ಅ.3ಕ್ಕೆ ಹೆಳವ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ 

0
16

ಯಾದಗಿರಿ: ಅಖಿಲ ಕರ್ನಾಟಕ ಹೆಳವ ಸಮಾಜ, ಜಿಲ್ಲಾ ಘಟಕದ ವತಿಯಿಂದ ಅ. 3 ರಂದು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ ಗೌರವಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೆಳವ ಸಮಾಜದ ಜಿಲ್ಲಾ ಸಂಘಟನಾಕಾರರು ತಿಳಿಸಿದ್ದಾರೆ.

ಉದ್ದೇಶದಿಂದ ಹಮ್ಮಿಕೊಂಡಿರುವ 2020-21ನೇ ಸಾಲಿನಲ್ಲಿ ನಡೆದ ಹತ್ತನೇ ತರಗತಿ ಮತ್ತು ದ್ವಿತೀಯ ಪಿ.ಯು.ಸಿ‌ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ‌ ಪಡೆದು, ಸಮುದಾಯದ ಕೀರ್ತಿ ಹೆಚ್ಚಿಸಿದ  ಅಲೆಮಾರಿ ಹೆಳವ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಸಮಾರಂಭ 03 ರಂದು ಬೆಳಿಗ್ಗೆ 10:30 ಘಂಟೆಗೆ ಸುರಪುರ ತಾಲುಕಿನ ಯಾಳಗಿ ಗ್ರಾಮದಲ್ಲಿ ಏರ್ಪಡಿಸಲಾಗಿದೆ.

Contact Your\'s Advertisement; 9902492681

ಕಾರ್ಯಕ್ರಮಕ್ಕೆ ಪ್ರತಿಭಾನ್ವಿತ ಮಕ್ಕಳು, ಪಾಲಕರು ಹಾಗೂ ಸಮಾಜದ ಭಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೋಳಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಮೊ.9731316822, 9448551320, 9448586382, 9686721324, 9900836221 ಸಂಪರ್ಕಿಸಲು ‌ಕೋರಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here