ಕಲಬುರಗಿ: ನಗರದಲ್ಲಿ 2018-19ನೇ ಸಾಲಿನಲ್ಲಿ ಒಟ್ಟು ಕಳ್ಳತನ ಪ್ರಕರಣಗಳು ದಾಖಲಾಗಿದ್ದು, ಈ ಪ್ರಕರಣಗಳ ಪೈಕಿ 194 ಪ್ರಕರಣಗಳು ಪತ್ತೆ ಹಚ್ಚಿದ ಜಿಲ್ಲಾ ಪೊಲೀಸ್ ಇಲಾಖೆ ಪತ್ತೆ ಹಚ್ಚಿ ಪ್ರಕರಣದ ಸ್ವತ್ತನ್ನು ಇಂದು ವಾರಸುದಾರರಿಗೆ ಎಸ್.ಪಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ನೇತೃತ್ವದಲ್ಲಿ ಹಸ್ತಾಂತರಿಸಲಾಯಿತ್ತು.
ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಬೈಕ್, ಕಾರು, ಚಿನ್ನ, ಬೆಳ್ಳಿ ಸೇರಿದಂತೆ ಮುಂತಾದ ವಸ್ತುಗಳು ಕಳೆದುಕೊಂಡ ವಾರಸುದಾರರಿಗೆ ತಮ್ಮ ಸ್ವತ್ತನ್ನು ಜಿಲ್ಲಾ ಪೊಲೀಸ್ ಇಲಾಖೆಯಿಂದ ಮರಳಿ ಪಡೆದರು.
ಈ ಸಂದರ್ಭದಲ್ಲಿ ತಮ್ಮ ಬೆಲೆಬಾಳುವ ಸಾಮಾನುಗಳನ್ನು ವಾಪಸ್ ಪಡೆದ ವಾರಸುದಾರ ಅಭ್ಯರ್ಥಿಗಳು ಜಿಲ್ಲಾ ಪೊಲೀಸ್ ರ ಕಾರ್ಯವನ್ನು ಶ್ಲಾಘಿಸಿ, ಸಂತಸ ವ್ಯಕ್ತಪಡಿಸಿದರು.
2018-19ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 488 ಕಳ್ಳತನ ಪ್ರಕರಣಗಳ ಮೊತ್ತ 4.37 ಕೋಟಿ ಸ್ವತು ದರೋಡೆ ಮಾಡಿರುವ ಪ್ರಕರಣ ದಾಖಲಾಗಿತ್ತು ಎಂದು ಎಸ್ಪಿ ಯಡಾ ಮಾರ್ಟಿನ್ ತಿಳಿಸಿ, ಈ ಪ್ರಕರಣಗಳ ಪೈಕಿ 194 ಪ್ರಕರಣಗಳನ್ನು ಪತ್ತೆ ಹಚ್ಚಿ 1.47 ಕೋಟಿ ರೂಪಾಯಿ ಮೊತ್ತದ ಸ್ವತ್ತನ್ನು ಕಳೆದುಕೊಂಡ ವಾರಸುದಾರರಿಗೆ ಮರಳಿ ಹಸ್ತಾಂತರಿಸಿದ್ದು, ಉಳಿದಿರುವ ಪ್ರಕರಣಗಳನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.