ಕಲಬುರಗಿ: ಅಲ್ಪಸಂಖ್ಯಾತರ ಸಮಸ್ಯೆಗಳಿಗೆ ಅಪೇಕ್ಷೆಗೆ ತಕ್ಕಂತೆ ನ್ಯಾಯಸಿಗದ ಸಂದರ್ಭದಲ್ಲಿ, ಶೆ. 25 ನ್ಯಾಯ ಸಿಗುವ ರೀತಿ ಕ್ರಮ ಕೈಗೋಳ್ಳುತ್ತೇನೆ ಎಂದು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾದ ಅಬ್ದುಲ್ ಅಜೀಮ್ ಭರವಸೆ ನೀಡಿದರು.
ಇಂದು ನಗರದ ಹಳೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಅಲ್ಪಸಂಖ್ಯಾತರ ಸಮುದಾಯದ ಸಾರ್ವಜನಿಕ ಕುಂದುಕೊರತೆಗಳ ಸಭೆಯಲ್ಲಿ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು ಜಿಲ್ಲೆಯ ವಕ್ಫ ಆಸ್ತಿ, ಜಾತಿ ಪ್ರಮಾಣ ಪತ್ರ, ಸ್ಕಾಲರ್ಶಿಪ್, ಪ್ರಧಾನ ಮಂತ್ರಿ 15 ಅಂಶಗಳ ಯೋಜನೆ ಜಾರಿ, ಇಲಾಖೆಯಿಂದ ಆಹ್ವಾನಿಸುವ ಕೌಶಲ್ಯ ತರಬೇತಿ ಸೇರಿದಂತೆ ಯೋಜನೆಗಳ ಪಡೆಯುವಲ್ಲಿ ಆಗುತ್ತಿರುವ ಸಮಸ್ಯೆಗಳ ಕುರಿತು ಉನ್ನತ ಅಧಿಕಾರಿಗಳ ಜೊತೆ ಸಂಪರ್ಕಿಸಿ ನಿವಾರಿಸುವೆ ಎಂದರು.
ಸಂವಿಧಾನ ಭಾಷಾಂತರಿಸಿ ಸಮುದಾಯದ ಜನರಿಗೆ ನ್ಯಾಯ ಒದಗಿಸುವ ಕಾರ್ಯ ಮಾಡುತ್ತಿದ್ದೇವೆ, ಸಮಸ್ಯೆಗಳ ಅಪೇಕ್ಷೆಗೆ ತಕ್ಕಂತೆ ಸಂಪೂರ್ಣವಾಗಿ ನ್ಯಾಯ ಒದಗಿಸುವಲ್ಲಿ ಶ್ರಮಿಸಲಾಗುವುದೆಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಆಯೋಗದ ಕಾರ್ಯದರ್ಶಿ ಮೊಹಮ್ಮದ್ ನಜೀರ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಮಹಮೂದ್ ಎಸ್, ವಕ್ಫ ಜಿಲ್ಲಾ ಅಧಿಕಾರಿ ಹಜರತಗ ಅಲಿ, ಮಹಾನಗರ ಪಾಲಿಕೆಯ ಅಭಿಯಂತರರಾದ ಮೊಹಮ್ಮದ್ ಮುನಾಫ್ ಪಟೇಲ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ನಾಮ ನಿರ್ದೇಶಿತ ನಿರ್ದೇಶಕರಾದ ಸುರೇಶ್ ತಂಗಾ, ಸದ್ದಾಮ್ ಹುಸೇನ್ ವಜೀರಗಾಂವು ಸೇರಿದಂತೆ ಬಿಜೆಪಿ ಪಕ್ಷದ ಅಲ್ಪಸಂಖ್ಯಾತರ ಘಟಕದ ಕಲಬುರಗಿ ಉತ್ತರ ಕ್ಷೇತ್ರದ ಅಧ್ಯಕ್ಷರಾದ ಅಬ್ದುಲ್ ರಬ್ ಪಕ್ಷದ ಮುಖಂಡರು ಇದ್ದರು.