ಶಹಾಬಾದ: ನಗರದ ಬಿಜೆಪಿ ಮಂಡಲ ವತಿಯಿಂದ ಶನಿವಾರ ಪಾರ್ವತಿ ಕಲ್ಯಾಣ ಮಂಟಪ ಪಂಡಿತ್ ದೀನದಯಾಳ ಉಪಾಧ್ಯಾಯ ವರ ೧೦೫ ನೇ ಜನ್ಮ ದಿನ ಕಾರ್ಯಕ್ರಮವನ್ನು ಆಚರಿಸಲಾಯಿತು.
ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಮಾತನಾಡಿ, ದೀನದಯಾಳರು ಸಂಘಟಿಕರಾಗಿ, ಸಂಘದ ಪ್ರಚಾರಕರಾಗಿ, ಜನಸಂಘದ ಪದಾಧಿಕಾರಿಯಾಗಿಯೂ, ಸಂಘಟನಾ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ.ದೀನ ದಯಾಳರ ಕಾರ್ಯಶೈಲಿಯನ್ನು ನೋಡಿದ ಡಾ.ಶ್ಯಾಮ ಪ್ರಸಾದ ಮುಖರ್ಜಿಯವರು ನನಗೆ ಇಂತಹ ಇನ್ನಿಬ್ಬರು ದೀನದಯಾಳರು ಸಿಕ್ಕರೆ ದೇಶದ ರಾಜಕೀಯ ಚಿತ್ರವನ್ನೇ ಬದಲಾಯಿಸುತ್ತೆನೆ ಎಂದಿದ್ದರು.
ಈ ದೇಶದ ರಾಜಕೀಯದ ಬಗ್ಗೆ ಚಿಂತನೆ ಮಾಡಿ ಏಕತಾ ಮಾನವತಾವಾದ ಪುಸ್ತಕ ಬರೆದಿದ್ದರು.ಅಖಂಡ ಭಾರತವನ್ನು ಬಲಪಡಿಸಬೇಕೆಂದು ದಿನದ ಹೆಚ್ಚಿನ ಸಮಯವನ್ನು ಜನಸಂಘದ ಬಗ್ಗೆ ಚಿಂತಿಸಿದವರು. ಕೊನೆಗೆ ದೇಶಕ್ಕಾಗಿಯೇ ತನ್ನ ಪ್ರಾಣವನ್ನು ತ್ಯಾಗಮಾಡಿದರು. ಅವರು ಹಾಕಿಕೊಟ್ಟ ಸನ್ಮಾರ್ಗವನ್ನು ನಾವೆಲ್ಲ ಕಾರ್ಯಕರ್ತರು ಅನುಸರಿಸಬೇಕೆಂದು ಹೇಳಿದರು.
ಪ್ರಭಾರಿಗಳಾದ ವಿಧ್ಯಾಸಾಗರ ಕುಲಕರ್ಣಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಬಿರಾದಾರ,ರಾಜ್ಯ ಎಸ್ಸಿ ಮೋರ್ಚಾ ಉಪಾಧ್ಯಕ್ಷ ಅಂಬರಾಯ ಅ?ಗಿ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಭಾಗಿರಥಿ ಗುನ್ನಾಪೂರ,ನಗರ ಅಧ್ಯಕ್ಷೆ ಜಯಶ್ರೀ ಸೂಡಿ, ಉಪಾಧ್ಯಕ್ಷೆ ಶಶಿಕಲಾ ಸಜ್ಜನ್, ಮಂಡಲ ಸಂಚಾಲಕ ಚಂದ್ರಕಾಂತ ಗೊಬ್ಬೂರಕರ, ಕನಕಪ್ಪ ದಂಡಗೂಲಕರ,ಡಿ.ಸಿ.ಹೊಸಮನಿ, ಶರಣು ವಸ್ತ್ರದ, ರಾಜು ಕುಂಬಾರ, ಪ್ರಧಾನ ಕಾರ್ಯದರ್ಶಿ ಸಿದ್ರಾಮ ಕುಸಾಳೆ, ಉಪಾಧ್ಯಕ್ಷರಾದ ಮಹಾದೇವ ಗೊಬ್ಬುರಕರ,ಬಸವರಾಜ ತರನಳ್ಳಿ,ಶ್ರೀಧರ ಜೋಶಿ, ಅಣೆಪ್ಪ ದಸ್ತಾಪೂರ, ಪ್ರಮುಖರಾದ ಅನಿಲ ಬೋರಗಾಂವಕರ, ಭೀಮರಾವ ಸಾಳೂಂಕೆ, ಅರುಣ ಪಟ್ಟಣಕರ,ಸುಭಾ? ಜಾಪೂರ,ನಾಗರಾಜ ಮೇಲಗಿರಿ,ನಿಂಗಣ್ಣ ಹುಳಗೋಳಕರ,ಬಸವರಾಜ ಬಿರಾದಾರ,ನಗರಸಭೆ ಸದಸ್ಯರಾದ ರವಿ ರಾಠೋಡ,ತಿಮ್ಮಾಬಾಯಿ ಕುಸಾಳೆ, ಪಾರ್ವತಿ ಪವರ,ಜಗದೇವ ಸುಭೆದಾರ,ಮಂಜುನಾಥ ದೊಡ್ಡಮನಿ,ಶಿವಗೌಡ,ಚಂದ್ರಕಾಂತ ಸುಭೆದಾರ,ಭೀಮಯ್ಯ ಗುತ್ತೆದಾರ ಸೇರಿದಂತೆ ಅನೇಕರು ಇದ್ದರು.
ಇದೇ ಸಂದರ್ಭದಲ್ಲಿ ಜನಸಂಘದ ಕಾರ್ಯಕರ್ತರಾದ ಭದ್ರಿನಾರಾಯಣ ಸಾರಡಾ,ಶ್ರೀಶೈಲ ಬೆಳಮಗಿ,ಶರಣಪ್ಪ ಹದನೂರ,ಚಂದ್ರಕಾಂತ ಗೋಬ್ಬುರಕರ, ಕನಕಪ್ಪ ದಂಡಗೂಲಕರ, ಶಂಕರ ಕುಂಬಾರ ಅವರನ್ನು ಸನ್ಮಾನಿಸಲಾಯಿತು.