ಅಂಜಲಿ ಗಿರೀಶ ಕಂಬಾನೂರ ಧ್ವಜಾರೋಹಣ

0
81

ಶಹಾಬಾದ: ಎರಡನೇ ಸ್ವಾತಂತ್ರ್ಯ ಹೋರಾಟವೆಂದೇ ಬಣ್ಣಿಸಲಾಗುವ ಹೈದ್ರಾಬಾದ ಕರ್ನಾಟಕ ವಿಮೋಚನಾ ಹೋರಾಟದಲ್ಲಿ ಪಾಲ್ಗೊಂಡು ತ್ಯಾಗ, ಬಲಿದಾನ ಮಾಡಿದ ಅನೇಕ ಹೋರಾಟ ಮಾಡಿದ ಮಹನೀಯರ ಕೆಚ್ಚು ಮತ್ತು ಅವರ ಆದರ್ಶ ನಮ್ಮೆಲ್ಲರ ಬದುಕಿಗೆ ಸ್ಪೂರ್ತಿಯಾಗಲಿ ಎಂದು ನಗರಸಭೆಯ ಪೌರಾಯುಕ್ತ ಡಾ.ಕೆ.ಗುರಲಿಂಗಪ್ಪ ಹೇಳಿದರು.

ಅವರು ಶುಕ್ರವಾರ ನಗರಸಭೆಯಲ್ಲಿ ಆಯೋಜಿಸಲಾದ ಕಲ್ಯಾಣ ಕರ್ನಾಟಕ ಉತ್ಸವ ದಿನ ಕಾರ್ಯಕ್ರಮದಲ್ಲ್ಲಿ ಪಾಲ್ಗೊಂಡು ಮಾತನಾಡಿದರು.

Contact Your\'s Advertisement; 9902492681

ಭಾರತ ಬ್ರಿಟಿಷರಿಂದ ಸ್ವತಂತ್ರ ಪಡೆದರೂ, ಹೈದ್ರಬಾದ ಕರ್ನಾಟಕ ಮಾತ್ರ ನಿಜಾಮನ ಕೆಟ್ಟ ಕ್ರೌರ್ಯಕ್ಕೆ ಒಳಗಾಗಿ ಜನರು ಬದುಕದಂತಾಗಿ, ಸ್ವಾತಂತ್ಯ್ರ ಹೋರಾಟಕ್ಕಿಂತ ನಿಜಾಮಶಾಹಿ ವಿರುದ್ಧದ ಹೋರಾಟದಲ್ಲಿ ಸಕ್ರೀಯವಾಗಿ ನಾಯಕರು ಪಾಲ್ಗೊಂಡು ಹೈದ್ರಬಾದ ಸಂಸ್ಥಾನ ೧೯೪೮ ಸೆಪ್ಟೆಂಬರ್ ೧೭ ರಂದು ವಿಮೋಚನೆ ಪಡೆಯುವಂತಾದುದು ಚಾರಿತ್ರಿಕ ಸಂಗತಿ ಎಂದು ಹೇಳಿದರು.

ನಗರಸಭೆಯ ಅಧ್ಯಕ್ಷೆ ಅಂಜಲಿ ಗಿರೀಶ ಕಂಬಾನೂರ ಮಾತನಾಡಿ, ಮಹಾನ್ ನಾಯಕರ ತ್ಯಾಗ ಬಲಿದಾನಗಳ ಫಲವಾಗಿ ಹೈದ್ರಬಾದ ಕರ್ನಾಟಕ ಪ್ರದೇಶ ನಿಜಾಮಶಾಹಿ ಕಪಿ ಮುಷ್ಠಿಯಿಂದ ಬಿಡುಗಡೆಗೊಂಡಿತು, ಹೋರಾಟ ಮಾಡಿದ ನಾಯಕರ ರಾಷ್ಟ್ರ ಪ್ರೇಮ ನಮ್ಮೆಲ್ಲರ ಬದುಕಿಗೆ ಪ್ರೇರಣೆಯಾಗಬೇಕು ಅನ್ಯಾಯಗಳ ವಿರುದ್ಧ ಧ್ವನಿ ಎತ್ತಿ ಸತ್ಯಕ್ಕಾಗಿ ಹೋರಾಟ ಮಾಡಬೇಕಾಗಿದೆ. ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದವರನ್ನು ಸ್ಮರಿಸುವ ಮೂಲಕ ಎರಡನೇ ಸ್ವತಂತ್ರೋತ್ಸವವನ್ನು ಅರ್ಥ ಗರ್ಭಿತಗೊಳಿಸಬೇಕೆಂದು ಹೇಳಿದರು.

ಡಾ.ರಶೀದ್ ಮರ್ಚಂಟ, ಹಾಷಮ್‌ಖಾನ, ಮಾಜಿ ನಗರಸಭೆಯ ಅಧ್ಯಕ್ಷ ಗಿರೀಶ ಕಂಬಾನೂರ, ನಗರಸಭೆಯ ಸದಸ್ಯ ಡಾ.ಅಹ್ಮದ್ ಪಟೇಲ್, ಲಕ್ಷ್ಮಿಬಾಯಿ ಕುಸಾಳೆ ಸೇರಿದಂತೆ ಅನೇಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here