ಆಜಾದಿ ಕಾ ಅಮೃತ್ ಮಹೋತ್ಸವ: ಫಿಟ್ ಇಂಡಿಯಾ ಪ್ರೀಡ್ಂ ಓಟ

0
47

ಕಲಬುರಗಿ: ನೆಹರು ಯುವ ಕೇಂದ್ರ, ಶರಣಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯದ ಎನ್‌ಎಸ್‌ಎಸ್ ವಿಭಾಗ ಹಾಗೂ ಕ್ಷೇತ್ರ ಸಂಪರ್ಕ ಇಲಾಖೆಯ ಸಂಯುಕ್ತಾಶ್ರಯದಯಿಂದು ಬೆಳಿಗ್ಗೆ ಹವಿ ’ಆಜಾದಿ ಕಾ ಅಮೃತ್ ಮಹೋತ್ಸವ’ ಅಂಗವಾಗಿ ಫಿಟ್ ಇಂಡಿಯಾ ಪ್ರೀಡ್ಂ ಓಟ ಕಾರ್ಯಕ್ರಮಕ್ಕೆ ಶರಣಬಸವ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ. ಅನೀಲಕುಮಾರ ಬಿಡವೆ ಚಾಲನೆ ನೀಡಿದರು.

ಶರಣಬಸವೇಶ್ವರ ಕಾಲೇಜಿನ ಆವರಣದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ವಿಶ್ವದಲ್ಲಿ ನಮ್ಮ ದೇಶ ಸ್ವಾಸ್ತ್ಯ ಸದೃಢವಾಗಿ ನಿಲ್ಲಬೇಕಾದರೇ ಯುವಕರ ಪಾತ್ರ ಬಹಳ ಅಗತ್ಯವಾಗಿದೆ ಎಂದು ಶರಣಬಸವ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ. ಅನೀಲಕುಮಾರ ಬಿಡವೆ ಅವರು ಅಭಿಪ್ರಾಯಪಟ್ಟರು.

Contact Your\'s Advertisement; 9902492681

ನವಭಾರತ ನಿರ್ಮಾಣಕ್ಕೆ ದೇಶದಲ್ಲಿ ಹಲವಾರು ಚಿಂತನೆ, ಚರ್ಚೆಗಳು ಸೇರಿದಂತೆ ವಿಚಾರಗೋಷ್ಠಿಗಳು ನಿರಂತರವಾಗಿ ನಡೆಯುತ್ತಿವೆ, ಯುವಕರು ಅವುಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಉತ್ತಮ ಹೆಸರು ಗಳಿಸಬೇಕೆಂದು ಡಾ. ಅನಿಲಕುಮಾರ ಬಿಡವೆ ಅವರು ವಿದ್ಯಾರ್ಥಿಗಳಿಗೆ ಕಿವಿಮಾತುಗಳನ್ನು ಹೇಳಿದರು.

ಬ್ರಿಟಿಷರ ಆಳ್ವಿಕೆಯಿಂದ ಮುಕ್ತರಾಗಿ ಇಂದು ಸಂಪೂರ್ಣ ಸ್ವಾತಂತ್ರ್ಯದಿಂದ ಬದುಕುತ್ತಿದ್ದೇವೆ, ಹೀಗಾಗಿ ದೇಶವನ್ನು ಬಲಿಷ್ಟಗೊಳಿಸುವುದರಲ್ಲಿ ನಿಮ್ಮ ಪಾತ್ರ ಬಹಳಷ್ಟು ಮುಖ್ಯವಾಗಿದೆ ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಎನ್‌ವೈಕೆಯ ನಿವೃತ್ತ ನಿರ್ದೇಶಕ ಡಿ. ದಯಾನಂದ ಅವರು ಮಾತನಾಡಿ, ದೇಶದಲ್ಲಿ ಆರ್ಥಿಕತೆ ಹಾಳಾಗುತ್ತಿರುವುದು ಆರೋಗ್ಯದ ವಿಚಾರದಲ್ಲಿ ಹೀಗಾಗಿ ದೈಹಿಕ ಚಟುವಟಿಕೆಗಳಲ್ಲಿ ಸ್ವ-ಹಿತಾಸಕ್ತಿಯಿಂದ ಭಾಗವಹಿಸಿ, ಆರೋಗ್ಯವಂತರಾಗಬೇಕು, ಯುವಕರು ಆರೋಗ್ಯವಂತರಾದರೇ ಮಾತ್ರ ಇಡೀ ದೇಶವೇ ಆರೋಗ್ಯದಿಂದಿರಲು ಸಾಧ್ಯವಾಗುತ್ತದೆ  ಎಂದು ತಿಳಿಸಿದರು.

ನೆಹರು ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯಾಧಿಕಾರಿಗಳಾದ ಹರ್ಷಲ್ ತಳಸ್ಕರ್ ಅವರು ಪ್ರಸ್ತಾವಿಕ ಮಾತನಾಡಿ, ಪ್ರಧಾನಮಂತ್ರಿ ಮೋದಿ ಅವರ ವಿಜನ್ ಉದ್ದೇಶದಿಂದ ೭೫ ನೇ ಸ್ವಾತಂತ್ರ್ಯ ಮಹೋತ್ಸವ ಅಂಗವಾಗಿ ಫಿಟ್ ಇಂಡಿಯಾ ಪ್ರೀಡ್ಂ ಓಟ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ, ಇದು ಇದೀಗ ಎರಡನೇ ಸರಣಿಯಲ್ಲಿ ರಾಷ್ಟ್ರಾದ್ಯಂತ ಜಾಗೃತಿ ಜಾಥಾ ಆಚರಿಸಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಕಾಲೇಜಿನ ವಾಣಿಜ್ಯ ವಿಭಾಗದ ಪ್ರಾಚಾರ್ಯೆ ಪ್ರೊ. ಇಂದಿರಾ ಶೆಟಗಾರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಯುವ ಪ್ರಶಸ್ತಿ ಪುರಸ್ಕೃತರಾದ ಪಿ. ಆರ್ ಪಾಂಡು, ಸುರೇಶ ಬಡಿಗೇರ, ಜಿ.ಎಸ್ ಹಿರೇಮಠ, ಯುವ ಕೇಂದ್ರದ ಲೆಕ್ಕಾಧಿಕಾರಿ ಸಿದ್ರಾಮಪ್ಪ ಮಾಳಾ ಸೇರಿದಂತೆ ರಾಜು ಅವರಾದ್, ದೇವೇಂದ್ರ ಮತ್ತಿತರರು ಪಾಲ್ಗೊಂಡಿದ್ದರು.

ಫ್ರೀಡ್ಂ ಓಟವನ್ನು ಶರಣಬಸವೇಶ್ವರ ಕಾಲೇಜಿನ ಆವರಣದಿಂದ ಪ್ರಾರಂಭವಾಗಿ ಆನಂದ ಹೋಟೆಲ್, ಎನ್. ವಿ ಕಾಲೇಜು ಮಾರ್ಗದ ಮೂಲಕ ಪುನಃ ಕಾಲೇಜಿನಲ್ಲಿ ಸಂಪನ್ನವಾಯಿತು. ವಿದ್ಯಾರ್ಥಿ ಹಾಗೂ ಯುವ ಕೇಂದ್ರದ ಕಾರ್ಯಕರ್ತರಿಗೆ ಎನ್‌ಎಸ್‌ಎಸ್ ಅಧಿಕಾರಿ ಪ್ರೊ. ದಯಾನಂದ ಹೊಡಲ್ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here