ಶಹಾಬಾದ:ನಗರಸಭೆಯಲ್ಲಿ ಇಂಜಿನಿಯರ್ ದಿನ ಆಚರಣೆ

0
17

ಶಹಾಬಾದ:ದೇಶದ ಅಭಿವೃದ್ಧಿಗೆ ಮಹತ್ತರವಾದ ಕೊಡುಗೆ ನೀಡಿದ ವಿಶ್ವೇಶ್ವರಯ್ಯನವರ ಜನ್ಮ ದಿನವನ್ನು ಇಂಜಿನಿಯರ್ ದಿನವಾಗಿ ಆಚರಿಸುತ್ತಿರುವುದು ಅವರ ಸಲ್ಲಿಸುತ್ತಿರುವ ಕೃತಜ್ಞತೆ ಎಂದು ನಗರಸಭೆಯ ಪೌರಾಯುಕ್ತ ಡಾ.ಕೆ.ಗುರಲಿಂಗಪ್ಪ ಹೇಳಿದರು.

ಅವರು ಬುಧವಾರ ನಗರದ ನಗರಸಭೆಯಲ್ಲಿ ವಿಶ್ವೇಶ್ವರಯ್ಯನವರ ಜನ್ಮ ದಿನದ ನಿಮಿತ್ತ ಇಂಜಿನಿಯರ್ ದಿನವಾಗಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

Contact Your\'s Advertisement; 9902492681

ಕಾವೇರಿ ನದಿಗೆ ಮಂಡ್ಯ ಜಿಲ್ಲೆಯಲ್ಲಿ ಕೃ?ರಾಜ ಸಾಗರ ಅಣೆಕಟ್ಟು ನಿರ್ಮಿಸುವ ಮೂಳಕ ಹರಿದು ಪೋಲಾಗುತ್ತಿದ್ದ ನೀರಿನ ಸದ್ಬಳಿಕೆಗೆ ಅನುವು ಮಾಡಿಕೊಟ್ಟರು. ಕನ್ನಂಬಾರಿ ಅಣೆಕಟ್ಟು ನಿರ್ಮಾಣ ಮಾಡುವ ಸಂದರ್ಭದಲ್ಲಿ ವಿಶ್ವೇಶ್ವರಯ್ಯನವರು ಮದ್ರಾಸ್ ಸರ್ಕಾರದ ವಿರೋಧದ ನಡುವೆಯೂ ಕಟ್ಟಿದರು.ಅನೇಕ ಅಭಿವೃದ್ಧಿ ಕಾರ್ಯಗಳಿಗೆ ಅಡಿಪಾಯ ಹಾಕಿದರು.

ದೇಶಕ್ಕೆ, ದೇಶದ ಪ್ರಮುಖ ಯೋಜನೆಗಳಿಗೆ ಭದ್ರ ಬುನಾದಿ ಹಾಕುವಲ್ಲಿ ಇಂಜಿನಿಯರ್‌ಗಳ ಪಾತ್ರ ಪ್ರಮುಖವಾದದ್ದು. ಇಂಜಿನಿಯರ್‌ಗಳ ಕ್ರಿಯಾಶೀಲತೆ, ಬುದ್ಧಿವಂತಿಕೆ ದೇಶ, ನಗರ ಒಂದು ಸಂಸ್ಥೆಯನ್ನು ಆರ್ಥಿಕವಾಗಿ ಅಭಿವೃದ್ಧಿಗೆ ಕೊಂಡೊಯ್ಯುತ್ತದೆ. ವಿಶ್ವೇಶ್ವರಯ್ಯನಂತವರ ಹಾಗೇ ಕೊಡುಗೆಗಳನ್ನು ಇಂದಿನ ಇಂಜಿನಿಯರ್‌ಗಳು ನೀಡುವಂತಾಗಲಿ ಎಂದು ಹೇಳಿದರು.

ನಗರಸಭೆಯ ಎಇ ಶಾಂತರೆಡ್ಡಿ ದಂಡಗುಲಕರ್ ಮಾತನಾಡಿ,ಮೈಸೂರಿನ ನಾಲ್ಕನೇ ಕೃ?ರಾಜ ಒಡೆಯರ ಆಳ್ವಿಕೆಯ ಕಾಲದಲ್ಲಿ ವಿಶ್ವೇಶ್ವರಯ್ಯನವರು ದಿವಾನರಾಗಿ ಕಾರ್ಯ ನಿರ್ವಹಿಸಿದರು. ಈ ಕಾಲಾವಧಿಯಲ್ಲಿ ಮಹತ್ಕಾರ್ಯಗಳನ್ನು ಮಾಡಿದ್ದರು. ಭದ್ರಾವತಿಯ ಉಕ್ಕಿನ ಕಾರ್ಖಾನೆ, ಜೋಗದ ಶರಾವತಿ ವಿದ್ಯುತ್ ಯೋಜನೆ, ಮೈಸೂರು ಸ್ಯಾಂಡಲ್ ಸಾಬೂನಿನ ಕಾರ್ಖಾನೆ , ಮೈಸೂರು ಬ್ಯಾಂಕ್ ಸ್ಥಾಪನೆ, ಮೈಸೂರು ವಿಶ್ವ ವಿದ್ಯಾನಿಲಯ ಸ್ಥಾಪನೆ, ಕನ್ನಡ ಸಾಹಿತ್ಯ ಸ್ಥಾಪನೆ ಹೀಗೆ ಮಹತ್ವದ ಕೊಡುಗೆಗಳನ್ನು ನಮ್ಮ ಕನ್ನಡ ನಾಡಿಗೆ ನೀಡಿ ನಮ್ಮೆಲ್ಲರ ಮನಸ್ಸಿನಲ್ಲಿ ಅಜರಾಮರರಾಗಿ ನೆಲೆಸಿದ್ದಾರೆ ಎಂದು ಹೇಳಿದರು.

ನಗರಸಭೆಯ ಮಾಜಿ ಅಧ್ಯಕ್ಷ ಗಿರೀಶ ಕಂಬಾನೂರ, ಪರಿಸರ ಅಭಿಯಂತರ ಮುಜಾಮಿಲ್ ಅಲಂ,ಜೆಇ ಮೌಲಾ ಅಲಿ, ಕಂದಾಯ ಅಧಿಕಾರಿ ಸುನೀಲಕುಮಾರ, ವ್ಯವಸ್ಥಾಪಕರಾದ ಶರಣಗೌಡ ಪಾಟೀಲ, ನಗರಸಭೆಯ ಸದಸ್ಯೆ ಪಾರ್ವತಿ ಪವಾರ, ಭೀಮಯ್ಯ ಗುತ್ತೆದಾರ, ಮುತ್ತಣ್ಣ ಭಂಡಾರಿ, ನಾರಾಯಣ ರೆಡ್ಡಿ, ಸಿದ್ದಪ್ಪ,ಶಿವರಾಜಕುಮಾರ, ಅನೀಲ ಹೊನಗುಂಟಿಕರ್, ಉಣೇಶ ದೊಡ್ಡಮನಿ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here