ಬೆಂಗಳೂರು: 2021ನೇ ಸಾಲಿನ ನೀಟ್/ಸಿಇಟಿ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳಿಗೆ ಕೌನ್ಸಿಲಿಂಗ್ ಪೂರ್ವ ಮಾರ್ಗದರ್ಶನ ಶಿಬಿರವನ್ನು ಆನೇಕಲ್’ನ ಬೇರು ಸಂಸ್ಥೆ ಹಮ್ಮಿಕೊಂಡಿದೆ.
ಸೆ.17 ಶುಕ್ರವಾರ, ಬೆಳಿಗ್ಗೆ 10.30ಕ್ಕೆ ಆನೇಕಲ್ ಅಂಚೆ ಕಚೇರಿ ಬಳಿಯ ಸರಕಾರಿ ನೌಕರರ ಭವನದಲ್ಲಿ ನಡೆಯಲಿರುವ ಶಿಬಿರದಲ್ಲಿ ನಾಡಿನ ಖ್ಯಾತ ಕರಿಯರ್ ಕೌನ್ಸಿಲರ್ ಮಂಗಳೂರಿನ ಉಮರ್ ಯು.ಹೆಚ್. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ.
ಸಿಇಟಿ/ನೀಟ್ ಆನ್’ಲೈನ್ ಕೌನ್ಸಿಲಿಂಗ್ ವಿಧಾನ ಮತ್ತು ಹಂತಗಳು, ದಾಖಲೆಗಳ ಪರಿಶೀಲನೆ, ಲಭ್ಯವಿರುವ ವಿವಿಧ ವಿಭಾಗದ ಸೀಟುಗಳು, ವಿದ್ಯಾರ್ಥಿಗಳಿಗೆ ಸರಕಾರದ ವಿವಿಧ ಇಲಾಖೆಗಳಲ್ಲಿ ಲಭ್ಯವಿರುವ ಯೋಜನೆಗಳು ಹಾಗೂ ಕರಿಯರ್ ಆಯ್ಕೆಯ ಅಗತ್ಯತೆ ಮತ್ತು ವಿಧಾನ ಕುರಿತಂತೆ ಶಿಬಿರದಲ್ಲಿ ಸಮಗ್ರ ಮಾರ್ಗದರ್ಶನ ನೀಡಲಾಗುವುದು.
ಪ್ರವೇಶ ಉಚಿತವಾಗಿದ್ದು, ಹೆಚ್ಚಿನ ಮಾಹಿತಿಗಳಿಗಾಗಿ ಆಸಕ್ತ ವಿದ್ಯಾರ್ಥಿಗಳು ಮೊ.ಸಂ. 9008660371,9845054191ನ್ನು ಸಂಪರ್ಕಿಸಬಹುದು ಎಂದು ಬೇರು ಸಂಸ್ಥೆಯ ಸ್ಥಾಪಕ ನಿರ್ದೇಶಕಿ ಡಾl ಮಮತಾ ಕೆ.ಎನ್. ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.