ಕಲಬುರಗಿ: ಹುಮನಾಬಾದನ ಮೌಂಟ ರೇಕುಳಗಿಯಲ್ಲಿ ರಾಜ್ಯ ಸರ್ಕಾರದಿಂದ ಮಂಜೂರಾದ ಅಂದಾಜು 3 (ಮೂರು) ಕೋಟಿ ಅನುದಾನವನ್ನು ಬಿಡುಗಡೆ ಮಾಡಿ ಕಾಮಗಾರಿಯನ್ನು ಆರಂಭಿಸಲು ಇಂದು ನಗರಕ್ಕೆ ಆಗಮಿಸಿದ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಯವರಿಗೆ ಪೂಜ್ಯ ಭಂತೆ ರೇವತ್ ಹಾಗೂ ಬಿಜೆಪಿ ಎಸ್ ಸಿ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಅಂಬಾರಾಯ ಅಷ್ಠಗಿ ಮನವಿ ಸಲ್ಲಿಸಿದರು.
ಈಗಾಗಲೆ ಮಂಜೂರಾದ ಕಾಮಗಾರಿಯು ಅನುದಾನದ ಕೊರತೆಯಿಂದ ಪ್ರಾರಂಭವಾಗಿರುವುದಿಲ್ಲ. ಆದ್ದರಿಂದ ಆದಷ್ಟೂ ಶೀಘ್ರದಲ್ಲಿ ಹಣ ಬಿಡುಗಡೆಗೋಳಿಸಿ ಕಾಮಗಾರಿಯನ್ನು ಪ್ರಾರಂಭ ಮಾಡುವ ಮೂಲಕ ಅಸಂಖ್ಯಾತ ಬೌದ್ಧ ಧರ್ಮದ ಅನುಯಾಯಿಗಳಿಗೆ ಅನುಕೂಲ ಕಲ್ಪಿಸಿ ಕೊಡಲು ಪೂಜ್ಯ ಭಂತೆ ರೇವತ್ ಹಾಗೂ ಅಂಬಾರಾಯ ಅಷ್ಠಗಿ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಕಲಬುರಗಿ ಗ್ರಾಮೀಣ ಶಾಸಕರಾದ ಬಸವರಾಜ ಮತ್ತಿಮುಡ, ಮೌಂಟ ನ ಪೂಜ್ಯ ಭಂತೆ ಧರ್ಮಪಾಲ, ಶಿವ ಅಷ್ಠಗಿ, ರವಿಚಂದ್ರ ಕಾಂತಿಕರ್, ಇದ್ದರು.
BOX…[… ..]
ಮೌಂಟ ರೇಕುಳಗಿಯ ಅನಾಥ ಪಿಂಡಕ ಬುದ್ಧ ವಿಹಾರವು ಒಂದು ಐತಿಹಾಸಿಕ ಧಾರ್ಮಿಕ ಸ್ಥಳವಾಗಿದ್ದೂ, ಇಲ್ಲಿ ಇನ್ನು ಹೆಚ್ಚಿನ ಧಾರ್ಮಿಕ ಚಟುವಟಿಕೆಗಳನ್ನು ಕೈಗೊಳ್ಳಲು,ಸರ್ಕಾರದ ಅನುದಾನ ಅವಶ್ಯಕವಾಗಿದೆ. ಮಾನ್ಯ ಸಚಿವರು ಈ ಬುದ್ಧ ವಿಹಾರ ಅಭಿವೃದ್ದಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ಅನುದಾನ ನೀಡುವ ಭರವಸೆ ಇದೆ. – ಅಂಬಾರಾಯ ಅಷ್ಠಗಿ, ಬಿಜೆಪಿ ಎಸ್ ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಹಾಗೂ ಕಲಬುರಗಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ.