ಮೂಲಭೂತ ಸೌಕರ್ಯ ಕಲ್ಪಿಸಲು ಕನ್ನಡ ಭೂಮಿ ಜಾಗೃತಿ ಸಮಿತಿ ವತಿಯಿಂದ ಪ್ರತಿಭಟನೆ

0
17

ಕಲಬುರಗಿ: ನಗರದ ವಾರ್ಡ್ ಸಂಖ್ಯೆ 48 ರಲ್ಲಿ ಬರುವ ಜಯನಗರ ಹಾಗೂ ಸುತ್ತಮುತ್ತಲಿನ ಬಡಾವಣೆಗಳ ಅಭಿವೃದ್ಧಿ ಕೆಲಸಗಳು ಕೈಗೊಳ್ಳಬೇಕು ಎಂದು ಆಗ್ರಹಿಸಿ ಇಂದು ಕನ್ನಡ ಭೂಮಿ ಜಾಗೃತಿ ಸಮಿತಿ ವತಿಯಿಂದ ಮಹಾನಗರ ಪಾಲಿಕೆ ಎದುರು ಪ್ರತಿಭಟನೆ ನಡೆಸಲಾಯಿತು.

ಜಯನಗರ ಸೇರಿದಂತೆ ಪ್ರಶಾಂತ ನಗರ, ಬನಶಂಕರಿ ಬಡಾವಣೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆ ಹೆಚ್ಚಾಗಿ ಮನೆಗಳಿಗೆ, ಕಟ್ಟಡಗಳಿಗೆ ನೀರು ನುಗ್ಗಿದೆ.ಇದರಿಂದ ಜನರಿಗೆ ತೊಂದರೆಯಾಗುತ್ತಿದೆ. ಕಟ್ಟಡಗಳಿಗೆ ಹಾನಿಯಾಗಿದೆ.ಇನ್ನು ಖಾಲಿ ನಿವೇಶನಗಳಲ್ಲಿ ಅಪಾರ ಪ್ರಮಾಣದ ನೀರು ನಿಂತು ಗಿಡ ಗಂಟಿಗಳು ಬೆಳೆಯುವುದರ ಜೊತೆಗೆ ಸೊಳ್ಳೆಗಳ ಕಾಟ ವಿಪರೀತವಾಗಿದೆ, ಸಣ್ಣ ಮಕ್ಕಳು ಸೇರಿದಂತೆ ಅನೇಕರಿಗೆ ಡೆಂಗ್ಯೂ ಮಹಾಮಾರಿ ಕಾಣಿಸಿಕೊಂಡಿದೆ.

Contact Your\'s Advertisement; 9902492681

ನಿಜಲಿಂಗಪ್ಪ ದಂತ ಕಾಲೇಜು ಎದುರಿನ ಪ್ರದೇಶದಲ್ಲಿ ನೀರು ಹರಿದು ಹೋಗಲು ಸರಿಯಾದ ಚರಂಡಿ ವ್ಯವಸ್ಥೆ ಇಲ್ಲ. ಬಿಲಗುಂದಿ ವೃತ್ತದಿಂದ ಶಹಾಬಾದ್ ವರ್ತುಲ ರಸ್ತೆ ವರೆಗೆ ರಾದ ಕಾಲುವೆ ನಿರ್ಮಾಣ ಮಾಡಬೇಕು.ಇನ್ನು ಬಡಾವಣೆಯಲ್ಲಿ ರಸ್ತೆಗಳು ಕೆಟ್ಟಿವೆ.ದುರಸ್ತಿ ಕಾರ್ಯ ಕೈಗೊಳ್ಳಬೇಕು.ಸೊಳ್ಳೆ ನಿಯಂತ್ರಣಕ್ಕೆ ಫಾಗಿಂಗ್ ಮಾಡಬೇಕು ಎಂದು ಆಗ್ರಹಿಸಿ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಸಮಿತಿ ಅಧ್ಯಕ್ಷ ಲಿಂಗರಾಜ ಸಿರಗಾಪೂರ, ಜಿಲ್ಲಾ ಅಧ್ಯಕ್ಷ ಪ್ರಶಾಂತ ತಂಬೂರಿ, ಗುರುರಾಜ ಕುಲಕರ್ಣಿ ರೇವೂರ, ಗುರುಲಿಂಗಪ್ಪ ಟೆಂಗಳಿ, ಸೂರ್ಯಕಾಂತ ಬಾಲಕೊಂದೆ, ಶರಣು ಇಕ್ಕಳಕೀಮಠ, ಬಾಬಾ ಫಕ್ರುದ್ದೀನ್,ವಿರೇಶ ದಂಡೋತಿ, ವಿನೋದ್ ಪಾಟೀಲ್, ಬಸವರಾಜ ಅನ್ವರಕರ ಸೇರಿದಂತೆ ಅನೇಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here