ಸುರಪುರ: ಮಹಾತ್ಮ ಗಾಂಧಿ ಜಯಂತಿ ಹಾಗು ಲಾಲ್ ಬಹಾದ್ಧೂರ್ ಶಾಸ್ತ್ರಿಯವರ ಜಯಂತಿ ಅಂಗವಾಗಿ ನಗರಸಭೆ ಕಾರ್ಯಾಲಯ ಸುರಪುರ ಹಾಗು ಮದರ ತೇರೆಸಾ ಗ್ರಾಮೀಣ ಅಭೀವೃಧ್ಧಿ ಶಿಕ್ಷಣ ಸಂಸ್ಥೆ ವತಿಯಿಂದ ೨೦೨೧-೨೨ ನೇ ಸಾಲಿನ ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ಸ್ವಚ್ಛ ಭಾರತ ಆಂದೋಲನ ಕುರಿತು ಜನ ಜಾಗೃತಿ ಆಂದೋಲನ ಹಾಗು ಬೀದಿ ನಾಟಕದ ಮೂಲಕ ಜಾಗೃತಿ ಮೂಡಿಸಲಾಯಿತು.
ನಗರದ ಮಹಾತ್ಮ ಗಾಂಧಿ ವೃತ್ತ,ಬಸ್ ನಿಲ್ದಾಣ ಹಾಗು ತಿಮ್ಮಾಪುರ ಸೇರಿದಂತೆ ಮತ್ತಿತರೆ ಕಡೆಗಳಲ್ಲಿ ಬೀದಿ ನಾಟಕ ಪ್ರದರ್ಶನ ನಡೆಸಲಾಯಿತು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷರಾದ ಸುಜಾತಾ ವೇಣುಗೋಪಾಲ ನಾಯಕ ಜೇವರ್ಗಿ,ಉಪಾಧ್ಯಕ್ಷ ಮಹೇಶ ಪಾಟೀಲ್ ಹಾಗು ಸದಸ್ಯರಾದ ನರಸಿಂಹಕಾಂತ ಪಂಚಮಗಿರಿ,ಶಕೀಲ್ ಅಹ್ಮದ್,ಮೌಲಸಾಬ್,ನಾಸೀರ ಕುಂಡಾಲೆ ಹಾಗು ನಗರಸಭೆ ಪೌರಾಯುಕ್ತ ಜೀವನ್ಕುಮಾರ ಕಟ್ಟಿಮನಿ ಸೇರಿದಂತೆ ಎಲ್ಲಾ ಸದಸ್ಯರು ಹಾಗು ಅನೇಕ ಜನ ಸಾರ್ವಜನಿಕರು ಭಾಗವಹಿಸಿದ್ದರು.ಇದೇ ಸಂದರ್ಭದಲ್ಲಿ ಸ್ವಚ್ಛತೆ ಕುರಿತು ಬೀದಿ ನಾಟಕ ಪ್ರದರ್ಶನ ಜರುಗಿತು.