ಕಲಬುರಗಿ: ಆಳಂದ ರಸ್ತೆಯಲ್ಲಿರುವ ಅಣ್ಣಾರಾವ ಬೆಣ್ಣೂರ ಕಲ್ಯಾಣ ಮಠಪದಲ್ಲಿ ಶ್ರೀ ಚನ್ನಮಲ್ಲೇಶ್ವ ಪತ್ತಿನ ಸಹಕಾರ ಸಂಘ ನಿಯಮಿತದ ೨೦೨೦-೨೧ ಸಾಲಿನ ೨೫ನೇ ವಾರ್ಷಿಕ ವರದಿಯ ಮಹಾಸಭೆ ಹಾಗೂ ೨೫ನೇ ವರ್ಷದ ಬೆಳ್ಳಿ ಮಹೋತ್ಸವ ಕಾರ್ಯಕ್ರಮಕ್ಕೆ ಸುಲಫಲ ಮಠದ ಪರಮಪೂಜ್ಯ ಡಾ. ಶ್ರೀಶೈಲ ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ಹಾಗೂ ಡಾ.ರಾಜಶೇಖರ ಶಿವಾಚಾರ್ಯರು ಉದ್ಘಾಟಿಸಿದರು.
ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ಮಾಜಿ ವಿಧಾನ ಪರಿಷತ ಸದಸ್ಯ ಅಲ್ಲಮಪ್ರಭು ಪಾಟೀಲ, ಸಂಘದ ಅಧ್ಯಕ್ಷ ಪರಮೇಶ್ವರ ಎಸ್.ಮುನ್ನಳ್ಳಿ, ಉಪಾಧ್ಯಕ್ಷ ಸಂತೋಷ ಕೆ.ಡೋಣಿ, ನಿರ್ದೇಶಕರಾದ ಮಲ್ಲಿನಾಥ ಹಾದಿಮನಿ, ಸಿದ್ರಾಮಪ್ಪಾ ಹೊದಲುರ, ಬಸವರಾಜ ಮಲಕೂಡ, ಶಿವಶಂಕರ ಜಾಧವ, ಚನ್ನವೀರಪ್ಪಾ ಪಾಟೀಲ, ಪ್ರಭುಲಿಂಗ ಗೊಬ್ಬುರ, ವೀರೆಶ ಶೀಲವಂತ, ಶರಣಪ್ಪಾ ದೇಗಾಂವ, ಹಣಮಂತ ಎಕಮೈಕರ, ಲಲಿತಾಬಾಯಿ ಅಲ್ಲದ, ಶಕುಂತಲಾ ಸೋಸಟ್ಟಿ ಇದ್ದರು.