ಅಂಬೇಡ್ಕರ್ ಅವರನ್ನು ರಾಜಕೀಯ ಪಕ್ಷಗಳು ದೋಚುತ್ತಿವೆ: ಉಮಾಪತಿ

0
62

ಚಿತ್ರದುರ್ಗ: ಅಂಬೇಡ್ಕರ್ ಅವರ ಪ್ರತಿಮೆ. ಭವನಗಳ‌ನಿರ್ಮಾಣಕ್ಕಿಂತ ಅವರ ಆದರ್ಶಗಳನ್ನು ಎದೆಗಿಳಿಸಿಕೊಂಡು ಮುನ್ನಡೆಯ ಬೇಕಾಗಿದೆ ಎಂದು ಖ್ಯಾತ ಪತ್ರಕರ್ತ ಡಿ ಉಮಾಪತಿ ಕರೆನೀಡಿದರು.

ಇಂದು ಶ್ರೀ ಮುರುಘಾಮಠದ ಅಲ್ಲಮ ಪ್ರಭು ಸಭಾಂಗಣದಲ್ಲಿ ಕರ್ನಾಟಕ ಎಸ್ಸಿ/ಎಸ್ಟಿ ಪತ್ರಿಕಾ ಸಂಪಾದಕರ ಸಂಘದ ಆಶ್ರಯದಲ್ಲಿ ‘ಬಿ.ರಾಚಯ್ಯ ರಾಜ್ಯ ಪ್ರಶಸ್ತಿ’ ಸ್ವೀಕರಿಸಿ ಉಮಾಪತಿ ಅವರು ಮಾತನಾಡುತ್ತಿದ್ದರು.

Contact Your\'s Advertisement; 9902492681

ವಂಚಿತರನ್ನು ಮೇಲೆತ್ತುವ ಅಂಬೇಡ್ಕರ್ ಅವರ ಚಿಂತನೆಗಳು ಈಡೇರಿಸಿಲ್ಲ. ಅವರ ಹೆಸರಿನಲ್ಲಿ ದೊಡ್ಡ ದೊಡ್ಡ ವಿಚಾರಗೋಷ್ಟಿ.ಮಹಲುಗಳನ್ನು‌ಕಟ್ಟುಲಾಗುತ್ತಿದೆ ಆದರೆ ಅವರು ಕೊಟ್ಟ ಸಂವಿಧಾನವನ್ನು ಕಾಲ ಕೆಳಗೆ ತುಳಿಯುವ ಕೆಲಸವನ್ನು ಇಂದು ಮಾಡಲಾಗುತ್ತಿದೆ. ಇವತ್ತು ಬೇಟೆಯ ನಾಯಿಯ ಜೊತೆಗೂ ಮೊಲದ ಜೊತೆಗೂ ನಾವಿದ್ದೇವೆ ಎಂಬ ಆಷಾಡಭೂತಿತನವನ್ನು ನಮ್ಮನ್ನಾಳುವವರಲ್ಲಿ ಕಾಣುತ್ತಿದ್ದೆವೆ. ಇದು ಅಂಬೇಡ್ಕರ್ ಅವರಿಗೆ ಮಾಡಿದ ಅವಮಾನ ಎಂದರು.

ಅಂಬೇಡ್ಕರ್ ಬಹುತೇಕ ರಾಜಕೀಯವಾಗಿ ರೂಪವಾಗಿ ಸಿಕ್ಕಿದ್ದಾರೆ ವಿನಃ. ಅವರ ಆಶಯಗಳನ್ನು ಕಾರ್ಯರೂಪಕ್ಕೆ ತರುವಲ್ಲಿನಸ್ಸು ಮಾಡುತ್ತಿಲ್ಲ. ಉಣ್ಣದ ವಿಗ್ರಹಕ್ಕೆ ಬೋನವಿಡುವ ಡಾಂಭಿಕತನ ಇಂದಿನ ಎಲ್ಲಾ ರಾಜಕೀಯ ಪಕ್ಷಗಳಲ್ಲಿದೆ. ದಲಿತರನ್ನು ಸಮಾನವಾಗಿ ನಡೆಸಿಕೊಳ್ಳಬೇಕೆಂಬ ಅಂಬೇಡ್ಕರ್ ಅವರ ಮಾತಿಗೆ ರಾಜಕೀಯ ಪಕ್ಷಗಳು ಕಿವುಡಾಗಿವೆ. ಮನುಸ್ಮೃತಿಯನ್ನು ಪಾಲಿಸುವವರೆ ಇಂದು ದೇಶವನ್ನು ಆಳುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ಅಂಬೇಡ್ಕರ್ ಅವರನ್ನು ಸರ್ವಶ್ರೇಷ್ಠರು ಸಂಘಪರಿವಾರದ ಮುಖವಾಣಿ ಪತ್ರಿಕೆಯಲ್ಲಿ ಸಂಪಾದಕೀಯ ದಲ್ಲಿ ಕರೆದವರು ಅವರು ಬರೆದ ಸಂವಿಧಾನವನ್ನು ಬದಲಾಯಿಸಲು ಹೊರಟಿದ್ದಾರೆ.ಹೀಗೆ ಎರಡೂ ಬಗೆಯ ಪಾತ್ರಗಳನ್ನು ಇಂದು ಮಾಡಲಾಗುತ್ತಿದೆ, ದಲಿತರ ಮತಗಳನ್ನು ಸೆಳೆಯಲು ಪಕ್ಷಗಳು ಅಂಬೇಡ್ಕರ್ ಅವರನ್ನು ದೋಚುತ್ತಿದ್ದು ನಿಜವಾದ ಅಂಬೇಡ್ಕರ್ ಅವರನ್ನು ಕೊಲ್ಲುವ ಕೆಲಸ ಮಾಡುತ್ತಿದ್ದಾರೆ ಎಂದರು.

ಸಮಾರಂಭದಲ್ಲಿ ಪತ್ರಕರ್ತ ಶಂಕ್ರಪ್ಪ ಚಲವಾದಿ ,ವಾರ್ತಾ ಇಲಾಖೆ ನಿರ್ದೇಶಕರಾದ ಬೃಂಗೇಶ್ ಅವರನ್ನು ಸನ್ಮಾನಿಸಲಾಯಿತು.

ಮುಖ್ಯ ಅತಿಥಿಗಳಾಗಿ ಕೆಯುಡಬ್ಲಯೂಜೆ ಅಧ್ಯಕ್ಷರಾದ ಶಿವಾನಂದ ತಗಡೂರು, ವಾರ್ತಾಧಿಕಾರಿ ಧನಂಜಯ್ , ಸಂಘದ ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಉಪಸ್ಥಿತಿ ರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here