ದೂರದರ್ಶನ ಮುಚ್ಚಿದರೆ ಉಗ್ರ ಹೋರಾಟ

0
37

ಕಲಬುರಗಿ : ದೂರದರ್ಶನ ಕೇಂದ್ರ ಮುಚ್ಚಲು ಕೇಂದ್ರ ಸರ್ಕಾರ ಪ್ರಯತ್ನಿಸಿದರೆ ಉಗ್ರವಾದ ಹೋರಾಟವನ್ನು ಕೈಗೊಳ್ಳಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ (ಕನ್ನಡಿಗರ ಬಣದ) ಮುಖಂಡರಾದ ಮಾದೇಶ ಬಿರಾದಾರ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಜನಸಾಮಾನ್ಯರಿಗೆ ಹತ್ತಿರವಾಗಿರುವ ಹಾಗೂ ಸುತ್ತಮುತ್ತಲಿನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಇಡೀ ರಾಜ್ಯಾದ್ಯಂತ ಬಿತ್ತರಗೊಳಿಸಿ ಸಂಸ್ಕೃತಿಯ ಮಹತ್ವವನ್ನು ಸಾರ್ವಜನಿಕರಿಗೆ ತಿಳಿಸುವಂತಹ,ಮಕ್ಕಳಿಗೆ ವಿದ್ಯಾರ್ಜನೆಗಾಗಿ ಅನೇಕ ಸರಣಿ ಪಾಠಗಳನ್ನು ಮಾಡಿಕೊಂಡು ಬಂದಿರುವಂತಹ ಈ ತರಹದ ಅನೇಕ ಕಾರ್ಯಕ್ರಮಗಳು ಈ ದೂರದರ್ಶನ ಕೇಂದ್ರದಲ್ಲಿ ಬಿತ್ತರಗೊಂಡು ರೈತರ ಮನಸ್ಸನ್ನ ಗೆದ್ದಿರುವ ದೂರದರ್ಶನ ಕೇಂದ್ರವನ್ನು ಮುಚ್ಚುವುದು ತೀರಾ ದುರದೃಷ್ಟಕರ ಸಂಗತಿ. ಮಾನ್ಯ ಪ್ರಧಾನ ಮಂತ್ರಿಗಳ ಮನ್ ಕೀ ಬಾತ್ ಸರಣಿ ಕಾರ್ಯಕ್ರಮವನ್ನು ದೂರದರ್ಶನ ಕೇಂದ್ರದಿಂದ ಎಲ್ಲಾ ತರಗತಿಗಳಲ್ಲಿ ಮಕ್ಕಳು ಆಲಿಸುತ್ತಿದ್ದಾರೆ.

Contact Your\'s Advertisement; 9902492681

ಜನಸಾಮಾನ್ಯರು ಕೂಡ ತಮ್ಮ ಮೊಬೈಲ್ ಗಳಲ್ಲಿ ಹಾಗೂ ರೇಡಿಯೊಗಳಲ್ಲಿ ಇಂತಹ ಶ್ರೇಷ್ಠ ಕಾರ್ಯಕ್ರಮಗಳನ್ನು ಆಲಿಸುತ್ತಿರುತ್ತಾರೆ. ಇನ್ಮೇಲೆ ಇಂತಹ ಕಾರ್ಯಕ್ರಮಗಳನ್ನು ಕೇಳುವುದಕ್ಕೆ ಜನರಿಗೆ ಆಗುವುದಿಲ್ಲ.ಈಗಾಗಲೇ ಇಡೀ ಜಿಲ್ಲೆಯಾದ್ಯಂತ ದೂರದರ್ಶನ ಕೇಂದ್ರ ಮುಚ್ಚಲು ಮುಂದಾದ ಸುದ್ದಿ ಹರಡಿದಾಗ ಅನೇಕ ಸಂಘ ,ಸಂಸ್ಥೆಗಳು, ಸಾರ್ವಜನಿಕರು ವಿರೋಧಿಸಿದ್ದಾರೆ.

ಆದ್ದರಿಂದ ಕೇಂದ್ರ ಸರ್ಕಾರ ಇಂತಹ ಜನವಿರೋಧಿ ಕೆಲಸಕ್ಕೆ ಕೈ ಹಾಕಬಾರದು ಕೂಡಲೇ ದೂರದರ್ಶನ ಕೇಂದ್ರವನ್ನು ಮುಚ್ಚುವ ಕೆಲಸಕ್ಕೆ ಪ್ರಧಾನಮಂತ್ರಿಗಳು ಮುಂದಾಗಬಾರದು ಎಂದು ಅವರು ಪ್ರಧಾನಮಂತ್ರಿಗಳಿಗೆ ಮನವಿ ಮಾಡಿದರು .

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here