ಕಲಬುರಗಿ: ಇಲ್ಲಿನ ಶರಣಬಸವ ವಿಶ್ವವಿದ್ಯಾಲಯದ ಕುಲಸಚಿವರಾಗಿದ್ದ ಡಾ. ಲಿಂಗರಾಜ ಶಾಸ್ತ್ರಿಯವರ ಅಕಾಲಿಕ ನಿಧನಕ್ಕೆ ವಿಧಾನಸಬೆ ವಿರೋಧ ಪಕ್ಷದ ಮುಖ್ಯ ಸಚೇತಕರು, ಜೇವರ್ಗಿ ಶಾಸಕರೂ ಆಗಿರುವ ಡಾ. ಅಜಯ್ ಸಿಂಗ್, ಮಾಜಿ ಎಂಎಲ್ಸಿ ಅಲ್ಲಂಪ್ರಭು ಪಾಟೀಲ್, ಕೆಪಿಸಿಸಿ ಸದಸ್ಯ ಹಣಮಂತರಾವ ಭೂಸನೂರ್ ಕಂಬನಿ ಮಿಡಿದಿz್ದÁರೆ.
ಶಿಕ್ಷಣ ಪ್ರೇಮಿ, ತಜ್ಞರಾಗಿದ್ದ ಡಾ ಲಿಂಗರಾಜ ಶಾಸ್ತ್ರಿ ಯವರ ಅಕಾಲಿಕ ನಿಧನ ಈ ಭಾಗದ ಶೈP್ಷÀಣಿಕ ಲೋಕಕ್ಕೆ ಬಹುದೊಡ್ಡ ನಷ್ಟ ಉಂಟುಮಾಡಿದೆ, ಶರಣಬಸವ ವಿವಿ ಪ್ರವರ್ಧಮಾನಕ್ಕೆ ಬರುವಲ್ಲಿ ತಮ್ಮದೇ ಆದಂತಹ ಕೊಡುಗೆ ನೀಡುತ್ತ ವಿವಿ ಪ್ರಗತಿಗೆ ಕಾರಣರಾಗಿದ್ದವರಲ್ಲಿ ಲಿಂಗರಾಜ ಶಾಸ್ತ್ರೀಯವರು ಒಬ್ಬರಾಗಿದ್ದರು. ಇವರು ಚಿಕ್ಕ ವಯಸ್ಸಿನಲ್ಲಿಯೇ ಸಾವನ್ನಪ್ಪಿರೋದು ನಮ್ಮ ಭಾಗದ ಉನ್ನತ ಶಿಕ್ಷಣ ರಂಗಕ್ಕೆ ಬಹುದೊಡ್ಡ ಹೊಡೆ ನೀಡಿದೆ ಎಂದು ಅವರು ಹೇಳಿz್ದÁರೆ.
ಭಗವಂತ ಅವರ ಆತ್ಮಕ್ಕೆ ಸದ್ಗತಿ ನೀಡಲಿ ಹಾಗೂ ಅವರ ಕುಟುಂಬ ವರ್ಗದವರಿಗೆ, ಅಭಿಮಾನಿ ಮತ್ತು ವಿಧ್ಯಾರ್ಥಿ ವೃಂದಕ್ಕೆ ಡಾ. ಲಿಂಗರಾಜ ಶಾಸ್ತ್ರೀಯವರ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ದಯಪಾಲಿಸಲಿ ಎಂದು ಪ್ರಾರ್ಥಿಸಿದ್ದಾರೆ.