ಕಲಬುರಗಿ: ನಗರದ ಜಿಲ್ಲಾ ಕಾಂಗ್ರೇಸ್ ಸಮಿತಿ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ ಅವರ ಅಧ್ಯಕ್ಷೆತೆಯಲ್ಲಿ ಮಹಿಳಾ ಕಾಂಗ್ರೇಸ್ ೩೮ನೇ ಅಡಿಪಾಯದ ದಿನದ ಅಂಗವಾಗಿ ಕಾಂಗ್ರೇಸ್ ಪಕ್ಷದಿಂದ ನೂತನವಾಗಿ ಆಯ್ಕೆಗೊಂಡ ಮಹಾನಗರ ಪಾಲಿಕೆ ಸದಸ್ಯೆರಿಗೆ ಮಹಿಳಾ ಕಾಂಗ್ರೆಸ್ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಕಾಂಗ್ರೇಸ್ ಸಮಿತಿ ಅಧ್ಯಕ್ಷೆ ಹಾಗೂ ನೂತನ ಮಹಾನಗರ ಪಾಲಿಕೆ ಸದಸ್ಯೆ ಲತಾ ರವಿ ರಾಠೋಡ, ವಾಣಿಶ್ರೀ ಸಗರಕರ್, ಗೀತಾ ಮುದಗಲ್, ಸಂಗೀತಾ ಪಾಟೀಲ, ಶೋಭಾ ಕಾಳೆ, ಮಂಜುಳ ಪಾಟೀಲ, ಸುಜಾತ ಚವ್ಹಾಣ, ಶೀಲಾ, ಶ್ವೇತಾ ಬಿಳಿಚಕ್ರ ಇದ್ದರು.