ಖಾಸಗಿ ಆಸ್ಪತ್ರೆಯಲ್ಲೂ ಕೋವಿಡ್ ಲಸಿಕಾ ಕೇಂದ್ರ: ಪೌರಾಯುಕ್ತ ಗುರಲಿಂಗಪ್ಪ

0
27

ಶಹಾಬಾದ: ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚಿನ ಕೋವಿಡ್ ಲಸಿಕಾ ಕೇಂದ್ರಗಳನ್ನು ತೆಗೆಯಲು ಯೋಜಿಸಿದ್ದು, ಖಾಸಗಿ ಆಸ್ಪತ್ರೆಯ ವೈದ್ಯರು ತಮ್ಮ ಆಸ್ಪತ್ರೆಯನ್ನು ಕೋವಿಡ್ ಲಸಿಕಾ ಕೇಂದ್ರವನ್ನಾಗಿ ಮಾಡಲು ಸಹಕರಿಸಬೇಕೆಂದು ನಗರಸಭೆಯ ಪೌರಾಯುಕ್ತ ಡಾ.ಕೆ.ಗುರಲಿಂಗಪ್ಪ ಹೇಳಿದರು.

ಅವರು ಗುರುವಾರ ನಗರದ ತಹಸೀಲ್ದಾರ ಕಾರ್ಯಾಲಯದಲ್ಲಿ ಕೋವಿಡ್ ಲಸಿಕಾ ಅಭಿಯಾನದ ನಿಮಿತ್ತ ಖಾಸಗಿ ಆಸ್ಪತ್ರೆಯ ವೈದ್ಯರಿಗೆ ಆಯೋಜಿಸಲಾದ ಸಭೆಯಲ್ಲಿ ಮಾತನಾಡಿದರು.

Contact Your\'s Advertisement; 9902492681

ಸಾರ್ವಜನಿಕರಿಗೆ ಸಮೀಪ ಹಾಗೂ ಅವರಿಗೆ ಅನುಕೂಲವಾಗುವ ಪ್ರದೇಶದಲ್ಲಿ ಕೋವಿಡ್ ಲಸಿಕೆ ಪಡೆದುಕೊಳ್ಳಲು ಸಹಕಾರಿಯಾಗುತ್ತದೆ. ಆದ್ದರಿಂದ ಹೆಚ್ಚಿನ ಲಸಿಕಾ ಕೇಂದ್ರಗಳನ್ನು ಸ್ಥಾಪಿಸಲು ಉದ್ದೇಶಿಸಿದ್ದು, ಅದಕ್ಕಾಗಿ ಖಾಸಗಿ ಆಸ್ಪತ್ರೆಯ ವೈದ್ಯರ ಮೋರೆ ಹೋಗಿದ್ದೆವೆ.ಕೋವಿಡ್ ಮುಕ್ತ ತಾಲೂಕಾ ನಿರ್ಮಾಣದಲ್ಲಿ ತಮ್ಮ ಸಹಕಾರ ಮುಖ್ಯ. ಅದಕ್ಕಾಗಿ ಶುಕ್ರವಾರ ನಡೆಯುವ ಲಸಿಕಾ ಅಭಿಯಾನಕ್ಕೆ ಸಹಕರಿಸಿ, ಅಭಿಯಾನ ಯಶಸ್ವಿಯಾಗಲು ಕೈಜೋಡಿಸಬೇಕು ಎಂದು ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರಲ್ಲಿ ಮನವಿ ಮಾಡಿಕೊಂಡರು.

ಖಾಸಗಿ ವೈದ್ಯರ ಪರವಾಗಿ ಡಾ.ರಶೀದ್ ಮರ್ಚಂಟ್ ಮಾತನಾಡಿ, ಕೋವಿಡ್ ಲಸಿಕಾ ಅಭಿಯಾನ ಇದೊಂದು ರಾಷ್ಟ್ರೀಯ ಕಾರ್ಯಕ್ರಮ. ಈ ಕಾರ್ಯಕ್ರಮಕ್ಕೆ ಸಹಕಾರ ನೀಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಆ ನಿಟ್ಟಿನಲ್ಲಿ ನಾವೆಲ್ಲರೂ ಲಸಿಕಾ ಕೇಂದ್ರವನ್ನು ನಮ್ಮ ಆಸ್ಪತ್ರೆಯಲ್ಲಿ ತೆಗೆಯಲು ಸಿದ್ಧರಿದ್ದೆವೆ. ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಿಮ್ಮ ಅಭಿಯಾನಕ್ಕೆ ನಾವು ಕೈಜೋಡಿಸುತ್ತೆವೆ ಎಂದು ಹೇಳಿದರು.

ಉಪತಹಸೀಲ್ದಾರ ಮಲ್ಲಿಕಾರ್ಜುನರೆಡ್ಡಿ ಮಾತನಾಡಿ, ದೂರದ ಲಸಿಕಾ ಕೇಂದ್ರಕ್ಕೆ ಹೋಗುವುದನ್ನು ತಪ್ಪಿಸಿ, ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಜನರು ಇರುವ ಪ್ರದೇಶದಲ್ಲೇ ಲಸಿಕಾ ಕೇಂದ್ರವನ್ನು ತೆಗೆಯಲಾಗಿದೆ. ಜನರು ಸ್ವಯಂಪ್ರೇರಣೆಯಿಂದ ಬಂದು ಲಸಿಕೆ ತೆಗೆದುಕೊಳ್ಳಬೇಕು ಎಂದು ಹೇಳಿದರು.

ಡಾ.ವೀರಭದ್ರಪ್ಪ ಇಂಗಿನಶೆಟ್ಟಿ, ಡಾ.ಉಮೇಶ ಯಲಶೆಟ್ಟಿ, ಡಾ.ಶಂಕರ ರಾಠೋಡ,ಡಾ.ದಶರಥ ಜಿಂಗಾಡೆ, ಡಾ.ಸಂಜಯ ಜಿಂಗಾಡೆ, ಡಾ.ಕಿಶನ್ ಜಾಧವ, ಡಾ.ಅಬ್ದುಲ್ ಖಾಲಿಕ್,ಡಾ.ಆಸಿಫ್,ಡಾ.ಎಮ್.ಎ.ರೆಹಮಾನ್,ಡಾ.ಶಾಹಿನ್ ಮತವಾಲಿ ಖಾನಂ,ಡಾ.ಸಂಜಯ ಅಗಸ್ಟಿನ್, ಯುಸೂಫ್ ನಾಕೇದಾರ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here