ಕಲಬುರಗಿ : ಕಲ್ಯಾಣ ಕರ್ನಾಟಕದ 890 ವರ್ಷಗಳ ನಡೆಯಲ್ಲಿಯ ಪ್ರಮುಖ ಘಟನಾವಳಿಗಳ 1724 -2021 ರವರೆಗಿನ ಐತಿಹಾಸಿಕ ಹಿನ್ನಲೆ, ವಿಮೋಚನಾ ಚಳುವಳಿ, ಕರ್ನಾಟಕ ಏಕೀಕರಣ, ಫಜಲ ಅಲಿ ವರದಿ, ಬಚಾವತ್ ವರದಿ, ನಂಜುಂಡಪ್ಪ ವರದಿ 371ನೇ(ಜೆ) ಕಲಂಗೆ ಸಂಬಂಧಿಸಿದ ವಿಷಯಗಳನ್ನೊಳಗೊಂಡ ಕಲ್ಯಾಣ ಕರ್ನಾಟಕ ಇತಿಹಾಸ ಕೃತಿಯನ್ನು ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರು ಲೋಕಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಮುರುಗೇಶ ನಿರಾಣಿ, ಸಚಿವರಾದ ಮುನಿರತ್ನ, ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷರಾದ ದತ್ತಾತ್ರೆಯ ಪಾಟೀಲ ರೇವೂರ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷರಾದ ರಾಜಕುಮಾರ ಪಾಟೀಲ ತೇಲಕೂರ, ಶಾಸಕರಾದ ಬಸವರಾಜ ಮತ್ತಿಮೂಡ, ಶಶೀಲ ಜೀ. ನಮೋಶಿ, ಬಿ.ಜಿ. ಪಾಟೀಲ, ಎಂ.ವಾಯ್. ಪಾಟೀಲ್, ಸುಭಾಸ ಗುತ್ತೇದಾರ, ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷರಾದ ಬಸವರಾಜ ಪಾಟೀಲ ಸೇಡಂ, ಯೋಜನಾ ಪ್ರಧಾನ ಕಾರ್ಯದರ್ಶಿಗಳಾದ ಶಾಲಿನಿ ರಜನೀಶ, ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳು, ಮತ್ತು ಕೃತಿಯ ಪ್ರಧಾನ ಸಂಪಾದಕರು ಹಾಗೂ ಹೋರಾಟಗಾರರಾದ ಲಕ್ಷ್ಮಣ ದಸ್ತಿ ಸಂಪಾದಕ ವಿಜಯಕುಮಾರ ಪತ್ತಾರ, ಮಾಜಿ ಶಾಸಕ ದೊಡ್ಡೇಗೌಡ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.
ಈ ಕೃತಿಯನ್ನು ನಿನ್ನೆಯ ದಿನದಂದು ಯಾದಗಿರಿ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ ಅಧಿಕೃತ ಸಮಾರಂಭದಲ್ಲಿ ಮತ್ತು ಕೊಪ್ಪಳ ಸಮಾರಂಭದಲ್ಲಿಯೂ ಸಹ ಆಯಾ ಜಿಲ್ಲಾ ಉಸ್ತುವಾರಿ ಸಚಿವರು ಸ್ಥಳಿಯ ಶಾಸಕರು, ಜಿಲ್ಲಾಡಳಿತ ಲೋಕಾರ್ಪಣೆ ಮಾಡಿರುತ್ತದೆ.