಗ ಆರ್‌ಡಿಪಿಆರ್ ಪ್ರಧಾನ ಕಾರ್ಯದರ್ಶಿಗಳು ಬೇಡಿಕೆಗಳನ್ನು ಈಡೇರಿಸಲು ೩ ದಿನದ ಕಾಲಾವಕಾಶ ಕೇಳಿ ಬೇಡಿಕೆಗಳು ಈಡೇರಿಸದೇ ಇರುವುದರಿಂದ 6 ರಂದು ಬೆಂಗಳೂರಿನಲ್ಲಿ ಹೋರಾಟಕ್ಕೆ ಕರೆ ಕೊಡಲಾಯಿತು. ಹೋರಾಟ  ಮಾಡಲು ಬಿಡಬಾರದು ಎಂದು ಸರಕಾರ ಎಷ್ಟೇ ಪ್ರಯತ್ನ ಪಟ್ಟರೂ ಕೂಡ ಹೋರಾಟಕ್ಕೆ ನೌಕರರು ಆಗಮಿಸಿ ಹೋರಾಟ ಮಾಡಲಾಯಿತು.

ಆದರೆ ಹೋರಾಟದ ದಿನ ಆರ್‌ಡಿಪಿಆರ್ ಇಲಾಖೆಯ ಮಂತ್ರಿಗಳು ಮತ್ತು ಹಿರಿಯ ಅಧಿಕಾರಿಗಳು ದೆಹಲಿಗೆ ಹೋಗಿದ್ದ ಪ್ರಯುಕ್ತ ಸನ್ಮಾನ್ಯ ಮುಖ್ಯಮಂತ್ರಿಗಳ ಜೊತೆಯಲ್ಲಿ ಸಂಘದ ಮುಖಂಡರ ಜೊತೆಯಲ್ಲಿ ಚರ್ಚೆ ನಡೆದಾಗ ಖಆPಖ ಮಂತ್ರಿಗಳು ಬಂದ ತಕ್ಷಣ ಸಂಘದ ಮುಖಂಡರು ಮತ್ತು ಅಧಿಕಾರಿಗಳ ಜಂಟಿ ಸಭೆ ಕರೆದು ಚರ್ಚಿಸಲು ಒಪ್ಪಿಗೆ ಸೂಚಿಸಿದರು ಮತ್ತು ಅರ್ಹತಾ ಪರೀಕ್ಷೆ ಕೈ ಬಿಡುವ ಭರವಸೆ ನೀಡಿದ್ದರು.

Contact Your\'s Advertisement; 9902492681

ಆದರೆ ಸರಕಾರ ಏಕ ಪಕ್ಷೀಯವಾಗಿ ಆದೇಶ ಮಾಡಿ ಅರ್ಹತಾ ಪರೀಕೆ ನಡೆಸಲೇಬೇಕೆಂದು ನಿರ್ಧರಿಸಿದೆ ಮತ್ತು ನೌಕರರ ವೇತನಕ್ಕೆ ಬೇಕಾಗುವ ರೂ.೭೦೦/- ಕೋಟಿ ಅನುದಾನದ ಬಗ್ಗೆ ಚಕಾರ ಎತ್ತುತ್ತಿಲ್ಲ.ನೌಕರರ ವಿರೋಧಿ ಧೋರಣೆ ಸರಕಾರ ತೋರುತ್ತಿದೆ.೨ ಸಾರಿ ಸರಕಾರದ ಜೊತೆಯಲ್ಲಿ ಮಾತುಕತೆ ನಡೆಸಿದಾಗ *ಬೇಡಿಕೆ ಈಡೇರಿಸುವ ಭರವಸೆ ಕೊಟ್ಟು ನಂತರ ಸರಕಾರ ಮಾತಿಗೆ ತಪ್ಪಿದೆ.

ಬೇಡಿಕೆಗಳಾದ ೧ ವೃಂದ ಮತ್ತು ನೇಮಕಾತಿಗೆ ತಿದ್ದುಪಡಿ ಮಾಡುವಾಗ ಪಂಚಾಯತ ನಲ್ಲಿರುವ ಎಲ್ಲಾ ವೃಂದದ ಸಿಬ್ಬಂದಿಗಳನ್ನು ಪರಿಗಣಿಸಬೇಕು, ದಿ.೦೫-೦೯-೨೦೨೧ ರ ಆದೇಶದಲ್ಲಿನ ಅರ್ಹತಾ ಪರೀಕ್ಷೆ ಕೈ ಬಿಟ್ಟು ಕಾರ್ಯದರ್ಶಿ ಗ್ರೇಡ್-೨ ಮತ್ತು ಲೆಕ್ಕ ಸಹಾಯಕ ಹುದ್ದೆ ನೇಮಕಾತಿ ಗೆ ಅವಕಾಶ ಕಲ್ಪಿಸಬೇಕು, ೧೫ನೇ ಹಣಕಾಸು ಯೋಜನೆಯಲ್ಲಿ ಗ್ರಾ.ಪಂ.ಸಿಬ್ಬಂದಿಗಳಿಗೆ ನಿಗದಿ ಮಾಡಿರುವ ವೇತನವನ್ನು ಶಾಸನಬದ್ದ ಅನುದಾನ ದಂತೆ ರಾಜ್ಯ ಮಟ್ಟದಲ್ಲೇ ಕಡಿತಗೊಳಿಸಿ ಸಿಬ್ಬಂದಿ ಖಾತೆ ವೇತನಕ್ಕೆ ವರ್ಗಾವಣೆ ಮಾಡಬೇಕು.

ಸರಕಾರ ಈ ಹಿಂದೆ ಘೋಷಣೆ ಮಾಡಿದಂತೆ ವೇತನಕ್ಕಾಗಿ ತಗುಲುವ ೭೦೦/- ಕೋಟಿ ರೂಪಾಯಿ ಹಣಕಾಸನ್ನು ಒದಗಿಸಬೇಕು,  ಕನಿಷ್ಠ ವೇತನ ಪರಿಷ್ಕರಿಣೆ ಮಾಡಬೇಕು, ಎಲ್ಲಾ ಸಿಬ್ಬಂದಿಗಳಿಗೆ ಪಿಂಚಣಿ ಜಾರಿ ಮಾಡಬೇಕು, ಈ ಮೇಲಿನ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬೆಂಗಳೂರಿನಲ್ಲಿ ನಡೆಯುವ ದಿ.೧೫-೦೯-೨೦೨೧ ರ ಅನಿರ್ಧಿಷ್ಟ ಹೋರಾಟಕ್ಕೆ ಬರುವಾಗ ಅನಿರ್ಧಿಷ್ಟ ಧರಣಿ ಗೆ ಅವಶ್ಯಕತೆ ಇರುವ ಆಹಾರ ಮತ್ತು ಹಾಸಿಗೆ ಸಹಿತ ಬರಬೇಕು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಲಾವುವುದೆಂದು ತಿಳಿಸಿದರು.

ಈ ಸಂದಭದಲ್ಲಿ ಜಿಲ್ಲಾ ಕಾರ್ಯಾಧ್ಯಕ್ಷ ಬಸವರಾಜ ಪಾಟೀಲ್ ಹರಸೂರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಮಾಶಂಕರ ಕಡಣಿ, ರಾಜ್ಯ ಸಹ ಕಾರ್ಯದರ್ಶಿ ಜಂಟಿ ಶಿವಾನಂದ ಕವಲಗಾ ಬಿ ಇವರುಗಳು ಪತ್ರಿಕಾ ಪ್ರಕಟಣೆ ಮೂಲಕ ವಿನಂತಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here