ಕಟ್ಟಡ ಕಾರ್ಮಿಕರಿಂದ ಮುಖ್ಯಮಂತ್ರಿ ಮನೆ ಚಲೋ ಕಾರ್ಯಕ್ರಮ ಇಂದು

0
122

ಶಹಾಬಾದ: ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ಕಟ್ಟಡ ಕಾರ್ಮಿಕರಿಂದ(ಸಿಐಟಿಯು) ವತಿಯಿಂದ ಸೆಪ್ಟೆಂಬರ್ ೨೦ರಂದು ಬೆಂಗಳೂರಿನಲ್ಲಿ ನಡೆಯಲಿರುವ ಪ್ರತಿಭಟನೆ ಹಾಗೂ ಮುಖ್ಯಮಂತ್ರಿ ಮನೆ ಚಲೋ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಕಟ್ಟಡ ಕಾರ್ಮಿಕರ ಸಂಘದ ತಾಲೂಕಾ ಸಂಚಾಲಕ ನಾಗಪ್ಪ ರಾಯಚೂರಕರ್ ತಿಳಿಸಿದರು.

ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತ ಸರಕಾರ ಎರಡನೇ ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಕಾರ್ಮಿಕರಿಗೆ ೩೦೦೦ರೂ. ಪರಿಹಾರ ನೀಡುತ್ತೆವೆ ಎಂದು ಹೇಳಿತ್ತು.ಆದರೆ ಇವರೆಗೂ ಹಣ ಕೈಸೇರಿಲ್ಲ. ಶೈಕ್ಷಣಿಕ ಸಹಾಯ ಧನಕ್ಕೆ ನೀಡುವುದಾಗಿ ಹೇಳಿ ಅರ್ಜಿ ಸಲ್ಲಿಸುವುದನ್ನು ನಿಲ್ಲಿಸಿದ್ದಾರೆ.ಕಾರ್ಮಿಕರ ಕಾರ್ಡ ಆನ್‌ಲೈನ್ ನೊಂದಣಿಯನ್ನು ನಿಲ್ಲಿಸಲಾಗಿದೆ.ಕೋವಿಡ್‌ನಿಂದ ಮೃತಪಟ್ಟ ಕಾರ್ಮಿಕರಿಗೆ ೨ ಲಕ್ಷ ರೂ. ಪರಿಹಾರ ನೀಡಿಲ್ಲ.

Contact Your\'s Advertisement; 9902492681

ಅಲ್ಲದೇ ಕಾರ್ಮಿಕರ ಕಲ್ಯಾಣಕ್ಕಾಗಿ ನಿರ್ಮಾಣ ಮಾಡಿದ ಕಲ್ಯಾಣ ಮಂಡಳಿಯಲ್ಲಿ ಕಾರ್ಮಿಕರ ಆಹಾರ ಕಿಟ್‌ನಲ್ಲಿ ಬ್ರಹ್ಮಾಂಡ ಭಷ್ಟಾಚಾರ ನಡೆದಿದೆ.ಆ ಬಗ್ಗೆ ತನಿಖೆ ನಡೆಯಬೇಕು ಸೇರಿದಂತೆ ಸಹಜ ಮರಣ ಪರಿಹಾರದ ಮೊತ್ತ ಹೆಚ್ಚಿಸಬೇಕು.ಮನೆ ಮನಿರ್ಮಾಣಕ್ಕೆ ೫ ಲಕ್ಷ ರೂ. ಸಹಾಯ ಧನ ನೀಡಬೇಕೆಂದು ಆಗ್ರಹಿಸಿ ಬೆಂಗಳೂರಿನ ಮುಖ್ಯಮಂತ್ರಿ ಮನೆ ಚಲೋ ಕಾರ್ಯಕ್ರಮವನ್ನುಹಮ್ಮಿಕೊಂಡಿದ್ದೆವೆ ಎಂದು ನಾಗಪ್ಪ ತಿಳಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here