ಬೆಂಗಳೂರು; ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನ ಟ್ರಸ್ಟ್ ನ 30ನೇ ವರ್ಷದ ವಾರ್ಷಿಕ ಸಂಭ್ರಮೋತ್ಸವ ಪ್ರಯುಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಗೌರವ ಅಧ್ಯಕ್ಷರು ಹಾಗೂ ಸಮಾಜ ಸೇವಕರಾದ ಬನ್ನೂರಿನ ಡಾ.ಕೆ.ಮಹೇಂದ್ರ ಸಿಂಗ್ ರಾಜ್ ಪುರೋಹಿತ್ ಕಾಳಪ್ಪ ನವರು ಅಧ್ಯಕ್ಷತೆಯಲ್ಲಿ ಹಾಗೂ ಅಧ್ಯಕ್ಷರಾದ ರಮೇಶ್ ಸುರ್ವೆ ರವರ ನೇತೃತ್ವದಲ್ಲಿ ಬೆಂಗಳೂರಿನ ಕೆಂಪೇಗೌಡ ನಗರದ ಉದಯಭಾನು ಕಲಾಸಂಘದ ಆಡಿಟೋರಿಯಮ್ ನ ಆವರಣದಲ್ಲಿಂದು ಸರ್.ಎಂ.ವಿಶ್ವೇಶ್ವರಯ್ಯರವರ ಜನ್ಮ ದಿನಾಚರಣೆಯ ಅಂಗವಾಗಿ ಸಾಂಸ್ಕೃತಿಕ ಜನಪದೋತ್ಸವ ಮತ್ತು ಹಿರಿಯ ಸಾಹಿತಿಗಳಿಗೆ ಗೌರವಾರ್ಥವಾಗಿ ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ ಪ್ರದಾನ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತ್ತು.
ಇನ್ನು ಕಾರ್ಯಕ್ರಮದ ಸಾಂಕೇತಿಕ ಉದ್ಘಾಟನೆಯನ್ನು ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನ ಟ್ರಸ್ಟ್ ನ ಗೌರವಾಧ್ಯಕ್ಷರು ಮತ್ತು ಬನ್ನೂರಿನ ಸಮಾಜಸೇವಕರು ಹಾಗೂ ಬನ್ನೂರು ರೋಟರಿ ಸಂಸ್ಥೆಯ ಮಾಜಿ ಅಧ್ಯಕ್ಷರಾದ MPHF ಡಾ.ಕೆ.ಮಹೇಂದ್ರ ಸಿಂಗ್ ರಾಜ್ ಪುರೋಹಿತ್ ಕಾಳಪ್ಪ ನವರು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದ್ದರು.
ಇನ್ನು ಈ ಸಂದರ್ಭದಲ್ಲಿ ಪ್ರತಿಷ್ಠಾನದ ಅಧ್ಯಕ್ಷರಾದ ರಮೇಶ್ ಸುರ್ವೆ,ಕಲ್ಮೇಶ್ವರ ಸ್ವಾಮಿಗಳು,ಸಾಹಿತಿಗಳಾದ ಡಾ.ಭದ್ರಾವತಿ ರಾಮಾಚಾರಿ,ಪ್ರತಿಷ್ಠಾನದ ಸಂಚಾಲಕರು ಗಳಾದ ಬಿ. ಹೆಚ್.ಹೋಂಗಲ್, ಉಲ್ಲಾಸ್ ರಾವ್ ರೇಣುಕೆ,ರಾಜ್ ಸಂಪಾಜೆ,ಕರಿಬಸಪ್ಪ ವೈ.ಶೋಗಿ, ರವರು ಸೇರಿದಂತೆ ಹಲವಾರು ಉಪಸ್ಥಿತರಿದ್ದರು.
ಇನ್ನು ಇದೆ ಸಂದರ್ಭದಲ್ಲಿ ಕರ್ನಾಟಕದ ವಿವಿಧ ರಾಜ್ಯಗಳಿಂದ,ಜಿಲ್ಲೆಗಳಿಂದ,ತಾಲ್ಲೂಕುಗಳಿಂದ ಆಗಮಿಸಿದ ಕಲಾತಂಡದ ಕಲಾವಿದರಿಂದ ವಚನ ಗಾಯನ,ಜಾನಪದ ಗಾಯನ,ನೃತ್ಯ ಪ್ರದರ್ಶನ ಹೀಗೆ ಅನೇಕ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತ್ತು.
ನಂತರ ಇದೆ ವೇಳೆ ಬಾಗಲಕೋಟೆ ಜಿಲ್ಲೆಯ ನಗರಾಳ ಗ್ರಾಮದ ಯೋಗಪಟು ವಿಷ್ಣು ನ್ಯಾಮಗೌಡರು ರವರ ಯೋಗ ಪ್ರದರ್ಶನವನ್ನು ಕಂಡು ಮತ್ತು ಅಂಗವಿಕಲರಾದ ನಿರೂಪಣೆ ಮಾಡಿದ್ದ ರಾಜ್ ಸಂಪಾಜೆ ರವರಿಗೆ ಪ್ರತಿಷ್ಠಾನ ಟ್ರಸ್ಟ್ ನ ಗೌರವಾಧ್ಯಕ್ಷರಾದ ಡಾ.ಕೆ.ಮಹೇಂದ್ರ ಸಿಂಗ್ ಕಾಳಪ್ಪ ನವರು ಧನಸಹಾಯ ಮಾಡಿ ಸನ್ಮಾನಿಸಿ ಅಭಿನಂದಿಸಿದ್ದರು.