ಕಲಬುರಗಿ: ಡಾ. ರಾಜಕುಮಾರ್ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲಾ ಸಂಘದಿಂದ ಕೊಡಮಾಡುವ 2021- 22 ನೇ ಸಾಲಿನ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಸಂಗೀತ, ನೃತ್ಯ,ನಾಟಕ,ಮಿಮಿಕ್ರಿ, ಹಾಸ್ಯ ಹಾಗೂ ರಸಮಂಜರಿ ಕಾರ್ಯಕ್ರಮ ನಡೆಯಿತು.
ಪ್ರಶಸ್ತಿ ಪ್ರದಾನ ಮಾಡಿದ ಬಳಿಕ ಉದ್ಯಮಿಗಳು ಹಾಗೂ ಗಂಗಾಪರಮೇಶ್ವರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಅಮರೇಶ್ವರಿ ಬಾಬುರಾವ ಚಿಂಚನಸೂರ ಮಾತನಾಡಿ ಶಿಕ್ಷಕ ವೃತ್ತಿ ಪವಿತ್ರ,ಸಧ್ಯ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾಗಿದ್ದರಿಂದ ಇದಕ್ಕೆ ಪೂರಕವಾಗಿ ಶಿಕ್ಷಕರು ಹೊಸ ಜ್ಞಾನ ಸಂಪಾದಿಸಿಕೊಳ್ಳಬೇಕು.
ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಬೇಕು, ಶಿಕ್ಷಕರು ಪ್ರಶಸ್ತಿ-ಪುರಸ್ಕಾರಗಳಿಗೆ ಕೆಲಸ ಮಾಡದೆ ಕಾಯಕನಿಷ್ಠೆ ಸಮರ್ಪಣಾ ಮನೋಭಾವದಿಂದ ಸೇವೆ ಸಲ್ಲಿಸಬೇಕು.ಅಲ್ಲದೇ ಶಿಕ್ಷಕರು ನಿಜವಾದ ರಾಷ್ಟ್ರದ ಶಿಲ್ಪಿಗಳು, ಮಕ್ಕಳ ಭವಿಷ್ಯದ ನಿರ್ಮಾಪಕರು, ಶಿಕ್ಷಕರು ಕ್ರಿಯಾಶೀಲ ಚಿಂತನೆಗಳನ್ನು ಮೈಗೂಡಿಸಿಕೊಂಡು ಕಾರ್ಯನಿರ್ವಹಿಸಬೇಕು ಅಕ್ಷರಜ್ಞಾನದ ಜೊತೆಗೆ ಸಾಂಸ್ಕೃತಿಕ ಅರಿವು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವೇದಿಕೆ ಮೇಲೆ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ. ಸರ್ ಬಸವರಾಜ ಡೊಣ್ಣೂರ್, ಡಾ. ರಬಿಯಾ ಖಾನಮ, ಸುರೇಶ, ಬಡಿಗೇರ, ಶಂಕರ ಲಿಂಗ ಹೆಂಬಾಡಿ, ರಮೇಶ ಯಾಳಗಿ, ದತ್ತಪ್ಪ ಸಾಗನೂರ, ಬಸವರಾಜ ಕೊನೆಕ, ಡಾ. ಶರಣಬಸಪ್ಪ ವಡ್ಡನಕೇರಿ, ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಪ್ರಾಥಮಿಕ, ಪ್ರೌಢ ಹಾಗೂ ಪದವಿ ಹಂತದಲ್ಲಿ ಸೇವೆಸಲ್ಲಿಸುತ್ತಿರುವ 25 ಜನ ಶಿಕ್ಷಕರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಡಾ. ವನಿತಾ ಜಾದವ, ಡಾ. ಗೀತಾ ಮೋರೆ, ಕಾಶಿಬಾಯಿ ಹರಕಂಚಿ, ರಾಜೇಶ್ ಮುಗಳನಾಗಾoವ್, ರೂಪಾದೇವಿ, ಸಂತೋಷ್ ಕುಮಾರ್, ನಾಗಪ್ಪ ಗೋಗಿ, ನಾಗೇಶ್ ಬಚ್ಚಾ, ಸಿದ್ದಲಿಂಗ ಬಾಳಿ, ಚೆನ್ನಪ್ಪ ಶೆಟ್ಟರ್,ಸಂಜುಕುಮಾರ, ಕಾಶಿನಾಥಗೆ ರಾಜ್ಯ ಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಕರೋನ ವಾ ರಿಯರ್ಸ್ಗೆ ಸನ್ಮಾನಿಸಲಾಯಿತು.