ಸುರಪುರ: ನಗರದ ಅರುಂಧತಿ ಕಾಲೇಜಿನಲ್ಲಿ ಸರಕಾರಿ ನಿವೃತ್ತ ನೌಕರರ ಸಂಘದಿಂದ ಸಭೆಯನ್ನು ನಡೆಸಿ ಬ್ಯಾಂಕ್‌ಗಳಲ್ಲಿ ನಿವೃತ್ತ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಶಿವಣ್ಣ ಕಟ್ಟಿಮನಿ ಮಾತನಾಡಿ,ನಮ್ಮೆಲ್ಲ ನಿವೃತ್ತ ನೌಕರ ಪಿಂಚಣಿದಾರರಿಗೆ ವಯಸ್ಸಾಗಿರುತ್ತದೆ,ಆದ್ದರಿಂದ ಶಾಖೆಗೆ ಏನಾದರು ತಮ್ಮ ಬ್ಯಾಂಕ್ ವ್ಯವಹಾರಕ್ಕಾಗಿ ಬಂದಾಗ ಆಸನದ ವ್ಯವಸ್ಥೆಯನ್ನು ಕಲ್ಪಿಸಬೇಕೆಂದರು.ಪಿಂಚಣಿದಾರರಿಗೆ ಪ್ರತಿ ತಿಂಗಳು ೨೮ನೇ ತಾರೀಖಿನಿಂದ ಮುಂದಿನ ತಿಂಗಳ ೫ನೇ ತಾರೀಖಿನವರೆಗೆ ಪ್ರತ್ಯೇಕ ಕೌಂಟರ್‌ನ್ನು ತೆರೆಯುವಂತೆ ತಿಳಿಸಿದರು.
ಅಲ್ಲದೆ ತಮ್ಮ ಶಾಖೆಯಿಂದ ಪಿಂಚಣಿದಾರರಿಗೆ ಸಿಗಬೇಕಾದ ಸಾಲಸೌಲಭ್ಯ ಮತ್ತು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಲವಾರು ಸೌಲಭ್ಯವನ್ನು ತೀವ್ರವಾಗಿ ಮಾಡುವಂತೆ ವಿನಂತಿಸಿದರು.ಪಿಂಚಣಿದಾರರಿಗೆ ತುಂಬಾ ವಯಸ್ಸಾಗಿರುತ್ತದೆ,ಆದ್ದರಿಂದ ಬ್ಯಾಂಕ್‌ಗೆ ಬಂದ ಸಂದರ್ಭದಲ್ಲಿ ಸಿಬ್ಬಂದಿಗಳು ಪಿಂಚಣಿದಾರರೊಂದಿಗೆ ಸೌಜನ್ಯದಿಂದ ವರ್ತಿಸಲು ಕ್ರಮ ಕೈಗೊಳ್ಳುವಂತೆ ಕೊರಿದರು ಹಾಗು ಶಾಖೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗಳ ಕೌಂಟರ್‌ಗಳಲ್ಲಿ ನಾಮಫಲಕಗಳನ್ನು ಅಳವಡಿಸಲು ತಿಳಿಸಿದರು.
ಇದೇ ಸಂದರ್ಭದಲ್ಲಿ ಪಿಂಚಣಿದಾರರ ಸಭೆಯಲ್ಲಿ ಭಾಗವಹಿಸಿದ್ದ ಭಾರತೀಯ ಸ್ಟೇಟ್ ಬ್ಯಾಂಕ್ ವಿಭಾಗಿಯ ವ್ಯವಸ್ಥಾಪಕ ಸುನೀಲಕುಮಾರ ಶೇಶೆಟ್ಟಿ ಮಾತನಾಡಿ, ಸರಕಾರಿ ನಿವೃತ್ತ ನೌಕರರಿಗೆ ಭಾರತೀಯ ಸ್ಟೇಟ್ ಬ್ಯಾಂಕ್‌ನಿಂದ ದೊರೆಯುವ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗುವುದು. ಪಿಂಚಣಿದಾರರಿಗೆ ಬ್ಯಾಂಕಿನಲ್ಲಿ ಪ್ರತ್ಯೇಕ ಕೌಂಟರ್ ತೆರೆಯಲು ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಿದರು.
ಅಲ್ಲದೆ ಈಗ ಬ್ಯಾಂಕ್ ವ್ಯವಹಾರಗಳು ಎಲ್ಲವು ಆನ್ಲೈನ್ ಮೂಲಕ ನಡೆಯುತ್ತಿದ್ದು,ಅದರಂತೆ ತಾವು ತಂತ್ರಜ್ಞಾನವನ್ನು ಹೆಚ್ಚು ಬಳಸಿಕೊಳ್ಳಿ,ಬ್ಯಾಂಕ್ ಯುನೊ ಯಾಪ್ ಬಳಸಲು ತಿಳಿಸಿದರು.
ಇದೇ ಸಂದರ್ಭದಲ್ಲಿ ಭಾಗವಹಿಸಿದ್ದ ನಗರದ ಎಸ್‌ಬಿಐ ಶಾಖೆ ವ್ಯವಸ್ಥಾಪಕ ಸದಾಶಿವ ರಾತ್ರಿಕರ್ ಮಾತನಾಡಿದರು, ಸಭೆಯಲ್ಲಿ ನಿವೃತ್ತ ಪ್ರಾಂಶುಪಾಲ ಬಸವರಾಜಪ್ಪ ಬಣಗಾರ, ಯಂಕೋಬ ಜೋಶಿಚಾರಿ, ಗೋಪಾಲಪ್ಪ, ಸಂಘದ ಉಪಾಧ್ಯಕ್ಷ ರಾಜಾ ಅಮರಪ್ಪನಾಯಕ, ದಾಯಿ ಮರೆಪ್ಪ, ರಾಮಣ್ಣ ಮೇಷ್ಟ್ರು, ಸತ್ಯನಾರಾಯಣ, ಬ್ಯಾಂಕಿನ ಫೀಲ್ಡ್ ಆಫೀಸರ್‌ಗಳಾದ ಕಿರಣ ಹಾಗು ಸೋಮನಾಥ ಸೇರಿದಂತೆ ಎಲ್ಲ ಸಿಬ್ಬಂದಿ ಹಾಗೂ ನಿವೃತ್ತ ನೌಕರರು ಇದ್ದರು.