ಕಲಬುರಗಿ: ಜಿಲ್ಲೆಯ ಅಫಜಲಪೂರ್ ತಾಲ್ಲೂಕಿನ ಮಲ್ಲಾಬಾದ್ ಹಾಗೂ ಮಾಶಾಳದಲ್ಲಿ ಪೋಲಿಸರು ಕಾರ್ಯಾಚರಣೆ ನಡೆಸಿ ಜೂಜಾಟದಲ್ಲಿ ತೊಡಗಿದ್ದ ಒಟ್ಟು ಐವರನ್ನು ಬಂಧಿಸಿದ್ದಾರೆ. ಬಂಧಿತರನ್ನು ಮಲ್ಲಾಬಾದ್‌ನ ಗಣಪತಿ ತಂದೆ ಬಸಣ್ಣ ಕಂಠೋಳ್ಳಿ, ಮಾಶಾಳದ ರಫಿಕ್ ತಂದೆ ಅಮಿನಸಾಬ್ ಖಸಾಯಿ, ಬೀರಪ್ಪ ತಂದೆ ಈಶ್ವರಪ್ಪ ಪೂಜಾರಿ, ಉಮೇಶ್ ತಂದೆ ಹಣಮಂತ್ ಕೌಂಟಗಿ, ಗೌತಮಬುದ್ಧ ತಂದೆ ತುಕ್ಕಪ್ಪ ತೆಲ್ಲುಣಗಿ ಎಂದು ಗುರುತಿಸಲಾಗಿದೆ.
ಮಾಶಾಳ್ ಗ್ರಾಮದ ವಿಜಯಲಕ್ಷ್ಮೀ ದೇವಸ್ಥಾನದ ಮುಂದೆ ೧ ರೂ.ಗೆ ೮೦ರೂ.ಗಳನ್ನು ಗೆಲ್ಲಿರಿ ಎಂದು ಮಟಕಾ ಚೀಟಿಗಳನ್ನು ಬರೆದುಕೊಡುತ್ತಿದ್ದ ಗಣಪತಿ ತಂದೆ ಬಸಣ್ಣ ಕಂಠೋಳ್ಳಿಯನ್ನು ಅಫಜಲಪೂರ್ ಪೋಲಿಸ್ ಠಾಣೆಯ ಪಿಎಸ್‌ಐ ಹಾಗೂ ಸಿಬ್ಬಂದಿಯವರು ಪಂಚರ ಸಮಕ್ಷಮ ಕಾರ್ಯಾಚರಣೆ ಕೈಗೊಂಡು ಬಂಧಿಸಿದರು. ಬಂಧಿತನಿಂದ ೧೦೨೦ರೂ.ಗಳು ಹಾಗೂ ಒಂದು ಮಟಕಾ ಚೀಟಿ, ಒಂದು ಪೆನ್ನು ವಶಪಡಿಸಿಕೊಂಡರು.
ಅದೇ ರೀತಿ ಪೋಲಿಸರು ಮಆಶಾಳ್ ಗ್ರಾಮದ ಗುಜಮುಕ್ಕಮ್ಮ ದೇವರ ಗುಡಿಯ ಮುಂದೆ ಇಸ್ಟೇಟ್ ಜೂಜಾಟದಲ್ಲಿ ತೊಡಗಿದ್ದ ರಫಿಕ್ ತಂದೆ ಅಮಿನಸಾಬ್ ಖಸಾಯಿ, ಬೀರಪ್ಪ ತಂದೆ ಈಶ್ವರಪ್ಪ ಪೂಜಾರಿ, ಉಮೇಶ್ ತಂದೆ ಹಣಮಂತ್ ಕೌಂಟಗಿ, ಗೌತಮಬುದ್ಧ ತಂದೆ ತುಕ್ಕಪ್ಪ ತೆಲ್ಲುಣಗಿ ಅವರನ್ನು ಬಂಧಿಸಿ, ಅವರಿಂದ ೧೫೮೦ರೂ.ಗಳು, ೫೨ ಇಸ್ಪೇಟ್ ಜೂಜಾಟಗಳನ್ನು ವಶಪಡಿಸಿಕೊಂಡರು. ಈ ಕುರಿತು ಅಫಜಲಪೂರ್ ಪೋಲಿಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ತನಿಖೆ ಮುಂದುವರೆದಿದೆ.