ಭಗತ್ ಸಿಂಗ್ ಕನಸಿನ ಭಾರತ ವಿಚಾರ ಸಂಕಿರಣ

0
28

ಜೇವರ್ಗಿ: ಇಲ್ಲಿನ ವಿಜಯಪುರ ಕ್ರಾಸ್ ನ ಬಳಿಯಲ್ಲಿರುವ ಶ್ರೀ ಕದಂಬ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಕರ್ನಾಟಕ ವಿದ್ಯಾರ್ಥಿ ಸಂಘಟನೆ ನೇತೃತ್ವದಲ್ಲಿ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ, ದೇಶಪ್ರೇಮಿ, ಭಾರತದ ಸ್ವಾತಂತ್ರ್ಯದ ವಿಮೋಚನಾ ಕ್ರಾಂತಿಕಾರಿ ಹೋರಾಟಗಾರ ಭಗತ್ ಸಿಂಗ್ ಜನ್ಮದಿನದ ಪ್ರಯುಕ್ತ ” ಭಗತ್ ಸಿಂಗ್ ಕನಸಿನ ಭಾರತ ” ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿತ್ತು.

ಪ್ರಾಸ್ತಾವಿಕವಾಗಿ ಮಾತನಾಡಿದ
ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ಜಿಲ್ಲಾ ಸಂಚಾಲಕ ರಾಜೇಂದ್ರ ರಾಜವಾಳ, ಭಗತ್ ಸಿಂಗ್ ಕಂಡ ಕನಸನ್ನು, ನನಸು ಮಾಡುವ ಮೂಲಕ ವಿದ್ಯಾರ್ಥಿಗಳು ಇಂದಿನ ಜ್ವಲಂತ ಸಮಸ್ಯೆಗಳಾದ ನಿರುದ್ಯೋಗ ,ಬಡತನ, ಜಾತಿಪದ್ಧತಿ ಹಾಗೂ ರೈತ ವಿರೋಧಿ ಕಾನೂನುಗಳು ಸೇರಿದಂತೆ ಖಾಸಗೀಕರಣವನ್ನು ವಿರೋಧಿಸಿ ಹೋರಾಟ ನಡೆಸುವುದು ಅನಿವಾರ್ಯವಾಗಿದೆ ಎಂದು ತಿಳಿಸಿದರು.

Contact Your\'s Advertisement; 9902492681

ಪರಕೀಯ ದಾಸ್ಯದಿಂದ ಮುಕ್ತರಾದರು ದೇಸಿ ಬಂಡವಾಳಶಾಹಿಗಳಿಂದ ಸ್ವಾತಂತ್ರ್ಯ ಅತಂತ್ರವಾಗಿದೆ.ಇಂದು ನಮ್ಮ ಭಾರತ ದೇಶವನ್ನು ಅದಃಪತನದ ಅಂಚಿಗೆ ತಳ್ಳುತ್ತಿರುವ ಭ್ರಷ್ಟ ನಾಯಕರು ಹಾಗೂ ಅಧಿಕಾರಿಗಳ ವಿರುದ್ಧ ನಾವುಗಳುಸಹ ಸ್ವಾತಂತ್ರ್ಯ ಹೋರಾಟಗಾರ ಶಹೀದ್ ಭಗತ್ ಸಿಂಗ್ ರವರು ನಡೆಸಿದಂತೆ ಹೋರಾಟ ಮಾದರಿಯಲ್ಲಿ ಮತ್ತೊಂದು ಹೋರಾಟ ರೂಪಿಸಬೇಕಾಗುತ್ತದೆ.

ಮುಂದೆ ಮತ್ತೆ ನಮ್ಮ ಜನರನ್ನು ನಮ್ಮವರೇ ಶೋಷಣೆಗೆ ಮಾಡುತ್ತಾರೆ .ಹಾಗೂ ಹಣವಂತರು ಬಂಡವಾಳಶಾಹಿಗಳು ದೇಶದ ಸಂಪತ್ತನ್ನು ಸಂಗ್ರಹಿಸಿಕೊಳ್ಳುವ ಮೂಲಕ, ನಮ್ಮ ದೇಶದ ಬಡ ಕೂಲಿಕಾರರು ಹಾಗೂ ಕೆಳವರ್ಗದ ಜನರನ್ನು ಶೋಷಿಸುತ್ತಾರೆ ! ಎನ್ನುವುದು ಕ್ರಾಂತಿಕಾರಿ ಭಗತ್ ಸಿಂಗ್ ನಿಲುವಾಗಿತ್ತು.

ಇಂದಿನ ಯುವಕರು ದುಶ್ಚಟಗಳಿಗೆ ಬಲಿಯಾಗದೆ ,ಮೊಬೈಲ್ ಹಾಗೂ ಸಿನಿಮಾ ಗುಂಗಿನಿಂದ ಹೊರಬಂದು ಭಗತ್ ಸಿಂಗ್ ರವರ ” ಇಂಕಿಲಾಬ್ ಜಿಂದಾಬಾದ್ ” ಎನ್ನುವ ಘೋಷಣೆಯನ್ನು ಮತ್ತೊಮ್ಮೆ ಮೊಳಗಿಳೆಸಬೇಕಿದೆ, ಅಂದಾಗಲೇ ಮಾತ್ರ ಭಗತ್ ಸಿಂಗ್ ರ ಕನಸು ನನಸಾಗುತ್ತದೆ.ಪರಕೀಯ ದಾಸ್ಯದಿಂದ ಮುಕ್ತರಾದರು ದೇಸಿ ಬಂಡವಾಳಶಾಹಿಗಳಿಂದ ಸ್ವಾತಂತ್ರ್ಯ ಅತಂತ್ರವಾಗಿದೆ, ನಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಹಾಗೂ ಸ್ವತಂತ್ರ ಸಮಾನತೆಯನ್ನು ಉಳಿಸಿಕೊಂಡು ಹೋಗಲು ಭಗತ್ ಸಿಂಗ್ ರವರ ಹೋರಾಟದ ಕಿಚ್ಚು ಹಾಗೂ ಆದರ್ಶಗಳು ಪಾಲಿಸಬೇಕಾಗಿದೆ ಎಂದು ಹೇಳಿದರು.

ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಸಂತೋಷ ಬಿ ಗೂಡುರ, ಕೇವಲ ಬಣ್ಣದ ಮಾತುಗಳಿಂದ ಜನರ ಮನಸ್ಸನ್ನು ಸೆಳೆಯುವ ಬೂಟಾಟಿಕೆ ನಾಯಕರು ನಮಗೆ ಬೇಕಿಲ್ಲ .ನುಡಿದಂತೆ ನಡೆಯುವ ಹಾಗೂ ದೇಶ ಪ್ರೇಮಿಗಳಾದ ಭಗತ್ ಸಿಂಗ್ ಆದರ್ಶವೂ ನಮ್ಮೆಲ್ಲರ ಜೀವನದಲ್ಲಿ ದಾರಿದೀಪವಾಗಿದೆ ಎಂದು ಹೇಳಿದರು. ನಮ್ಮ ದೇಶಕ್ಕೆ ನಿಜವಾದ ಸ್ವಾತಂತ್ರ್ಯ ದೊರೆತಿಲ್ಲ ಹಾಗೂ ಇನ್ನೂ ಸಹ ಜನರು ತಮ್ಮ ಹಕ್ಕುಗಳನ್ನು ಪಡೆಯಲು ಹಾಗೂ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು, ರಸ್ತೆಗಿಳಿದು ಹೋರಾಟ ಮಾಡುವುದು ಅನಿವಾರ್ಯವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಶ್ರೀಶೈಲ್ ಕಣದಾಳ ಭಾಗವಹಿಸಿದ್ದರು, ಹಾಗೂ ಸಂಸ್ಥೆಯ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಮಾಳಿಗೆ ಸೇರಿದಂತೆ ಉಪನ್ಯಾಸಕರಾದ ಬಸವರಾಜ್ ಹಾಗೂ ರೆಹೆಮಾನಿಸ, ಸೇರಿದಂತೆ- ವಿದ್ಯಾರ್ಥಿಗಳು ವಿದ್ಯಾರ್ಥಿನಿಯರು ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here