ಪ್ರೊ. ಪೋತೆ ಅವರ ಬಾಬಾಸಾಹೇಬರೆಡೆಗೆ ಕೃತಿ ಬಿಡುಗಡೆ

0
108

ಕಲಬುರಗಿ: ಪ್ರೊ. ಎಚ್.ಟಿ. ಪೋತೆ ಅವರು ರಾಜ್ಯ ಸಭಾ ಸದಸ್ಯ ಡಾ. ಮಲ್ಲಿಕಾರ್ಜುನ ಖರ್ಗೆ ಕುರಿತ ಜೀವನ ಕಥನ ಕುರಿತು ರಚಿಸಿದ ಬಾಬಾ ಸಾಹೇಬರೆಡೆಗೆ ಕೃತಿಯು ಖರ್ಗೆಯವರು ನಡೆದು ಬಂದ ದಾರಿ ಕುರಿತು ವಿವರಿಸುವುದರ ಜೊತೆಗೆ ಅಂದಿನಿಂದ ಇಂದಿನವರೆಗಿನ ರಾಜಕೀಯ, ಸಾಮಾಜಿಕ ಇತಿಹಾಸವನ್ನು ತಿಳಿಸಿಕೊಡುತ್ತದೆ ಎಂದು ಕರ್ನಾಟಕ ಕೇಂದ್ರೀಯ ವಿವಿ ಕನ್ನಡ ಪ್ರಾಧ್ಯಾಪಕ ಡಾ. ವಿಕ್ರಮ ವಿಸಾಜಿ ಹೇಳಿದರು.

ಕುಟುಂಬ ಪ್ರಕಾಶನ ದೃಶ್ಯ ಬೆಳಕು ಸಾಂಸ್ಕೃತಿಕ ಸಂಘಟನೆ ಆಶ್ರಯದಲ್ಲಿ ನಗರದ ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪುಸ್ತಕ ಕುರಿತು ಮಾತನಾಡಿದರು.

Contact Your\'s Advertisement; 9902492681

ಆಚಾರ,ವಿಚಾರ, ಪ್ರಚಾರವನ್ನು ತಮ್ಮ ಜೀವನದ ಧ್ಯೇಯವಾಗಿಸಿಕೊಂಡಿರುವ ಖರ್ಗೆಯವರು, ಡಾ. ಬಿ.ಆರ್. ಅಂಬೇಡ್ಕರ್ ಅವರ ಆಶಯಗಳಂತೆ ಬದುಕುತ್ತಿದ್ದಾರೆ ಎಂದು ತಿಳಿಸಿದರು.

ಈ ಸುದ್ದಿಯಲ್ಲಿಯೇ ಗುಲ್ಬರ್ಗ ವಿವಿ ಕುಲಪತಿ ಪ್ರೊ. ದಯಾನಂದ ಅಗಸರ ಮುಖ್ಯ ಅತಿಥಿಯಾಗಿದ್ದರು.

ಧಾರವಾಡ ವಿವಿ ಕನ್ನಡ ಪ್ರಾಧ್ಯಾಪಕ ಡಾ. ನಿಂಗಣ್ಣ ಮುದೇನೂರ ಮಾತನಾಡಿ, ಖರ್ಗೆಯವರು ಕಲಬುರಗಿಯಿಂದ ದೆಹಲಿವರೆಗೆ ನಡಡಸಿದ ರಾಜಕೀಯ ಯಾತ್ರೆ ಬಸವನ ಹುಳು ಮುಗಿಲಿಗೆ ಹಾರಲು ಪ್ರಯತ್ನಿಸಿದಂತಿದೆ ಎಂದು ಹೇಳಿದರು.

ಸಂಸ್ಕೃತ ವಿವಿ ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ.‌ ವೆಂಕಟೇಶ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.

ಲೇಖಕ ಪ್ರೊ. ಎಚ್.ಟಿ. ಪೋತೆ ಮಾತನಾಡಿದರು. ಡಾ. ಶ್ರೀಶೈಲ ನಾಗರಾಳ ಪ್ರಾಸ್ತಾವಿಕ ಮಾತನಾಡಿದರು. ಕುಟುಂಬ ಪ್ರಕಾಶನದ ರಮೇಶ ಪೋತೆ, ಡಾ. ಪರುಶುರಾಮ ಪಿ. ವೇದಿಕೆಯಲ್ಲಿದ್ದರು.

ಮಹಿಪಾಲರೆಡ್ಡಿ ಮುನ್ನೂರ ನಿರೂಪಿಸಿದರು. ಡಾ. ಎಂ.ಬಿ. ಕಟ್ಟಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here