74. 36 ಕೋಟಿ ರು ವೆಚ್ಚದ ಕೆರೆ ತುಂಬುವ ಯೋಜನೆ- ಜೇವರ್ಗಿ 26 ಹಳ್ಳಿಗಳಲ್ಲಿ ಹಸಿರು ಕ್ರಾಂತಿ

0
24

ಕಲಬುರಗಿ: ಮಲ್ಲಾಬಾದ್ ಏತ ನೀರಾವರಿ ಯೋಜನೆಯ ಲಿಫ್ಟ್ – 2 ರ ಅಡಿಯಲ್ಲಿ ಬರುವ ಬಿಡಿ- 1 ಮತ್ತು ಬಿಡಿ – 2 ರ ಮುಖಾಂತರ ಹಂಗರಗಾ ಬಿ, ಸೈದಾಪುರ ಮತ್ತು ಹಾಲಗಡ್ಲಾ ಕೆರೆ ತುಂಬುವ ಅಂದಾಜು 74. 36 ಕೋಟಿ ರುಪಾಯಿ ವೆಚ್ಚದ ಯೋಜನೆಗೆ ಚಾಲನೆ ನೀಡುವ ಮಹತ್ವದ ಸಮಾರಂಭಕ್ಕೆ ಸೆ. 29 ರ ಬುಧವಾರ ಜೇವರ್ಗಿ ತಾಲೂಕು ಸಾಕ್ಷಿಯಾಗಲಿದೆ.

ತಾಲೂಕಿನ ಇಜೇರಿ ಹಾಗೂ ಗೂಗಿಹಾಳÀ ಮಧ್ಯದಲ್ಲಿರುವ ಕಾಲುವೆಯ ಬಳಿ ಸದರಿ ಬಹುಕೋಟಿ ರುಪಾಯಿ ವೆಚ್ಚದ ಯೋಜನೆಯಗೆ ಚಾಲನೆ ನೀಡಲಾಗುತ್ತಿದೆ. ವಿಧಾನಸಬೆ ವಿರೋಧ ಪಕ್ಷದ ಮುಖ್ಯ ಸಚೇತಕರು ಹಾಗೂ ಜೇವರ್ಗಿ ಶಾಸಕರಾದ ಡಾ. ಅಜಯ್ ಸಿಂಗ್ ಈ ಮಹತ್ವದ ಹಾಗೂ ರೈತರ ಭಾಗ್ಯ ಬೆ¼ಗುವ ಯೋಜನೆಗೆ ಪೂಜೆ ನಡೆಸುವ ಮೂಲಕ  ಅಡಿಗಲ್ಲು ಇಡಲಿದ್ದಾರೆ. ಇದಲ್ಲದೆ ಇಜೇರಿಯ ಬಸ್ ನಿಲ್ದಾಣದ ಬಳಿ ಆಯೋಜಿಸಲಾಗಿರುವ ಸಮಾರಂಭದಲ್ಲಿ ಶಾಸಕ ಡಾ. ಅಜಯ್ ಸಿಂಗ್ ಬಹಿರಂಗ ಸಭೆಯಲ್ಲಿ ಜನರನ್ನುದಿದೇಶಿಸಿ ಮಾತನಾಡಲಿದ್ದಾರೆ.

Contact Your\'s Advertisement; 9902492681

ಕೃಷ್ಣಾ ಭಾಗ್ಯ ಜಲ ನಿಗಮದಅಡಿಯಲ್ಲಿನ ಈ ಮಹತ್ವಕಾಂಕ್ಷಿ ಯೋಜನೆ ಜೇವರ್ಗಿ ತಾಲೂಕಿನ ಬರ ಪೀಡಿತ ಹಳ್ಳಿಗಾಡಲ್ಲಿ ಹಸಿರು ಚಿಗುರಿಸಲಿದೆ. ಈ ಯೋಜನೆ ಕೈಗೂಡಿದಲ್ಲಿ 26 ಹಲ್ಳಿಗಳ ವಾಪ್ತಿಯಲ್ಲಿ ಬರುವ 16, 722 ಹೆಕ್ಟರ್ ಪ್ರದೇಶ ನೀರಾವರಿಗೊಳಪಡಲಿದೆ. 4 ಟಿಎಂಸಿ ನೀರಿನ ಹಂಚಿಕೆಯ ಈ ಯೋಜನೆಯಿಂದ ಜೇವರ್ಗಿಯ 26 ಹಳ್ಳಿಗಳಿಗೆ ಸವಲತ್ತು ಸಿಗಲಿದೆ. ಇದರಿಂದ ಜೇವರ್ಗಿ ತಾಲೂಕಿನಲ್ಲಿ ಹಸಿರು ಕ3ಆಂತಿ, ಜಲಕ್ರಾಂತಿಯೇ ಆಗಲಿದೆ ಎಂದು ವಿಧಾನಸಬೆ ವಿರೋಧ ಪಕ್ಷದ ಮುಕ್ಯ ಸಚೇತಕರು ಹಾಗೂ ಜೇವರ್ಗಿ ಶಾಸಕರು ಆಗಿರುವ ಡಾ. ಅಜಯ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

ಜೇವರ್ಗಿ ರೈತಾಪಿಗಳಿಗೆ ಹಸಿರು ಕ್ರಾಂತಿಯ ಸಿಹಿಫಲ ದೊರಕುವಂತಾಗಲು ಇವರು ಸದನದಲ್ಲಿ ಸತತ ಸದರಿ ಯೋಜನೆಯ ಬಗ್ಗೆ ಪ್ರಶ್ನೆಗಳನ್ನೆತ್ತಿ, ಸರಕಾರದ ಗಮನ ಸೆಳೆದು ಇದೀಗ ಯೋಜನೆಯು ಮಂಜೂರಾಗುವಂತೆ ಮಾಡಿದ್ದಾರೆ. ಕೆರೆಗಳಲ್ಲಿ ಜಲಕ್ರಾಂತಿಯಾಗುವುದರ ಮೂಲಕ ಸಾವಿರಾರು ಹ್ಟೆರ್ ನೀರಾವರಿಯಾಗುತ್ತಿರುವುದರ ಹೀಂದೆ ಡಾ. ಅಜಯ್ ಸಿಂಗ್ ಅವರ ರೈತಪರ ಕಾಳಜಿ ಹಾಗೂ ಜೇವರ್ಗಿ ಜನರ ಪ್ರತಿ ಅವರಿಗಿರುವ ಪ್ರೀತಿಯೇ ಕಾರಣವಾಗಿದೆ.

ಮಲ್ಲಾಬಾದ್ ಏತ ನೀರಾವರಿಯ ಲಿಫ್ಟ್ 2 ನ್ನು ಎಂಬಿಸಿ ಕಾಲುವೆ 20 ಕಿಮಿರಿಂದ ಆರಂಭಿಸಿ 300 ಕಿಮೀ ಉದ್ದದ ಇನ್‍ಟೆಕ್ ಕಾಲುವೆ ಮೂಲಕ ಜಾಕವೆಲ್‍ಗೆ ತಲುಪುತ್ತದೆ. ಇಲ್ಲಿಂದ 990 ಮಿ ರೈಜಿಂಗ್ ಮೇನ್ ಮೂಲಕ ವಿತರಮಾ ಚೆಂಬರ್‍ಗೆ ತಲುಪಿ ಮುಂದೆ 16 ಕಿಮೀ ವರೆಗೆ ಉದ್ದ ಮುಖ್ಯ ಕಾಲುವೆ ನಿರ್ಮಾಣಗೊಂಡಿದೆ. 16 ಕಿಮೀ ಕಾಲುವೆ ಕಾಮಗಾರಿ ಪೂರ್ಣಗೊಂಡಿದ್ದು ಈ ಪೈಕಿ 400 ಮೀಟರ್ ಭೂ ಸ್ವಾಧೀನದಿಂದಾಗಿ ಬಾಕಿ ಇದೆ. ಇಲ್ಲಿ ಒಟ್ಟು 13 ವಿತರಮಾ ಕಾಲುವೆಗಳಿವೆ.

ಈ ಪೈಕಿ ಬಿಡಿ- 1 ಮತ್ತು ಬಿಡಿ 2 ಸಹ ಇರೋದರಿಂದ ಇಲ್ಲಿಂದಲೇ ಹಂಗರಗಾ ಬಿ, ಸೈದಾಪುರ ಹಾಗೂ ಹಾಲಗಡ್ಲಾ ಕೆರೆಗಳಿಗೆ ನೀರು ತುಂಬುವ ಯೋಜನೆಯಡಿಯಲ್ಲಿ ಕಾಲುವೆಗಳ ನಿರ್ಮಾಣಕ್ಕಾಗಿ 73. 50 ಕೋಟಿ ರು ವೆಚ್ಚದ ಂದಾಜು ಯೋಜನೆ ಅನುಮೋದನೆಗೊಂಡಿದೆ. ಈ ಯೋಜನೆಗೆ ಡಾ. ಅಜಯ್ ಸಿಂಗ್ ಬೆನ್ನು ಹತ್ತಿ ಸರಕಾರದ ಹಂತದಲ್ಲಿ ಅನುಮೋದನೆ ದೊರಕುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದನ್ನು ಯಾರೂ ಮರೆಯುವಂತಿಲ್ಲ. ಈಗಾಗಲೇ ಈ ಯೋಜನೆಯಲ್ಲಿ ಸಾಕಷ್ಟು ಪ್ರಗತಿಯಾಗಿದ್ದು ಜೇವರ್ಗಿ ತಾಲೂಕಿನ 26 ಹಳ್ಳಿಗಳಿಗೆ ನೀರಾವರಿ ಸವಲತ್ತು ಒದಗಲಿದೆ. ನೀರಾವರಿ ಸವಲತ್ತು ಹೊಂದುವ ಹಳ್ಳಿಗಳ ನೋಟ ಹೀಗಿದೆ.

ಸೈದಾಪುರ- 80. 22 ಹೆ, ಕುಕನೂರ್- 569 ಹೆ, ಹಿರೇ ಹಂಗರಗಾ- 885 ಹೆ, ಕರ್ಕಿಹಲ್ಳಿ- 532 ಹೆ, ಯಲಗೋಡ- 1080 ಹೆ, ಗೋಗಿಹಾಳ0- 250 ಹೆ, ನಂದಿಹಳ್ಳಿ- 412 ಹೆ, ಜವಳಗಾ- 383 ಹೆ, ಆಲೂರ- 1941 ಹೆ, ಗೊಬ್ಬೂರವಾಡಿ- 472 ಹೆ, ಮುತ್ತಕೋಡ- 344 ಹೆ, ನೀರಲಕೋಡ್- 263 ಹೆ, ಸಾಥಖೇಡ- 14, 46 ಹೆ, ಮಾಡಗಿ- 930 ಹೆ, ಕಾಖಂಡಕಿ- 492 ಹೆ, ನೆರಡಗಿ- 333 ಹೆ, ಇಜೇರಿ- 284 ಹೆ, ಹಾಲಗಡ್ಲಾ- 828 ಹೆ, ಸಿಗರಥ ಹಲ್ಳಿ0- 242 ಹೆ, ಯಾಲವಾರ- 1398 ಹೆ, ಕಾಸರಬೋಸಗಾ- 078 ಹೆ, ಚಿಗರಳ್ಳಿ- 66. 57 ಹೆ, ಸೋಮನಾಥಹಲ್ಳಿ- 260 ಹೆ, ಅಣಜಗಿ- 186 ಹೆ, ವರವಿ- 439 ಹೆ, ಔರಾದ್- 55. 26 ಹೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here