ಮೂಲ ಸೌಲಭ್ಯ ಕಲ್ಪಿಸಲು ಆಗ್ರಹಿಸಿ ಜೈಕನ್ನಡಿಗರ ಸೇನೆ ನೇತೃತ್ವದಲ್ಲಿ ಪ್ರತಿಭಟನಾ ಧರಣಿ

0
11

ಕಲಬುರಗಿ;ಮಹಾನಗರದ ವಾರ್ಡ ನಂ.೫೪ರಲ್ಲಿ ಬರುವ ದರಿಯಾಪೂರ ಕೊಳಚೆ ಪ್ರದೇಶದ ೧೭೦ಜನ ಕುಟುಂಬಗಳಿಗೆ ಕೊಳಚೆ ಅಭಿವೃದ್ದಿ ಮಂಡಳಿಯಿಂದ ಹಕ್ಕು ಪತ್ರಗಳನ್ನು ವಿತರಿಸಿ ಅಗತ್ಯ ಮೂಲ ಸೌಲಭ್ಯ ಕಲ್ಪಿಸಲು ಆಗ್ರಹಿಸಿ ಜೈಕನ್ನಡಿಗರ ಸೇನೆ ನೇತೃತ್ವದಲ್ಲಿ ಪ್ರತಿಭಟನಾ ಧರಣಿ ನಡೆಸಲಾಯಿತು.

ದರಿಯಾಪೂರ ಕೊಳಚೆ ಪ್ರದೇಶದಕ್ಕೆ ಅಗತ್ಯ ಮೂಲ ಸೌಕರ್ಯಗಳಾದ ಕುಡಿಯುವ ನೀರು, ರಸ್ತೆ, ವಿದ್ಯುತ ದೀಪ, ಸಾರ್ವಜನಿಕ ಶೌಚಾಲಯ, ಅಂಗನವಾಡಿ ಕೇಂದ್ರ ಒದಗಿಸಬೇಕು ಮತ್ತು ಇಲ್ಲಿನ ಕುಟುಂಬಗಳಿಗೆ ಮನೆಗಳ ಹಕ್ಕು ಪತ್ರಗಳನ್ನು ವಿತರಿಸಬೇಕು ಎಂದು ಆಗ್ರಹಿಸಿ ಇಲ್ಲಿನ ಕರ್ನಾಟಕ ಕೋಳಚೆ ಪ್ರದೇಶ ಅವೃದ್ದಿ ಮಂಡಳಿಯ ಕಚೇರಿ ಎದುರು ಪ್ರತಿಭಟನಾ ಧರಣಿ ಕೈಗೊಂಡ ಸೇನೆಯ ಅಧ್ಯಕ್ಷ ದತ್ತು ಎಚ್.ಭಾಸಗಿ ಅವರು, ಮಂಡಳಿಯ ಕಾರ್ಯನಿರ್ವಾಹಕ ಅಭಿಯಂತರರಿಗೆ ಬೇಡಿಕೆಯ ಮನವಿ ಸಲ್ಲಿಸಿ ಒತ್ತಾಯಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಜೈಕನ್ನಡಿಗರ ಸೇನೆ ಮುಖಂಡರಾದ ಶೇ?ಗಿರಿ ಮರತೂರಕರ, ದೇವಿಂದ್ರ ಬೆಳ್ಳಿಮನಿ, ನಾಗಪ್ಪ ತೆಗನೂರ, ನಾಗಪ್ಪಾ ಶಿವನೂರ ಸೇರಿದಂತೆ ಹಲವರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here