ಶಹಾಬಾದ:ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ರಾಜ್ಯ ಸರ್ಕಾರ ತಿರಸ್ಕರಿಸಬೇಕೆಂದು ಒತ್ತಾಯಿಸಿ ಗುರುವಾರ ತಾಲೂಕ ಬಂಜಾರ ಮೀಸಲಾತಿ ಸಂರಕ್ಷಣಾ ಸಮಿತಿ ಹಾಗೂ ಸಿದ್ಧರಾಮೇಶ್ವರ ಭೋವಿ ವಡ್ಡರ ಅಭಿವೃದ್ಧಿ ಸಂಘ, ಸಂಯುಕ್ತಾಶ್ರಯದಲ್ಲಿ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಪ್ರತಿಭಟನೆಯಲ್ಲಿ ಬಂಜಾರ ಸಮಾಜದ ಮುಖಂಡ ಚಂದು ಜಾಧವ, ಕುಮಾರ ಚವ್ಹಾಣ್, ಸುರಜ ರಾಠೋಡ, ಬಂಜಾರ ಮೀಸಲಾತಿ ಸಂರಕ್ಷಣಾ ಸಮಿತಿ ಸುನೀಲ ಚವ್ಹಾಣ್, ಕಿರಣ ಚವ್ಹಾಣ್, ಭೋವಿ ಸಮಾಜದ ಅಧ್ಯಕ್ಷ ಭೀಮರಾವ ಸಾಳುಂಕೆ ಮಾತನಾಡಿ, ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯು ಅತ್ಯಂತ ಅವೈಜ್ಞಾನಿಕವಾಗಿದೆ. ಈ ಆಯೋಗ ಮಾಡಿರುವ ವರದಿಯನ್ನು ರಾಜ್ಯ ಸರ್ಕಾರ ಅನುμÁ್ಠನಗೊಳಿಸಿದರೆ, ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿರುವ 101 ಜಾತಿಯ ಜನರಿಗೆ ಅನ್ಯಾಯವಾಗಲಿದೆ. ಸದಾಶಿವ ಆಯೋಗವು ಸಮೀಕ್ಷೆ ನಡೆಸಿದ ಸಂದರ್ಭದಲ್ಲಿ ವಾಸ್ತವವಾಗಿ ಸ್ಥಳ ಪರಿಶೀಲನೆ ನಡೆಸದೆ ಒಂದೇ ಸಮುದಾಯದ ವ್ಯಕ್ತಿಗಳಿಂದ ಎಲ್ಲಾ ಜಿಲ್ಲೆಗಳಲ್ಲೂ ಮಾಹಿತಿ ಪಡೆದು ವರದಿ ರಚಿಸಿದ್ದು, ಇದು ಅತ್ಯಂತ ಅವೈಜ್ಞಾನಿಕವಾಗಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ ಈ ವರದಿಯನ್ನು ಅನುμÁ್ಠನಗೊಳಿಸಬಾರದು ಎಂದು ಒತ್ತಾಯಿಸಿದರು.
ಒಂದು ವೇಳೆ ಈ ವರದಿ ಅನುಷ್ಠಾನಗೊಂಡರೆ ರಾಜ್ಯಾದ್ಯಂತ ಉಗ್ರವಾಗಿ ಹೋರಾಟ ಮಾಡಲಾಗುವುದು ಹಾಗೂ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ನಗರದ ರೈಲ್ವೆ ನಿಲ್ದಾಣದಿಂದ ತಹಸೀಲ್ದಾರ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಉಪತಹಶೀಲ್ದಾರ ಮಲ್ಲಿಕಾರ್ಜುನ ರೆಡ್ಡಿ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಬಂಜಾರ ಮೀಸಲಾತಿ ಸಂರಕ್ಷಣಾ ಸಮಿತಿ ಸುನೀಲ ಚವ್ಹಾಣ್, ಕಿರಣ ಚವ್ಹಾಣ್, ಗ್ರಾಮ ಪಂಚಾಯತಿ ಉಪಾಧ್ಯಕ್ಷ ಯಶವಂತ ಚವ್ಹಾಣ್, ಸದಸ್ಯ ಧನ್ನು ರಾಠೋಡ, ಭಾರತ ರಾಠೋಡ, ಸಂತೋಷ ಪವಾರ, ಕಿಶನ ನಾಯಕ, ಶಂಕರ ಮಾರವಾಡಿ, ಗೋಪಾಲ ರಾಠೊಡ, ಭಾರತ ರಾಠೋಢ, ರವಿ ರಾಠೋಡ, ವಿಶ್ವನಾಥ ರಾಠೋಡ, ಪರಶುರಾಮ ರಾಠೋಡ, ನೂರಸಿಂಗ ರಾಠೋಡ, ವಾಲು ಪವಾರ, ನರಸಿಂಗ ರಾಠೋಡ, ಚಂದರ ನಾಯಕ, ರವಿ ಬಿಲ್ಲು, ರವಿ ರಾಠೋಡ, ನಿಲೇಶ ರಾಠೋಡ, ರವಿ ಚವ್ಹಾಣ್,
ಭೋವಿ ಸಮಾಜದ ಮುಖಂಡರಾದ ದೇವದಾಸ ಜಾಧವ, ರಾಮು ಕುಸಾಳೆ, ಶಂಕರ ಕುಸಾಳೆ, ಸಿದ್ರಾಮ ಕುಸಾಳೆ, ಸಂಜಯ ವಿಟ್ಕರ್, ರಾಮು ನಿಡಗುಂದಿ, ದೀಪಕ ಚೌಧರಿ, ರಾಕೇಶ ಪವಾರ, ಶ್ರೀನಿವಾಸ ನೇದಲಗಿ, ಶ್ರೀನಿವಾಸ ದೇವಕರ್, ಹಾಗೂ ಬಂಜಾರ ಹಾಗೂ ಭೋವಿ ಸಮಾಜದ ಮುಖಂಡರು ಪಾಲ್ಗೊಂಡಿದರು.