ಜೇವರ್ಗಿ: ಪಟ್ಟಣಕ್ಕೆ ಆಗಮಿಸಿದ ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿಯವರಿಗೆ ತಳವಾರ ಸಮುದಾಯದ ಮುಖಂಡರು ಸನ್ಮಾನಿಸಿ ಮನವಿ ಸಲ್ಲಿಸಿದರು.
ತಳವಾರ ಮತ್ತು ಪರಿವಾರ ಸಮುದಾಯದ ಜನರಿಗೆ ಕೂಡಲೇ ಎಸ್ ಟಿ ಪ್ರಮಾಣ ಪತ್ರ ನೀಡಬೇಕು, ಎಂದು ಕೇಂದ್ರಸರ್ಕಾರ ದಿನಾಂಕ 19/03/2020 ರಂದು ಗೆಜೆಟ್ನೋಟಿಫಿಕೇಶನ್ ಹೊರಡಿಸಿದೆ .ಮತ್ತು ದಿನಾಂಕ 28/05/2020 ರಂದು ರಾಜ್ಯ ಸರ್ಕಾರ ನೋಟಿಫಿಕೇಶನ್ ಹೊರಡಿಸಿದರು ಇಲ್ಲಿಯವರೆಗೂ ನೀಡಿರುವದಿಲ್ಲ. ಅಲ್ಲದೆ ಬಹುತೇಕ ನಾಡ ಕಚೇರಿಗಳಲ್ಲಿ ಅರ್ಜಿಗಳು ಸ್ವೀಕೃತಿಗೊಂಡರು ತಹಸೀಲ್ದಾರರು ಯಾವದೇ ಸ್ಥಳ ಮಹಜರು ಮಾಡಿಲ್ಲ ,ಕೇಳಿದರೆ ನೀವು ಈ ಜಾತಿಗೆ ಒಳಪಡುವದಿಲ್ಲ ಎಂದು ಹೇಳಿ ಈಲ್ಲಿಯವರೆಗೆ ಪ್ರಮಾಣ ಪತ್ರ ಕೊಡದೆ ದ್ರೋಹ ಬಗೆಯುತ್ತಿದ್ದಾರೆ.
ಸೆ. 23ಕ್ಕೆ ತಳವಾರ ಸಮುದಾಯದವರಿಗೆ ಶೀಘ್ರವಾಗಿ ಎಸ್ ಟಿ ಪ್ರಮಾಣ ಪತ್ರ ನೀಡಬೇಕು ಎಂದು ತಾವು ಬರೆದ ಪತ್ರದಿಂದ ನಮಗೆ ಆಶಾ ಬಾವನೆ ಮೂಡಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಸುತ್ತೋಲೆ ಇದ್ರು ಕೂಡ ಅಧಿಕಾರಿಗಳು ಅಸಹಾಯಕ ದೋರಣೆಯಿಂದ ನಾವು ರೋಷಿ ಹೋಗಿದ್ದೇವೆ ಆದರಿಂದ ಎಸ್ ಟಿ ಪ್ರಮಾಣ ಪತ್ರ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಹಾಗೂ ತಹಸೀಲ್ದಾರರಿಗೆ ಆದೇಶಿಸಿ ಎಂದು ಈ ಸಂದರ್ಭದಲ್ಲಿ ಸಚಿವರ ತಿಳಿಸಲಾಯಿತು.
ಮಾಜಿ ಶಾಸಕರಾದ ದೊಡ್ಡಪ್ಪಗೌಡ ಪಾಟೀಲ, ರೇವಣಸಿದ್ಧಪ್ಪಗೌಡ ಕಮಾನಮನಿ ,ವಸಂತ ನರಿಬೋಳ ,ಮಲ್ಲೇಶಿಗೌಡ ಮಲ್ಲೇದ ,ಮೈಲಾರಿ ಗುಡುರ ಹಳ್ಳೆಪ್ಪ ನಾಟಿಕಾರ, ಭೀಮರಾಯ ಜನಿವಾರ, ಸರ್ದಾರ್ ರಾಯಪ್ಪ, ದೇವಿಂದ್ರ ಚಿಗರಳ್ಳಿ, ಸಿದ್ದನಗೌಡ ಬಿರಾದಾರ ,ನರಸಪ್ಪ ತಣಕೆದಾರ್, ಸಂತೋಷ್ ಪಾಟೀಲ್, ಮರೆಪ್ಪ ಕೊಳಕುರ್ ಬಸವರಾಜ ನೈಕೋಡಿ ರಾಜೇಂದ್ರ ರಾಜವಾಳ ಮನೋಹರ್ ಕಾಮನಕೇರಿ, ರಾಮು ಚನ್ನೂರ್ ಮುಂತಾದವರು.